ಜೋಂಗಕುಲ್ ಆಶ್ರಮವು ಪದಂ- ಕಿಶ್ತವಾರ್ ಟ್ರೆಕ್ಕಿಂಗ್ ಮಾರ್ಗದಲ್ಲಿ ತೆರಳುವಾಗ ಸಿಗುತ್ತದೆ. ಇದನ್ನು ವಿಶಿಷ್ಟವಾಗಿ ಗುಹೆಯಲ್ಲಿ ನಿರ್ಮಿಸಲಾಗಿದೆ. ಏಟಿಂಗ್ ಜಾರ್ಜ್ ಎಂಬಲ್ಲಿ ಇದಿದೆ. ಭಾರತೀಯ ಯೋಗ ಗುರು ನರೋಪಾ ಅವರೊಂದಿಗೆ ಈ ಆಶ್ರಮದ ಹೆಸರು ಬೆರೆತಿದೆ. ತಮ್ಮ ಕಾಲಮಾನದಲ್ಲಿ ನರೋಪಾ ಅವರು ಧ್ಯಾನ ಮಾಡಿದ್ದ ಎರಡು ಗುಹೆಯನ್ನು ಬಳಸಿ ಈ ಆಶ್ರಮ ನಿರ್ಮಿಸಲಾಗಿದೆ. ಗುಹೆಯ ಗೋಡೆಗಳು ಅತ್ಯಂತ ಪ್ರಾಚೀನ ಚಿತ್ರಕಲೆಯಿಂದ ಅಲಂಕೃತವಾಗಿವೆ. ಅಲ್ಲದೇ ಆ ಕಾಲದ ಚಿತ್ರಕಲೆಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿವೆ.