Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಹಾಬಾದ್ » ಆಕರ್ಷಣೆಗಳು » ಲ್ಯಾಟ್ (Lat) ಅಥವಾ ಶಿಲಾಸ್ಥಂಭ

ಲ್ಯಾಟ್ (Lat) ಅಥವಾ ಶಿಲಾಸ್ಥಂಭ, ಫತೇಹಾಬಾದ್

1

ಉರ್ದು ಭಾಷೆಯಲ್ಲಿ ಶಿಲಾಸ್ಥಂಬವನ್ನು ಲ್ಯಾಟ್ (Lat) ಎಂದು ಕರೆಯುತ್ತಾರೆ.  ಈ ಶಿಲಾಸ್ಥಂಭವು ವಾಸ್ತವವಾಗಿ ಚಕ್ರವರ್ತಿ ಅಶೋಕರಿಂದ ಹರಿಯಾಣ ರಾಜ್ಯದ ಹಂಸಿ ಅಥವಾ ಆಗ್ರೋಹದಲ್ಲಿ ನಿರ್ಮಾಣಗೊಂಡಿತು.  ಈ ಕಾರಣಕ್ಕಾಗಿಯೇ, ಈ ಶಿಲಾಸ್ಥಂಭವು ಚಕ್ರವರ್ತಿ ಅಶೋಕರ ಕೃತಿ ಸ್ತಂಭವೆಂದೇ ಅನ್ವರ್ಥಕವಾಗಿ ಕರೆಯಲ್ಪಡುತ್ತಿತ್ತು.

ಇಂತಹ ಎತ್ತರವಾದ, ಅದ್ಭುತ ಶಿಲಾಸ್ಥಂಭವು, ಫಿರೋಜ್ ಷಾ ತುಘಲಕ್ ನಿಂದ ಕೆಡವಲ್ಪಟ್ಟಿತು. ದೇಶದ ಇತರ ಮುಸಲ್ಮಾನ ಆಡಳಿತಗಾರರ ಸಂಪ್ರದಾಯವನ್ನನುಸರಿಸಿ, ಫಿರೋಜ್ ಷಾ ತುಘಲಕ್ ನು ಈ ಕ್ರಮವನ್ನು ಕೈಗೊಂಡನು.  ಈ ಮುಸಲ್ಮಾನ ಸುಲ್ತಾನರು, ಹಿಂದೂ ಸ್ಮಾರಕಗಳ ಭಾಗಗಳನ್ನು, ಮಸೀದಿಗಳು ಮತ್ತಿತರ ಮುಸಲ್ಮಾನ ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸಿಕೊಂಡು, ನಂತರ ಅವಕ್ಕೆ ತಮ್ಮ ಹೆಸರನ್ನಿರಿಸಿ, ಅವು ತಮ್ಮದೇ ಕೃತಿಗಳೆಂದು ಜಗತ್ತಿಗೆ ಹೇಳಿಕೊಳ್ಳಲಾರಂಭಿಸಿದರು.

ಫಿರೋಜ್ ಷಾ ತುಘಲಕ್ ನು ಈ ಅಶೋಕ ಸ್ಥಂಭದ ಕೆಳಭಾಗವನ್ನು ಫಾತೆಹಾಬಾದ್ ಗೆ ಸಾಗಿಸಿ, ಅಲ್ಲಿ ಮತ್ತೊಂದು ಲ್ಯಾಟ್ ಅನ್ನು ನಿರ್ಮಿಸಲು ಇದನ್ನು ಬಳಸಿಕೊಂಡನು.  ಈತನು ಸ್ತಂಭದಲ್ಲಿದ್ದ ಮೂಲ ಅಶೋಕನ ಶಾಸನಗಳನ್ನು ನಾಶಪಡಿಸಿ, ಅದರ ಮೇಲೆ ತನ್ನದೇ ಕುಟುಂಬದ ಇತಿಹಾಸವನ್ನು ಎದ್ದು ಕಾಣುವಂತೆ ಅರೇಬಿಯನ್ ಲಿಪಿಯಲ್ಲಿ ಕೆತ್ತಿಸಿದನು.  ಈತನು ಅಶೋಕ ಸ್ತಂಭದ ಮೇಲ್ಭಾಗವನ್ನು ಹಿಸ್ಸಾರ್ ಗೆ ಸಾಗಿಸಿ ಅದನ್ನು ಮಸೀದಿಯ ನಿರ್ಮಾಣಕ್ಕೆ ಬಳಸಿದನು.

15.6 ಅಡಿ ಉದ್ದ ಮತ್ತು 6 ಅಡಿ ಅಗಲದ ತಳಭಾಗವುಳ್ಳ ಈ ಲ್ಯಾಟ್ ಅನ್ನು ಫತೇಹಾಬಾದ್ ನಲ್ಲಿರುವ ಫಿರೋಜ್ ಷಾ ತುಘಲಕ್ ನ ಕೋಟೆಯಲ್ಲಿ ಕಟ್ಟಲಾಗಿದ್ದು, ಇದು ಇದ್ಗಃ ಅಥವಾ ಮಸೀದಿಯ ಪಕ್ಕದಲ್ಲಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri