ಪೀರ್ ಚತ್ತೇರಷಾ ಧಾರ್ಮಿಕ ಕೇಂದ್ರ ಕತುವಾ ಜಿಲ್ಲೆಯ ಪರೋಲ್ ಗ್ರಾಮದಲ್ಲಿದ್ದು, ಕತುವಾದಿಂದ 13 ಕಿ.ಮೀ ದೂರದಲ್ಲಿದೆ. ನಗ್ರಿ ಪರೋಲ್ ಎಂದೇ ಪ್ರಸಿದ್ದಿ ಪಡೆದಿರುವ ಈ ದೇವಸ್ಥಾನದ ಬಳಿಯಲ್ಲಿ ನೀರಿನ ತೊರೆಯೊಂದು ಹರಿದಿದೆ. ಇಲ್ಲಿನ ನೀರಿಗೆ ಔಷಧೀಯ ಶಕ್ತಿಯಿದ್ದು ಚರ್ಮಕ್ಕೆ ಬರುವ ಹಲವಾರು ಕಾಯಿಲೆ ಕಸಾಲೆಯನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.