Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ರಘುನಾಥ್ ದೇವಸ್ಥಾನ

ರಘುನಾಥ್ ದೇವಸ್ಥಾನ, ಜಮ್ಮು

2

ಜಮ್ಮುವಿನ ಹಿಂದಿನ ರಾಜರುಗಳಾದ ಮಹಾರಾಜ ರಣಬೀರ್ ಸಿಂಗ್ ಮತ್ತು ಅವರ ತಂದೆ ಮಹಾರಾಜ ಗುಲಾಬ್ ಸಿಂಗ್ ಅವರಿಂದ ನಿರ್ಮಿಸಲಾದ ರಘುನಾಥ್ ದೇವಾಲಯ, ಜಮ್ಮು ಪ್ರದೇಶದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ. ದೇವಸ್ಥಾನದ ನಿರ್ಮಾಣ 1851 ರಲ್ಲಿ ಪ್ರಾರಂಭವಾಗಿ ಮತ್ತು 1857 ರಲ್ಲಿ ಕೊನೆಗೊಂಡಿತು. ಈ ದೇವಾಲಯದ ಸಂಕೀರ್ಣದಲ್ಲಿ ರಣಬೀರೇಶ್ವರ ದೇವಸ್ಥಾನ ಮತ್ತು ಪಂಜಬಟ್ಕರ್ ದೇವಾಲಯ ಅತ್ಯಂತ ಆಕರ್ಷಣೀಯವಾಗಿದೆ.

ಏಳು ಐತಿಹಾಸಿಕ ದೇವಾಲಯಗಳು ರಘುನಾಥ್ ದೇವಾಲಯದ ಸ್ಥಳದಲ್ಲಿಯೇ ಇದೆ. ಈ ದೇವಾಲಯದಲ್ಲಿ ಪ್ರಧಾನವಾಗಿ ಸೂರ್ಯ ದೇವರು, ನಾಶ ದೇವ ಶಿವ ಮತ್ತು ಸಂರಕ್ಷಣೆಯ ದೇವ ವಿಷ್ಣುವಿನ ವಿವಿಧ ಅವತಾರಗಳನ್ನು ಕಾಣಬಹುದು. ದೇವಾಲಯದ ಗುಡಿ, ಕಮಾನುಗಳು ಮತ್ತು ರಘುನಾಥ್ ದೇವಾಲಯದ ಮೇಲ್ಮೈ ಮೊಘಲ್ ವಾಸ್ತುಶಿಲ್ಪ ಶೈಲಿಯನ್ನು ಪ್ರದರ್ಶಿಸುತ್ತದೆ. ಹಿಂದೂ ವಾನರ ದೇವ, ಹನುಮಾನ್ ಪ್ರತಿಮೆ ಮತ್ತು ರಾಜ ರಣಬೀರ್ ನ ಚಿತ್ರವನ್ನು ಪ್ರವೇಶದ್ವಾರದಲ್ಲಿ ಕಾಣಬಹುದು. ರಘುನಾಥ್ ದೇವಾಲಯದ ಚಿನ್ನದ ಲೇಪಿತ ಒಳಾಂಗಣವು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

ರಘುನಾಥ್ ದೇವಾಲಯ, ಶಿವನ ಸಂಕೇತ 'ಲಿಂಗಗಳ' ಜೊತೆಗೆ  ವಿವಿಧ ಹಿಂದೂ ದೇವರುಗಳ ಮತ್ತು ದೇವತೆಗಳ ಹಲವಾರು ದೊಡ್ಡ ವಿಗ್ರಹಗಳನ್ನು ಹೊಂದಿದೆ. ಅತ್ಯಂತ ಹತ್ತಿರದಿಂದ ವೀಕ್ಷಿಸಿದಾಗ, ದೇವಾಲಯದ ಗೋಡೆಗಳು ತಮ್ಮ ಮೇಲ್ಮೈ ಮೇಲಿನ ಪವಿತ್ರ ಶಾಸನಗಳನ್ನು ಬಹಿರಂಗಪಡಿಸುತ್ತವೆ.

ದೇವಾಲಯದಲ್ಲಿ ಒಂದು ಸಂಸ್ಕೃತ ಗ್ರಂಥಾಲಯವಿದ್ದು, ಅದರಲ್ಲಿ ಪ್ರಾಚೀನ ಪುಸ್ತಕಗಳು ಮತ್ತು ಹಸ್ತಪ್ರತಿಗಳ ಅಪರೂಪದ ಸಂಗ್ರಹವನ್ನು ಕಾಣಬಹುದು. ಆದ್ದರಿಂದ ಲಕ್ಷಾಂತರ ಭಕ್ತರು ಮಾತ್ರವಲ್ಲದೆ ಲಕ್ಷಾಂತರ ಇತಿಹಾಸಕಾರರೂ ಕೂಡ ಈ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಹೊಗಳುತ್ತಾರೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat