Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಡೋಗ್ರಾ ಆರ್ಟ್ ಮ್ಯೂಸಿಯಂ

ಡೋಗ್ರಾ ಆರ್ಟ್ ಮ್ಯೂಸಿಯಂ, ಜಮ್ಮು

0

ಡೋಗ್ರಾ ಆರ್ಟ್ ಮ್ಯೂಸಿಯಂ ಮುಬಾರಕ್ ಮಂಡಿ ಕಾಂಪ್ಲೆಕ್ಸ್ ನಲ್ಲಿರುವ ಜನಪ್ರಿಯ ಕಲಾ ಭಂಡಾರವಾಗಿದೆ. ಪಿಂಕ್ ಹಾಲ್ ನಲ್ಲಿರುವ 800 ಕ್ಕೂ ಹೆಚ್ಚು ಅಪರೂಪದ ಲೇಖನಗಳು ಮತ್ತು ವರ್ಣಚಿತ್ರಗಳನ್ನು ಇದು ಹೊಂದಿದೆ. ಇವುಗಳಲ್ಲಿ ವಿವಿಧ ಶಾಲೆಗಳು, ಕಾಂಗ್ರಾ, ಬಶೋಲಿ ಮತ್ತು ಜಮ್ಮುಗೆ ಸೇರಿರುವ ಹಲವಾರು ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಡೋಗ್ರಾ ಆರ್ಟ್ ಮ್ಯೂಸಿಯಂನ ಪ್ರಧಾನ ಆಕರ್ಷಣೆ ಮೊಘಲ್ ಚಕ್ರವರ್ತಿ ಷಹ ಜಹಾನ್ ಗೆ ಸೇರಿದ್ದ ಚಿನ್ನದ ಬಣ್ಣದ ಬಿಲ್ಲು ಮತ್ತು ಬಾಣ. ಇದಲ್ಲದೆ, ಹಲವಾರು ಮರಗೆಲಸದ ಸಾಧನಗಳು ಈ ಸಂಗ್ರಹಾಲಯದ ಜನಪ್ರಿಯ ಲಕ್ಷಣವಾಗಿದೆ. ಜೊತೆಗೆ, ಸಿಕಂದರ್ ನಾಮಾ  ಮತ್ತು ಷಹನಾಮಾದ ಪರ್ಷಿಯನ್ ಭಾಷೆಯ ಕೈ ಬರಹದ ಆವೃತ್ತಿಗಳನ್ನು ಡೋಗ್ರಾ ಆರ್ಟ್ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ.

ಪಹಾರಿ ಸ್ಕೂಲ್ ಆಫ್ ಆರ್ಟ್ ಗೆ ಸೇರಿದ ಸಣ್ಣ ವರ್ಣಚಿತ್ರಗಳು ಈ ಸಂಗ್ರಹಾಲಯದ ಅಮೂಲ್ಯವಾದ ಸಂಗ್ರಹಣೆಗಳಲ್ಲಿ ಕೆಲವು. ಈ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ದಾಖಲೆಗಳನ್ನು ಸಂರಕ್ಷಿಸಿಡಲಾಗಿದೆ. ಆದ್ದರಿಂದ ಈ ವಸ್ತು ಸಂಗ್ರಹಾಲಯವು ಪ್ರವಾಸಿಗರನ್ನು ಹೊರತುಪಡಿಸಿ ಸಂಶೋಧಕರು, ಲಲಿತಕಲೆಗಳ ವಿದ್ಯಾರ್ಥಿಗಳು ಮತ್ತು ಪಂಡಿತರು ಭೇಟಿ ಮಾಡಬಹುದಾದಂತಹ ಒಂದು ಪರಿಪೂರ್ಣ ತಾಣವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue