ಫತೇಹಾಬಾದ್ ಪ್ರವಾಸೋದ್ಯಮ : ಆರ್ಯನ್ ನಾಗರೀಕತೆಯ ಹೆಜ್ಜೆಯ ಜಾಡನ್ನು ಅರಸುವತ್ತ ಒಂದು ಪ್ರಯತ್ನ

ಫತೇಹಾಬಾದ್, ಇದು ಹರಿಯಾಣ ರಾಜ್ಯದ ಫತೇಹಾಬಾದ್ ಜಿಲ್ಲೆಯ ಒಂದು ನಗರವಾಗಿದೆ.  ನಂಬಿಕೆಯೊಂದರ ಪ್ರಕಾರ, ಅರ್ಯನರು ಮೊಟ್ಟಮೊದಲು ಸರಸ್ವತಿ ಮತ್ತು ದ್ರಿಶದ್ವತಿ ನದಿ ತೀರಗಳಲ್ಲಿ ವಾಸ್ತವ್ಯ ಹೂಡಿ, ನಂತರ ಕ್ರಮೇಣ ತಮ್ಮ ನೆಲೆಯನ್ನು ಹಿಸರ್ ಮತ್ತು ಫತೇಹಾಬಾದ್ ಗಳಿಗೆ ವಿಸ್ತರಿಸಿದರು.

ಫತೇಹಾಬಾದ್ ನ ಕುರಿತು ಪುರಾಣಗಳಲ್ಲಿಯೂ ಉಲ್ಲೇಖವಿದ್ದು, ಇದರ ಪ್ರಕಾರ, ಫತೇಹಾಬಾದ್ ನಂದಾ ಸಾಮ್ರಾಜ್ಯದ ಒಂದು ಭಾಗವಾಗಿತ್ತು.  ಫತೇಹಾಬಾದ್ ನಲ್ಲಿ ಪತ್ತೆಹಚ್ಚಲಾದ ಅಶೋಕ ಸ್ತಂಭಗಳೂ ಕೂಡ ಈ ಪ್ರದೇಶವು ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿತ್ತು ಎಂಬುದನ್ನು ತೋರಿಸುತ್ತದೆ.  ಭಾರತೀಯ ಐತಿಹಾಸಿಕ ಸಮೀಕ್ಷೆಯವರು ನಡೆಸಿದ ಉತ್ಖನನಗಳು, ಪುರಾತನ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವಂತಹ ಕುತೂಹಲದಾಯಕವಾದ ಶೋಧನೆಗಳನ್ನು ಬಹಿರಂಗಗೊಳಿಸಿವೆ.

ಆಧುನಿಕ ಫತೇಹಾಬಾದ್ ಪಟ್ಟಣವು 14 ನೆಯ ಶತಮಾನದಲ್ಲಿ ಫಿರೋಜ್ ಷಾ ತುಘಲಕ್ ನಿಂದ ಸ್ಥಾಪನೆಯಾಯಿತು. ಈತನು ತನ್ನ ಮಗ ಫಾತೆಹ್ ಖಾನ್ ನ ತರುವಾಯ ಈ ಪಟ್ಟಣವನ್ನು ಫಾತೆಹಾಬಾದ್ ಎಂದು ಹೆಸರಿಸಿದನು.

ಫತೇಹಾಬಾದ್ ನಲ್ಲಿ ಮತ್ತು ಅದರ ಸುತ್ತಮುತ್ತಲೂ ಇರುವ ಪ್ರವಾಸೀ ತಾಣಗಳು

ಹರಿಯಾಣದ ಹಂಸಿ ಅಥವಾ ಅಗ್ರೋಹದಲ್ಲಿ ಚಕ್ರವರ್ತಿ, ಮಹಾಸಾಮ್ರಾಟ ಅಶೋಕನು ನಿರ್ಮಿಸಿದ ಲ್ಯಾಟ್ (Lat) ಅಥವಾ ಶಿಲಾಸ್ಥಂಭಗಳನ್ನೂ ಒಳಗೊಂಡಂತೆ, ಫಾತೆಹಾಬಾದ್ ನಲ್ಲಿ ಹಲವಾರು ಸ್ಥಳಗಳು ಮತ್ತು ಆಕರ್ಷಣೆಗಳಿವೆ.  ಚಕ್ರವರ್ತಿ ಅಶೋಕ ಅವರ ಕೃತಿ ಸ್ಥಂಭವೆಂದು ಅದು ಉಚಿತವಾಗಿಯೇ ಕರೆಯಲ್ಪಡುತ್ತಿತ್ತು.   ಆದರೆ, ಈ ಎತ್ತರವಾದ ಸ್ಥಂಭವನ್ನು ಫಿರೋಜ್ ಷಾ ತುಘಲಕ್ ನು ಕೆಡವಿ, ಅದರ ಕೆಳಭಾಗವನ್ನು, ಫಾತೆಹಾಬಾದ್ ನಲ್ಲಿ ಮತ್ತೊಂದು ಲ್ಯಾಟ್ ಅನ್ನು ಕಟ್ಟುವ ಉದ್ದೇಶದಿಂದ ಸಾಗಿಸಿದನು.

ಹುಮಾಯೂನ್ ಮಸೀದಿ, ಹೆಸರೇ ಸೂಚಿಸುವಂತೆ, ಇದನ್ನು ಮೊಘಲ್ ಚಕ್ರವರ್ತಿ ಹುಮಾಯೂನನು ಕಟ್ಟಿಸಿದನು.  ಹುಮಾಯೂನನು ತನ್ನ ಶುಕ್ರವಾರದ ಪ್ರಾರ್ಥನೆಗಳನ್ನು ಇಲ್ಲಿ ಸಲ್ಲಿಸುತ್ತಿದ್ದನು.  ತದನಂತರ ಈತನ ಗೌರವಾರ್ಥ ಇಲ್ಲೊಂದು ಗೋರಿಯನ್ನೂ ಸಹ ಕಟ್ಟಲಾಯಿತು.  ಮಸೀದಿಯ ವಾಸ್ತುಶಿಲ್ಪವು ಮೊಗಲ್ ಶೈಲಿಯನ್ನು ಅನುಸರಿಸಿದ್ದು, ಈ ಮಸೀದಿಯನ್ನು 1526 ರಿಂದ 1556 ರವರೆಗಿನ 3 ದಶಕಗಳ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು.

ಫತೇಹಾಬಾದ್ ಪ್ರದೇಶದಲ್ಲಿ, ಬತ್ತಿಹೋದ ಸರಸ್ವತಿ ನದಿ ದಂಡೆಯ ಮೇಲಿರುವ ಐತಿಹಾಸಿಕ ಬೆಟ್ಟವನ್ನು ನೋಡಲೂ ಕೂಡ ನೀವು ಕುನಾಲ್ ಗೆ ಭೇಟಿ ನೀಡಬಹುದು.  ಇದು ಹರಿಯಾಣ ರಾಜ್ಯದಲ್ಲಿರುವ ಅತ್ಯಂತ ಹಳೆಯದಾದ ಐತಿಹಾಸಿಕ ಸ್ಥಳಗಳಲ್ಲೊಂದು. ಕುನಾಲ್ ನಲ್ಲಿ ಕೈಗೊಳ್ಳಲಾದ ಉತ್ಖನನಗಳು ಹರಪ್ಪನ್ ಮತ್ತು ಹರಪ್ಪನ್ ಪೂರ್ವ ಕಾಲಕ್ಕೆ ಸಂಬಂಧಿಸಿದ ಅಪೂರ್ವ ಮಾಹಿತಿ ಕಣಜವನ್ನು ತೆರೆದಿಡುತ್ತವೆ.

ಫತೇಹಾಬಾದ್ ನಗರದಿಂದ 15 ಕಿ. ಮೀ. ದೂರದಲ್ಲಿರುವ ಬನವಾಲಿಯು ಐತಿಹಾಸಿಕ ಬೆಟ್ಟವುಳ್ಳ ಒಂದು ಸ್ಥಳವಾಗಿದ್ದು, ಇದಕ್ಕೆ ವನವಾಲಿ ಎಂಬ ಮತ್ತೊಂದು ಹೆಸರೂ ಕೂಡ ಇದೆ.  ಈ ಬೆಟ್ಟವು ಸುಮಾರು 10 ಮೀ. ಗಳಷ್ಟು ಎತ್ತರವಿದ್ದು, ಸರಿಸುಮಾರು 1 ಚ. ಕಿ. ಮೀ. ನಷ್ಟು ವಿಸ್ತಾರವಾಗಿದೆ.  ಬನವಾಲಿಯಲ್ಲಿ ಕೈಗೊಳ್ಳಲಾದ ಉತ್ಖನನಗಳು, ಹರಪ್ಪನ್ ಪೂರ್ವಕಾಲ ಮತ್ತು ಹರಪ್ಪನ್ ಕಾಲಾವಧಿಯ ಕುರಿತು ಐತಿಹಾಸಿಕ ಮಾಹಿತಿಯ ಅಮೂಲ್ಯವಾದ ನಿಧಿಯನ್ನೇ ನೀಡಿವೆ.  ಈ ಕಾಲಾವಧಿಗಳು ಕ್ರಮವಾಗಿ ಕ್ರಿ.ಪೂ.2800 ರಿಂದ ಕ್ರಿ.ಪೂ. 2300 ಮತ್ತು ಕ್ರಿ.ಪೂ. 2300 ರಿಂದ ಕ್ರಿ.ಪೂ. 1800 ಆಗಿರುತ್ತವೆ.

ಫತೇಹಾಬಾದ್ ಅನ್ನು ಸಂದರ್ಶಿಸಲು ಸೂಕ್ತ ಸಮಯ

ಹವಾಮಾನವು ಅಹ್ಲಾದಕರವಾಗಿರುವುದರಿಂದ, ಫಾತೆಹಾಬಾದ್ ಗೆ ಭೇಟಿ ನೀಡಲು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳುಗಳ ನಡುವಿನ ಅವಧಿಯು ಅತ್ಯುತ್ತಮ ಕಾಲವಾಗಿದೆ.

ಫತೇಹಾಬಾದ್ ಅನ್ನು ತಲುಪುವುದು ಹೇಗೆ?

ಫತೇಹಾಬಾದ್ ರಾಜ್ಯದ ಪ್ರಮುಖ ಪಟ್ಟಣಗಳಿಗೆ ರೈಲ್ವೆ ಮಾರ್ಗ ಮತ್ತು ಹೆದ್ದಾರಿಗಳ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ.

ಫತೇಹಾಬಾದ್ ನ ಹವಾಮಾನದ ಸ್ವರೂಪ

ಉತ್ತರ ಭಾರತದ ಇತರ ನಗರ ಮತ್ತು ಪಟ್ಟಣಗಳಂತೆ, ಫತೇಹಾಬಾದ್ ಕೂಡ ಬೇಸಿಗೆಕಾಲ, ಚಳಿಗಾಲ, ಮತ್ತು ಮಳೆಗಾಲಗಳನ್ನು ಅನುಭವಿಸುತ್ತದೆ.

Please Wait while comments are loading...