ನಾದೌನ್‌ನಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಭರ್ಮೊತಿ ಹಳ್ಳಿಯಲ್ಲಿರುವ ಪೀರ್-ಸಾಹೇಬ್ ಸಮಾಧಿ. ಇತಿಹಾಸದ ಪ್ರಕಾರ, ಇಲ್ಲಿನ ಜನಪ್ರಿಯ ಸಂತರಾದ ಸೈ ಫಜಲ್ ಶಾಹ್ ಅವರು ತಮ್ಮ ಹಲವು ಪವಾಡಗಳಿಂದಾಗಿ ಜನಪ್ರಿಯರಾಗಿದ್ದರು. ಈ ಸ್ಮಾರಕವನ್ನು ಅವರ ನೆನಪಿಗಾಗಿ ಕಟೋಚ್ ರಾಜ ಸಂಸಾರ್ ಚಂದ್ ನಿರ್ಮಿಸಿದ್ದ. ಈ ರಾಜನೂ ಕೂಡಾ ಸಂತರ ಪವಾಡಗಳಿಗೆ ಮರುಳಾಗಿದ್ದ.
ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾಘ ಮಾಸದಂದು ಅಥವಾ ಫೆಬ್ರುವರಿ 2 ರಂದು ಅವರ ನೆನಪಿಗಾಗಿ ಬೃಹತ್ ಪ್ರಮಾಣದ ಭಂಡಾರವನ್ನು ತೆರೆಯಲಾಗುತ್ತದೆ ಅಂದರೆ ಊಟವನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಕುಸ್ತಿಯೂ ಕೂಡಾ ನಡೆಯುತ್ತದೆ.