Search
  • Follow NativePlanet
Share
ಮುಖಪುಟ » ಸ್ಥಳಗಳು » ಯಮುನಾ ನಗರ » ಆಕರ್ಷಣೆಗಳು » ಕಲೆಸರ ವನ್ಯಜೀವಿಧಾಮ

ಕಲೆಸರ ವನ್ಯಜೀವಿಧಾಮ, ಯಮುನಾ ನಗರ

1

ಕಲೆಸರ ರಾಷ್ಟ್ರೀಯ ಉದ್ಯಾನವು ಹರ್ಯಾಣದ ಪೂರ್ವ ಭಾಗದಲ್ಲಿ ನೆಲೆಸಿದ್ದು, ಚಂಡೀಗಡ್ ದಿಂದ 126 ಕಿ.ಮೀ ಅಂತರದಲ್ಲಿದೆ. 2003 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವೆಂದು ಅಧಿಕೃತವಾಗಿ ಘೋಷಿಸಲಾಯಿತು. ಶಿವಾಲಿಕ್ ಹಾಗು ಹಿಮಾಲಯ ಪರ್ವತ ಶ್ರೇಣಿಗಳ ಬುಡದಲ್ಲಿರುವ ಈ ಪಾರ್ಕ್ ಸಾಲ್ ಮರಗಳನ್ನು ಹೊಂದಿದೆ. 11000 ಎಕರೆಯಲ್ಲಿ ಹರಡಿರುವ ಈ ಉದ್ಯಾನ ಸಮುದ್ರ ಮಟ್ಟದಿಂದ ಸುಮಾರು 2000 ದಿಂದ 3500 ಅಡಿಗಳಷ್ಟು ಎತ್ತರದಲ್ಲಿದೆ.

ಪ್ರಾಣಿ ಪಕ್ಷಿಗಳನ್ನು ಅವುಗಳ ನೈಸರ್ಗಿಕ ತಾಣಗಳಲ್ಲಿ ನೋಡಬಯಸುವ ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ತಾಣವಾಗಿದೆ. ಇಲ್ಲಿ ಕಾಣಬಹುದಾದ ಕೆಲವು ಪ್ರಾಣಿಗಳೆಂದರೆ ಕಾಡು ಹಂದಿಗಳು, ಸಾಂಬಾರಗಳು, ಮೊಲಗಳು, ಮುಳ್ಳು ಹಂದಿಗಳು. ಅಲ್ಲದೆ ಇಲ್ಲಿ ವೈವಿಧ್ಯಮಯವಾದ ಖೈರ್, ಸಾಲ್, ಶೀಶಂ, ಸೈನ್, ಝಿಂಗಾನ್ ಹಾಗು ಛಾಲ್ ನಂತಹ ಮರಗಳೂ ಬೆಳೆಯುತ್ತವೆ. ಸಿಂಧೂರ್ ಮರಗಳಿಗೂ ಈ ಉದ್ಯಾನ ಪ್ರಸಿದ್ಧವಾಗಿದೆ.

ಇಲ್ಲಿನ ಪ್ರಕೃತಿ ಸೌಂದರ್ಯವು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. 100 ವರ್ಷಗಳಷ್ಟು ಹಳೆಯದಾದ ಡಾಕ್ ಬಂಗಲೆಯೊಂದನ್ನು ಇಲ್ಲಿ ಕಾಣಬಹುದು. ಅಲ್ಲದೆ ಕಾಡಿನಲ್ಲಿರುವ ಅತಿಥಿ ಗೃಹದಿಂದ ಯಮುನಾ ನದಿಯ ಸುಂದರ ನೋಟವನ್ನೂ ಪ್ರವಾಸಿಗರು ಆಸ್ವಾದಿಸಬಹುದು.

ಈ ಉದ್ಯಾನ ಪ್ರದೇಶದಲ್ಲಿ ಒಟ್ಟು ಎಂಟು ಕೃತಕ ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ. ಇದರಿಂದ ಇಲ್ಲಿರುವ ಪ್ರಾಣಿಗಳು ಸಂರಕ್ಷಿತ ಪ್ರದೇಶದಿಂದ ಆಚೆ ಹೋಗಲಾರದೆ ತಮ್ಮ ನೀರಿನ ತಣಿವನ್ನು ಆರಿಸಿಕೊಳ್ಳಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed