Search
  • Follow NativePlanet
Share
ಮುಖಪುಟ » ಸ್ಥಳಗಳು» ಝಜ್ಜರ್

ಝಜ್ಜರ್ ಪ್ರವಾಸೋದ್ಯಮ : ಝಜ್ಜರ್ ನಲ್ಲಿ ಪಕ್ಷಿಗಳನ್ನು ಭೇಟಿ ಮಾಡಿ

14

ಝಜ್ಜರ್, ಹರಿಯಾಣ ರಾಜ್ಯದ 21 ಜಿಲ್ಲೆಗಳಲ್ಲಿ ಒಂದಾಗಿದೆ . ಝಜ್ಜರ್ ಪಟ್ಟಣದ ಕೇಂದ್ರ , ಜುಲೈ 15 , 1997 ರಂದು ರೋಹ್ಟಕ್ ಜಿಲ್ಲೆಯನ್ನು ವಿಭಜಿಸಿ  ನಿರ್ಮಿಸಲಾಗಿದೆ.  ಈ ಪಟ್ಟಣವು ಚ್ಛಾಜು /ಚ್ಚಾಜುನಗರದಿಂದ  ಸ್ಥಾಪನೆಗೊಂಡಿತು ಎಂದು ನಂಬಲಾಗಿದೆ. ನಂತರ ಇದು ಝಜ್ಜರ್ ಎಂದು ಹೆಸರನ್ನು ಬದಲಾಯಿಸಲಾಯಿತು . ಎರಡನೇ ಕಥೆಯ ಪ್ರಕಾರ, ಝರ್ ನಗರ್.  ಒಂದು ನೈಸರ್ಗಿಕ ಕಾರಂಜಿಯಿಂದ ಪಡೆದ ಹೆಸರು ಎನ್ನಲಾಗುತ್ತದೆ. ಮೂರನೆಯ ನಂಬಿಕೆಯ ಪ್ರಕಾರ ಇದರ ಹೆಸರು ಝಜ್ಜರ್ ಎಂಬ ಪಾತ್ರೆಯ ಹೆಸರಿನಿಂದಾಗಿ ಬಂತು. ನಗರದ ಸುತ್ತಲೂ ನೀರಿನ ಮೇಲ್ಮೈ ಇದ್ದು ನೀರಿನ ಪಾತ್ರೆಯ ಆಕಾರದಲ್ಲಿ ಈ ನಗರವಿದೆ. ......

ಝಜ್ಜರ್ ಸುತ್ತಲಿನ ಪ್ರವಾಸಿ ಆಕರ್ಷಣೆಗಳು

ಝಜ್ಜರ್, ಪ್ರಕೃತಿ ಉತ್ಸಾಹಿಗಳಿಗೆ ನೀಡಲು ತನ್ನಲ್ಲಿ ಸಾಕಷ್ಟು ಅಂಶಗಳನ್ನು ಹುದುಗಿಸಿಕೊಂಡಿದೆ. ಭಿಂದವಾಸ್ ಪಕ್ಷಿಧಾಮ , ದೆಹಲಿಯಿಂದ ಕೇವಲ ಸುಮಾರು 3 ಗಂಟೆಗಳ ಪ್ರಯಾಣದ ಅವಧಿಯಷ್ಟು ಅಂತರದಲ್ಲಿದ್ದು, ಜಿಲ್ಲೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ . ಇದು 1074 ಎಕರೆ ವ್ಯಾಪ್ತಿಯಲ್ಲಿ  ಹರಡಿದೆ ಹಾಗೂ  ಪ್ರಪಂಚದ ವಿವಿಧ ಪ್ರದೇಶಗಳ 250ಕ್ಕೂ ಹೆಚ್ಚು ಜಾತಿಯ ಹಕ್ಕಿಗಳನ್ನು ಹಾಗೂ  35,000 ಕ್ಕೂ ಹೆಚ್ಚು ಪ್ರಭೇದಗಳ ವಲಸೆ ನೀರು ಪಕ್ಷಿಗಳನ್ನು ಆಕರ್ಷಿಸುತ್ತದೆ . ಈ ಪಕ್ಷಿಧಾಮದಲ್ಲಿ ನೀರನ್ನು ಸೆರೆಹಿಡಿಯಲು 12 ಕಿ.ಮೀ ಉದ್ದದ ಒಡ್ಡು ನಿರ್ಮಿಸಿರುವ ಮಾನವ ನಿರ್ಮಿತ ಸರೋವರವನ್ನು ಕಾಣಬಹುದು.

