ದೂದ್ ಗಂಗಾ ನದಿಗೆ ಪ್ರಮುಖ ಸೆಲೆ ತಾತಾ ಕುಟ್ಟಿಯಲ್ಲಿದೆ. ಸಮುದ್ರ ಮಟ್ಟದಿಂದ 15,500 ಅಡಿ ಎತ್ತರದಲ್ಲಿ ಈ ತಾಣವಿದೆ. ಝೀಲಮ್ ನದಿಗೆ ಈ ಉಪನದಿಯು ಸೇರುತ್ತದೆ. ಈ ತೊರೆ ಟ್ರೌಟ್ ಮೀನುಗಳಿಗೆ ಹೆಸರುವಾಸಿ. ಯೂಸ್ಮಾರ್ಗ್‌ನಿಂದ ಇಲ್ಲಿಗೆ ಪ್ರಯಾಣಿಸಬಹುದು. ಕಿಲೋಮೀಟರು ದೂರದಲ್ಲೇ ಇರುವ ಯೂಸ್ಮಾರ್ಗ್‌ಗೆ ನಡೆದುಕೊಂಡು ಅಥವಾ ಪೋನಿ ರೈಡಿಂಗ್ ಮೂಲಕವೂ ತಲುಪಬಹುದು.