Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಾಲ » ಹವಾಮಾನ

ಅಂಬಾಲ ಹವಾಮಾನ

ಅಂಬಾಲ ನಗರವನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭೇಟಿ ನೀಡುವುದು ಸೂಕ್ತ, ಆ ಸಮಯದಲ್ಲಿ ಮಳೆಗಾಲ ಮುಗಿದಿರುತ್ತದೆ. ಅಂಬಾಲ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲೊಂದು. ಇದರ ಭೌಗೋಳಿಕ ಆಕೃತಿಯಿಂದಾಗಿ ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಚಂಢೀಗಡ ಕೇಂದ್ರಾಡಳಿತ ಪ್ರದೇಶಕ್ಕೆ ನಿರಾಸದಾಯಕವಾಗಿ ತಲುಪಬಹುದಾಗಿದೆ.

ಬೇಸಿಗೆಗಾಲ

ಅಂಬಾಲದಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಉಷ್ಣಾಂಸ 45 ಡಿಗ್ರಿಯವರೆಗೆ ಏರುತ್ತದೆ. ಕಮ್ಮಿ ಉಷ್ಣಾಂಸವೆಂದರೆ 35 ಡಿಗ್ರಿಯವರೆಗಿರುತ್ತದೆ. ಅಂಬಾಲದಲ್ಲಿ ಅತಿ ಹೆಚ್ಚು ಸೆಖೆ ಇರುವ ತಿಂಗಳೆಂದರೆ ಮೇ. ಹಾಗಾಗಿ ಈ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

ಅಂಬಾಲದಲ್ಲಿ ಮಳೆಗಾಲ ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗಿರುತ್ತದೆ. ಈ ಸಮಯದಲ್ಲಿ ಭಾರೀ ಮಳೆಯಾಗುತ್ತದೆ ಮತ್ತು ಉಷ್ಣಾಂಸ ದಲ್ಲಿ ಏರುಪೇರಾಗುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಮತ್ತು ವಾತಾವರಣ ಈ ಸಮಯದಲ್ಲಿ ಆಹ್ಲಾದಕರವಾಗಿರುತ್ತದೆ.

ಚಳಿಗಾಲ

ಅಂಬಾಲದಲ್ಲಿ ಚಳಿಗಾಲ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ಸಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯ ಉಷ್ಣಾಂಸ ನಾಲ್ಕರಿಂದ ಏಳು ಡಿಗ್ರಿಯವರೆಗಿರುತ್ತದೆ.