Search
 • Follow NativePlanet
Share
ಮುಖಪುಟ » ಸ್ಥಳಗಳು» ಯಮುನಾ ನಗರ

ಯಮುನಾ ನಗರ : ಪ್ರಕೃತಿಯ ಸಮ್ಮಿಲನ

6

ಯಮುನಾ ನಗರವು ಸ್ವಚ್ಛ ಮತ್ತು ಸಮೃದ್ಧ ಕೈಗಾರಿಕಾ ನಗರ. ಇದು ಇಲ್ಲಿನ ಪ್ಲೈವುಡ್ ಘಟಕಗಳಿಗೆ ಪ್ರಸಿದ್ಧವಾದುದು. ಇದು ಹರಿಯಾಣದಲ್ಲಿದ್ದು ಯಮುನಾ ನದಿಗೆ ಹತ್ತಿರದಲ್ಲಿದೆ. ಇತ್ತೀಚೆಗೆ ವೇಗವಾಗಿ ನಡೆಯುತ್ತಿರುವ ನಗರೀಕರಣದಿಂದಾಗಿ ಯಮುನಾ ನಗರವು ಪರಿಸರ ಮಾಲಿನ್ಯದ ಸಮಸ್ಯೆಗಳನ್ನು ಎದುರಿಸುತ್ತಿದೆ. ಉತ್ತರ ಪ್ರದೇಶದ ಸಹರಣಪುರವು ಇದರ ಪೂರ್ವದ ಗಡಿಪ್ರದೇಶ.

ಈ ನಗರದ ಉತ್ತರದಲ್ಲಿ ಬೆಟ್ಟಗಳಿದ್ದು ಕಾಡು ಮತ್ತು ಝರಿಗಳನ್ನು ಕೂಡ ಕಾಣಬಹುದು. ಇಲ್ಲಿ ಯಮುನಾ ನದಿಯು ಬೆಟ್ಟಗಳಿಂದ ಇಳಿದು ಬಯಲಿನಲ್ಲಿ ಹರಿಯುವುದನ್ನು ನೋಡಬಹುದು. ಯಮುನಾ ನಗರದ ಉತ್ತರಕ್ಕೆ ಹಿಮಾಚಲ ಪ್ರದೇಶದ ಸಿರಮೌರ್ ಇದೆ. ಅಂಬಾಲ, ಕುರುಕ್ಷೇತ್ರ ಮತ್ತು ಕರ್ನಾಲ್ಗಳು ಇದರ ಪಶ್ಚಿಮ ಮತ್ತು ದಕ್ಷಿಣಕ್ಕಿವೆ.

ಯಮುನಾ ನಗರಕ್ಕೆ ಐತಿಹಾಸಿಕ ಮಹತ್ವವಿದೆ. 1947ರಲ್ಲಿ ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದ ನಿರಾಶ್ರಿತರಿಗೆ ಇದು ಆಶ್ರಯವನ್ನು ನೀಡಿದೆ. ಮೊದಲಿಗೆ ಇದನ್ನು ‘ಅಬ್ದುಲ್ಲಾಪುರ’ ಎಂದು ಕರೆಯಲಾಗುತ್ತಿತ್ತು ಮತ್ತು ಇಲ್ಲಿ 6000 ಮಂದಿ ನಿರಾಶ್ರಿತರಿದ್ದರು. ಹರಿಯಾಣದ ಈ ಭಾಗದಲ್ಲಿ ಪುರಾತತ್ವ ಇಲಾಖೆಯವರು ಸರ್ವೇ ಮಾಡಿದಾಗ ಹರಪ್ಪ ನಾಗರೀಕತೆಗೆ ಸೇರಿದ ಕಲ್ಲುಗಳು ಮತ್ತು ಇಟ್ಟಿಗೆಗಳು ಸಿಕ್ಕಿವೆ.

ಯಮುನಾ ನಗರದಲ್ಲಿ ಹಿಂದಿ, ಪಂಜಾಬಿ ಮತ್ತು ಬಂಗ್ರು ಭಾಷೆಗಳನ್ನು ಮಾತನಾಡುತ್ತಾರೆ. ಹರಿಯಾಣದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳನ್ನು ನೀಡುತ್ತಿರುವ ನಗರಗಳಲ್ಲಿ ಇದು ಮುಂಚೂಣಿಯಲ್ಲಿದೆ. ಇಲ್ಲಿ ಶೈಕ್ಷಣಿಕ ಸಂಸ್ಥೆಗಳು ಕೂಡ ಹೆಚ್ಚಿವೆ.   ಅದೇ ರೀತಿ ಹಲವು ದೇವಾಲಯಗಳು ಮತ್ತು ಗುರುದ್ವಾರಗಳನ್ನು ಕೂಡ ನೋಡಬಹುದು.

ಯಮುನಾ ನಗರದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದಿವೆ. ಇದು ಚೀನಾದಿಂದ ದೂರವಿದ್ದರೂ ಇಲ್ಲಿ ಕೈಗಾರಿಕೆಗಳ ಚೆನ್ನಾಗಿ ಅಭಿವೃದ್ಧಿ ಹೊಂದಿರುವುದನ್ನು ಕಾಣಬಹುದು. ಇಡೀ ದೇಶದ ಜನತೆ ಈ ಅಭಿವೃದ್ಧಿಗೆ ನೆರವಾಗಿದೆ. ಮತ್ತು ಇಲ್ಲಿ ನೆಲೆಸಿದವರಿಂದಾಗಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಯಮುನಾ ನಗರದ ಹಳ್ಳಿ ಪ್ರದೇಶ ಕೂಡ ವ್ಯಾಪಾರದಿಂದಾಗಿ ಬಹಳಷ್ಟು ಬದಲಾಗಿದೆ. ಇಲ್ಲಿನ ಜನರ ಮುಖ್ಯ ಉದ್ಯೋಗವೇ ವ್ಯಾಪಾರವಾಗಿದೆ.

ಸಕ್ಕರೆ, ಕಾಗದ ಮತ್ತು ಪೆಟ್ರೋಕೆಮಿಕಲ್ ಪದಾರ್ಥಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ನವರು ಅಣುಸ್ಥಾವರ ಶಕ್ತಿ ಕೇಂದ್ರವನ್ನು ಇಲ್ಲಿ ಸ್ಥಾಪಿಸಿದ್ದಾರೆ. ಭಾರತದ ಅತಿ ದೊಡ್ಡ ರೈಲ್ವೇ ವ್ಯಾಗೆನ್ ಮತ್ತು ಹೊರೆಬಂಡಿ ರಿಪೇರಿ ಘಟಕಗಳಿವೆ. ಏಷ್ಯಾದ ಅತಿ ದೊಡ್ಡ ಸಕ್ಕರೆ, ಕಾಗದ ಮತ್ತು ಟಿಂಬರ್ ಕೈಗಾರಿಕೆಗಳನ್ನು ಇಲ್ಲಿ ಕಾಣಬಹುದಾಗಿದೆ.

ವ್ಯವಸಾಯವನ್ನು ಕೂಡ ಇಲ್ಲಿ ಮಾಡುತ್ತಾರೆ. ಸಾಕಷ್ಟು ನೀರು ಮತ್ತು ಫಲವತ್ತಾದ ಮಣ್ಣಿರುವುದರಿಂದ ಇಲ್ಲಿ ಕಬ್ಬು, ಅಕ್ಕಿ, ಗೋಧಿ ಮತ್ತು ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ಪೋಪಲಾರ್ ಮತ್ತು ನೀಲಗಿರಿ ಮರಗಳನ್ನು ಇಲ್ಲಿ ಅರಣ್ಯಕೃಷಿಯ ಭಾಗವಾಗಿ ಬೆಳೆಯುತ್ತಿರುವುದರಿಂದ ಕೃಷಿಕರಿಗೆ ಹೆಚ್ಚಿನ ಆದಾಯ ಸಿಗುತ್ತದೆ.

ಯಮುನಾ ನಗರದ ಸುತ್ತಮುತ್ತಲ ಪ್ರವಾಸಿ ತಾಣಗಳು

ಯಮುನಾ ನಗರವು ಶಿವಾಲಿಕ್ ಬೆಟ್ಟಗಳ ತಪ್ಪಲಲ್ಲಿದೆ. ಈ ಬೆಟ್ಟಗಳ ಮತ್ತು ಯಮುನಾ ನದಿಯ ಸಂಗಮದ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಇಲ್ಲಿ ಗ್ರೇ ಪೆಲಿಕಾನ್ ಹೆಸರಿನ ಗೆಸ್ಟ್ಹೌಸ್ ನದಿದಂಡೆಯಲ್ಲಿದೆ. ಇದನ್ನು ರಾಜ್ಯ ಸರ್ಕಾರದವರು ನೋಡಿಕೊಳ್ಳುತ್ತಿದ್ದಾರೆ.