ಭಾರತದ ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ದೇವಾಲಯಗಳನ್ನು ಕಾಣಬಹುದಾಗಿದ್ದು ಝಜ್ಜರ್  ಕೂಡ ಇದಕ್ಕೆ ಹೊರತಾಗಿಲ್ಲ . ವಿಶೇಷ ಉಲ್ಲೇಖವನ್ನು ಹೊಂದಿರುವ, ಬೆರಿ ಪಟ್ಟಣದಲ್ಲಿ ಬೆರಿ ದೇವಾಲಯ ಇದಕ್ಕೆ ಅದ್ಭುತ ಉದಾಹರಣೆಯಾಗಿದೆ.  ದೇವಾಲಯದಲ್ಲಿ ಪೂಜಿಸಲ್ಪಡುವ ದೇವತೆ ಭೀಮೇಶ್ವರಿ ದೇವಿ , ಕುಕದೇವಿ ಅಥವಾ ಪಾಂಡವರ ಕುಟುಂಬ ದೇವತೆ. ನಂಬಿಕೆಯ ಪ್ರಕಾರ ಈ ದೇವಸ್ಥಾನದವನ್ನು ಕೌರವರ ತಾಯಿ ರಾಣಿ ಗಾಂಧಾರಿ  ಬೆರಿ ಮರವನ್ನು ನೋಡಿ ನಿರ್ಮಿಸಿದಳು ಎಂದು ಹೇಳಲಾಗಿದೆ.  ಈ ದೇವಾಲಯವು ವಿಶೇಷವಾಗಿ ತಮ್ಮ ವಿವಾಹದ ಪ್ರತಿಜ್ಞೆಯನ್ನು ನವೀಕರಿಸಲು ಇಲ್ಲಿ ಬರುವ ವಿವಾಹಿತ ಜೋಡಿಗಳಿಗೆ ಪೂಜ್ಯನೀಯ ಸ್ಥಾನವಾಗಿದೆ.

ಕೆಲವು ಶಾಂತಿಯುತ ಕ್ಷಣಗಳನ್ನು ಹುಡುಕುತ್ತಿರುವವರಿಗೆ, ಝಜ್ಜರ್ ನ ಬುವಾ ವಾಲಾ ತಲಾಬ್ ನಲ್ಲಿ ಸಮಾಧಾನ ದೊರೆಯುವುದರಲ್ಲಿ ಸಂಶಯವಿಲ್ಲ.  ತಲಾಬ್ , ಅಥವಾ ಕೊಳ , ಯಾರ ಪ್ರೇಮ ದುರಂತದಲ್ಲಿ ಕೊನೆಗೊಂಡಿತೋ ಆ ಪ್ರೇಮಿಗಳ ಹೆಸರನ್ನು ಪಡೆಯಿತು ಎನ್ನಲಾಗಿದೆ.  ಈ ಸ್ಥಳವು ಅತ್ಯಂತ ಶಾಂತಿಯುತವಾಗಿದ್ದು  ಮತ್ತು ಜನಸಂದಣಿಯಿಂದ, ಗದ್ದಲದಿಂದ ದೂರವಾಗಿ ಮನಸ್ಸನ್ನು ಪ್ರಶಾಂತಗೊಳಿಸುವ ಒಂದು ಅದ್ಭುತ ಸ್ಥಳ ಇದಾಗಿದೆ.

ಉಲ್ಲೇಖಕ್ಕೆ ಅರ್ಹವಾದ ಮತ್ತೊಂದು ಆಕರ್ಷಣೆ, ಪುರಾತತ್ವ ಮ್ಯೂಸಿಯಂ  ಗುರುಕುಲ. ಈ ವಸ್ತು ಸಂಗ್ರಹಾಲಯವು, ಇಲ್ಲಿನ ಪ್ರಸ್ತುತ ನಿರ್ದೇಶಕ ಸ್ವಾಮಿ  ಓಮಾನಂದ ಸರಸ್ವತಿಯವರಿಂದ 1959 ರಲ್ಲಿ ಸ್ಥಾಪಿಸಲಾಯಿತು , ಇದೀಗ ಹರಿಯಾಣ ಅತಿದೊಡ್ಡ ವಸ್ತು ಸಂಗ್ರಯಾಲಯವಾಗಿ ಬೆಳೆದಿದೆ. ವಸ್ತು ಸಂಗ್ರಹಾಲಯವು,  ರಾಜಸ್ಥಾನ , ಹರಿಯಾಣ , ಪಂಜಾಬ್ , ಅಲಹಾಬಾದ್ ಮತ್ತು ಉತ್ತರ ಪ್ರದೇಶದ ಬರೇಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ತರಲಾದ ಪುರಾತನ ವಿಗ್ರಹಗಳು ಮತ್ತು ನಾಣ್ಯಗಳ ಒಂದು ದೊಡ್ಡ ಸಂಗ್ರಹವಾಗಿದೆ.

ಝಜ್ಜರ್ ಭೇಟಿಗೆ ಸೂಕ್ತ ಸಮಯ

ಸಂಪ್ಟೆಂಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಆಹ್ಲಾದಕರ ಹವಾಮಾನವಿದ್ದು ಈ ಸಂದರ್ಭದಲ್ಲಿ ಝಜ್ಜರ್ ಪಟ್ಟಣವನ್ನು ಭೇಟಿ ಮಾಡುವುದು ಅತ್ಯಂತ ಸೂಕ್ತ.

ಝಜ್ಜರ್ ತಲುಪುವುದು ಹೇಗೆ?

ಝಜ್ಜರ್ ಭಾರತದ ಇತರ ಎಲ್ಲಾ ನಗರಗಳಿಗೆ ರಸ್ತೆ ಹಾಗೂ ರೈಲ್ವೆ ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಝಜ್ಜರ್ ಹವಾಮಾನ

ಭಾರತದ ಉತ್ತರ ಭಾಗದಂತೆ ಇಲ್ಲಿಯೂ ಸಹ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದ ಋತುವನ್ನು ಕಾಣಬಹುದು.

ಝಜ್ಜರ್ ಪ್ರಸಿದ್ಧವಾಗಿದೆ

ಝಜ್ಜರ್ ಹವಾಮಾನ

ಉತ್ತಮ ಸಮಯ ಝಜ್ಜರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಝಜ್ಜರ್

  • ರಸ್ತೆಯ ಮೂಲಕ
    ಝಜ್ಜರ್ ದೆಹಲಿಯೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದು ರಾಜಧಾನಿ ದಹಲಿ ರಿಂದ 72 ಕಿಲೋಮೀಟರ್ ದೂರದಲ್ಲಿ ತನ್ನ ಗಡಿ ಎನ್ ಎಹ್ (ರಾಷ್ಟ್ರೀಯ ಹೆದ್ದಾರಿ)71-ಎ, ಬಳಿ ನೆಲೆಗೊಂಡಿದೆ. ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಬಸ್ ಗಳು ದೆಹಲಿ, ಉತ್ತರ ಪ್ರದೇಶ ಹರಿಯಾಣ ಮತ್ತು ಇತರ ನೆರೆಯ ರಾಜ್ಯಗಳಿಂದ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣ, ದೆಹಲಿ ಮತ್ತು ಭಾರತದ ಇತರ ಪ್ರಮುಖ ನಗರಗಳಿಂದ ಉತ್ತಮ ರೈಲಿನ ಸಂಪರ್ಕವನ್ನು ಹೊಂದಿರುವ ರೋಹ್ಟಕ್ ಜಂಕ್ಷನ್. ರೋಹ್ಟಕ್ ನಿಂದ ಝಜ್ಜರ್ ಗೆ ಕೇವಲ 30 ನಿಮಿಷಗಳ ಪ್ರಯಾಣದ ಅವಧಿಯಷ್ಟೇ!
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ವಿಮಾನ ನಿಲ್ದಾಣವೆಂದರೆ ದೆಹಲಿ ವಿಮಾನ ನಿಲ್ದಾಣ. ದೆಹಲಿಯಿಂದ ಝಜ್ಜರ್ ಗೆ 62 ಕಿ.ಮೀ ಅಂತರ ಕ್ರಮಿಸಬೇಕಾಗುತ್ತದೆ. ಇಲ್ಲಿಂದ ಸ್ಥಳೀಯ ಅಥವಾ ಖಾಸಗಿ ವಾಹನಗಳ ಮೂಲಕ ಝಜ್ಜರ್ ನ್ನು ಸುಲಭವಾಗಿ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat