Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಹಾಬಾದ್ » ಹವಾಮಾನ

ಫತೇಹಾಬಾದ್ ಹವಾಮಾನ

ಹವಾಮಾನವು ಅಹ್ಲಾದಕರವಾಗಿರುವುದರಿಂದ, ಫಾತೆಹಾಬಾದ್ ಗೆ ಭೇಟಿ ನೀಡಲು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳುಗಳ ನಡುವಿನ ಅವಧಿಯು ಅತ್ಯುತ್ತಮ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆಯ ತಿಂಗಳುಗಳು ಮಾರ್ಚ್ ನಿಂದ ಮೇ ತಿಂಗಳುಗಳಾಗಿದ್ದು, ಈ ಅವಧಿಯಲ್ಲಿ ಉಷ್ಣಾಂಶವು 45 ಡಿಗ್ರಿ ಸೆಲ್ಷಿಯಸ್ ನಷ್ಟು ಎತ್ತರಕ್ಕೆ ತಲುಪಬಹುದು. ಇದರೊಂದಿಗೆ ಸಾಮಾನ್ಯವಾಗಿ ಈ ಅವಧಿಯಲ್ಲಿ ಬಿಸಿಗಾಳಿ ಬೀಸುವುದು ಸರ್ವೇಸಾಮಾನ್ಯ.

ಮಳೆಗಾಲ

ಮಳೆಗಾಲದ ಅವಧಿಯು ಜುಲೈ ನಿಂದ ಸೆಪ್ಟೆಂಬರ್ ತಿಂಗಳುಗಳವರೆಗಿನ ಕಾಲಾವಧಿಯಾಗಿದ್ದು, ಈ ಸಮಯದಲ್ಲಿ, ಪಟ್ಟಣವು ಆಗಾಗ್ಗೆ ಭಾರಿ ಮಳೆಯನ್ನು ಪಡೆಯುತ್ತದೆ.  ಈ ಅವಧಿಯಲ್ಲಿ ಹವಾಮಾನವು ತೇವಯುಕ್ತವಾಗಿರುತ್ತದೆ.

ಚಳಿಗಾಲ

ಚಳಿಗಾಲಾವಧಿಯು ಡಿಸೆಂಬರ್ ನಿಂದ ಫೆಬ್ರವರಿ ತಿಂಗಳವರೆಗಿನ ಅವಧಿಯಾಗಿದೆ.  ಈ ಅವಧಿಯಲ್ಲಿ ವಾತಾವರಣವು ಹಿತಮಿತವಾಗಿದ್ದು, ಅಪ್ಯಾಯಮಾನವಾಗಿರುತ್ತದೆ ಮತ್ತು ಉಷ್ಣತೆಯು 12 ಡಿಗ್ರಿ ಸೆಲ್ಷಿಯಸ್ ನಿಂದ 25 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯತ್ಯಯಗೊಳ್ಳುತ್ತದೆ.