ಕಲೆಸರ ವನ್ಯಜೀವಿಧಾಮವು ಯಮುನಾ ನಗರದ ಪಶ್ಚಿಮ ಭಾಗದಲ್ಲಿದೆ. ಇಲ್ಲಿ ವನ್ಯಜೀವಿಗಳಲ್ಲದೆ ಖೈರ್, ಶಿಸಾಂ, ತುನ್, ಸೈನ್ ಮತ್ತು ನೆಲ್ಲಿಕಾಯಿ ಮರಗಳಿವೆ. ಚೌಧರಿ ದೇವಿ ವನಸ್ಪತಿ ಉದ್ಯಾನದಲ್ಲಿ ವೈದ್ಯಕೀಯ ಸಸ್ಯಗಳಿವೆ. ಮಹಾಭಾರತವನ್ನು ಬರೆದ ವೇದ ವ್ಯಾಸನ ನೆನಪಿಗೆ ಬಿಲಾಸ್ಪುರ ಎಂದು ಹೆಸರಿಡಲಾದ ಪ್ರದೇಶವು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಬಿಲಾಸ್ಪುರದಲ್ಲಿ ಕಪಾಲಮೋಚನ, ಋಣಮೋಚನ ಮತ್ತು ಸೂರ್ಯ ಕುಂಡಗಳೆಂಬ ಕೊಳಗಳಿವೆ. ಇವುಗಳನ್ನು ಪವಿತ್ರವಾದದ್ದೆಂದು ಭಾವಿಸಲಾಗುತ್ತದೆ. ಅದಿಬರಿ ಎನ್ನುವುದು ನೈಸರ್ಗಿಕ ಸೌಂದರ್ಯದ ರಮಣೀಯವಾದ ಸ್ಥಳ. ಇಲ್ಲಿ ಹಲವು ಪ್ರಾಚೀನ ವಸ್ತುಗಳನ್ನು ಉತ್ಖನನ ಮಾಡಲಾಗಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ಅಕ್ಟೋಬರ್-ಮಾರ್ಚ್ ಯಮುನಾ ನಗರದ ಭೇಟಿಗೆ ಸೂಕ್ತ ಸಮಯ.

ತಲುಪುವುದು ಹೇಗೆ?

ಯಮುನಾ ನಗರವು ಉತ್ತಮ ರೈಲು ಮತ್ತು ರಸ್ತೆ ಸೌಲಭ್ಯಗಳನ್ನು ಹೊಂದಿದೆ. ಚಂಡೀಗಢ ಇಲ್ಲಿಗೆ ಸಮೀಪದ ರೈಲು ನಿಲ್ದಾಣ.

ಯಮುನಾ ನಗರ ಪ್ರಸಿದ್ಧವಾಗಿದೆ

ಯಮುನಾ ನಗರ ಹವಾಮಾನ

ಉತ್ತಮ ಸಮಯ ಯಮುನಾ ನಗರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಯಮುನಾ ನಗರ

 • ರಸ್ತೆಯ ಮೂಲಕ
  ಯಮುನಾ ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯವಿದೆ. ಸಹರನ್ಪುರದಿಂದ 36 ಕಿಮೀ, ಅಂಬಲದಿಂದ 62 ಕಿಮೀ, ಕರ್ನಾಲ್ನಿಂದ 69 ಕಿಮೀ, ಡೆಹ್ರಡುನ್ನಿಂದ 104 ಕಿಮೀ, ಚಂಡೀಗಢದಿಂದ 105 ಕಿಮೀ, ಪಟಿಯಾಲದಿಂದ 111 ಕಿಮೀ ಮತ್ತು ನವದೆಹಲಿಯಿಂದ ಯಮುನಾ ನಗರವು 200 ಕಿಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಯಮುನಾ ನಗರದಲ್ಲಿ ರೈಲ್ವೇ ನಿಲ್ದಾಣವಿದ್ದು ಇದು ಹರಿಯಾಣ ಮತ್ತು ಪಕ್ಕದ ರಾಜ್ಯಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚಂಡೀಗಢದ ಸಾಹೀದ್ ಭಗತ್ ಸಿಂಗ್ ಅಂತರ-ರಾಷ್ಟ್ರೀಯ ವಿಮಾನನಿಲ್ದಾಣವು ಯಮುನಾ ನಗರಕ್ಕೆ ಸಮೀಪದಲ್ಲಿದೆ. ವಿಮಾನ ನಿಲ್ದಾಣದಿಂದ ಇಲ್ಲಿಗೆ ಎರಡು ಗಂಟೆಗಳ ಹಾದಿ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Jan,Tue
Return On
26 Jan,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Jan,Tue
Check Out
26 Jan,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Jan,Tue
Return On
26 Jan,Wed