ಮಾತಾ ಸುಂದ್ರಿಕೋಟ್ ಪುರಾತನ ದೇವಸ್ಥಾನ. ಶಿವಾಲಿಕ ಪರ್ವತದ ಮಧ್ಯದಲ್ಲಿ ಈ ದೇವಸ್ಥಾನವಿದ್ದು ಸಮುದ್ರಮಟ್ಟದಿಮದ 1000ಮೀ ಎತ್ತರದಲ್ಲಿ ನೆಲೆಸಿದ್ದು ಕತುವಾ ಜಿಲ್ಲೆಯಲ್ಲಿದೆ. ಇದು ಕತುವಾದಿಂದ 22 ಕಿಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ತಲುಪಲು ಭಕ್ತರು 107 ಮೆಟ್ಟಿಲುಗಳನ್ನು ಹತ್ತಬೇಕು.
ಸ್ಥಳೀಯ ಜನರ ಹೇಳುವಂತೆ ಈ ದೇವಸ್ಥಾನದ ದೇವತೆಯ ಮೂರ್ತಿಯು ದೇಗುಲದ ಬಳಿಯಿರುವ ಬೆರ್ರಿ ಗಿಡದ ಬುಡದಲ್ಲಿ ದೊರಕಿತ್ತು. ನಂತರ ಅದನ್ನು ದೇವಸ್ಥಾನದ ಒಳಗಿಟ್ಟು ಪೂಜೆ ಮಾಡಲು ಪ್ರಾರಂಭಿಸಲಾಯಿತು.