Search
  • Follow NativePlanet
Share
ಮುಖಪುಟ » ಸ್ಥಳಗಳು » ಝಜ್ಜರ್ » ಆಕರ್ಷಣೆಗಳು » ಬುವಾ ವಾಲಾ ತಲಾಬ್

ಬುವಾ ವಾಲಾ ತಲಾಬ್, ಝಜ್ಜರ್

1

ಝಜ್ಜರ್ ನಲ್ಲಿನ ಬುವಾ ವಾಲಾ ತಲಾಬ್  ಅದರ ನಿರ್ಮಾಣದ ಹಿಂದೆ 375 ವರ್ಷಗಳ ಹಿಂದಿನ ನಿಜವಾದ ಪ್ರೀತಿಯ ಹಳೆಯ ಕಥೆಯನ್ನು ಹೊಂದಿದೆ. ಪುರಾಣದ ಪ್ರಕಾರ , ಝಜ್ಜರ್ ನವಾಬ್ ಪಾಳೇಗಾರ ಮುಸ್ತಫಾ ಖಾನ್ ನ ಕೆಚ್ಚೆದೆಯ ಉತ್ಸಾಹಿ ಮಗಳು ಬುವಾ ಒಂದು ದಿನ,  ಅರಣ್ಯದಲ್ಲಿ ತನ್ನ ಕುದುರೆ ಸವಾರಿ ಮಾಡುವುದಕ್ಕಾಗಿ ಹೋಗಿದ್ದಳು .

ದುರದೃಷ್ಟವಶಾತ್ ಅವಳು ಹುಲಿಯ ದಾಳಿಗೆ ಒಳಗಾಗಿ ಸಹಾಯಕ್ಕಾಗಿ ಕಿರುಚುತ್ತಿದ್ದಳು. ಅಲ್ಲಿಯೇ ಹತ್ತಿರದಲ್ಲಿದ್ದ, ಬಡವನಾದರೂ ಸುಂದರವಾಗಿರುವ ಮರಗೆಲಸ ಮಾಡುವ ಹಾಸನ್  ಎಂಬ ಯುವಕ ಅವಳ ಕೂಗನ್ನು ಕೇಳಿ ಸ್ಥಳಕ್ಕೆ ಧಾವಿಸುತ್ತಾನೆ. ಅವನು ಹುಲಿಯನ್ನು ಕೊಂದು,  ಗಾಯಗೊಂಡ ಆಕೆಯನ್ನು ರಾಜ್ಯಕ್ಕೆ ಹಿಂತಿರುಗಿ ಕರೆದುಕೊಂಡುಬರುತ್ತಾನೆ.

ಬುವಾಳ ತಂದೆ ಕೃತಜ್ಞತೆಯಿಂದ ಮರಕಡಿಯುವವನಿಗೆ ಒಂದು ಬಹುಮಾನ ನೀಡಿದನು.  ಆದರೆ ಅವನು ತನ್ನ ಮಗಳನ್ನೇ ಮದುವೆ ಮಾಡಿಕೊಡುವಂತೆ ಕೇಳಿದಾಗ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡನು. ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿದ  ಮುಸ್ತಫಾ ಖಾನ್,  ಕೆಲವು ದಿನಗಳವರೆಗೆ  ಮದುವೆಯನ್ನು  ಮುಂದೂಡಿದನು.

ಒಂದು ದಿನ ನವಾಬನು  ಹಾಸನ್ ನನ್ನು, ನವಾಬ್ ಸೇನೆಗೆ ಸೇರಲು  ಹೇಳಿದನು ಮತ್ತು ಯುದ್ಧ ಕ್ಷೇತ್ರಕ್ಕೆ ಹಾಸನ್ ಹೋದಾಗ ಆತ ಯುದ್ಧದಲ್ಲಿ ಕೊಲ್ಲಲ್ಪಟ್ಟನು. ದುಃಖದಿಂದ ನರಳುತ್ತಿರುವ ಬುವಾ ತಾವಿಬ್ಬರೂ ಪರಸ್ಪರ ಭೇಟಿ ಮಾಡುತ್ತಿದ್ದ, ಕೊಳದ ಪಕ್ಕ ಅವನ ಸಮಾಧಿಯನ್ನು ನಿರ್ಮಿಸಲು ಹೇಳಿದಳು . ಅವಳು ತನ್ನ ಪ್ರೀತಿಯನ್ನು ಕಳೆದುಕೊಂಡು ಆ ನೋವಿನಲ್ಲಿಯೇ ಕೊರಗಿ ಎರಡು ವರ್ಷಗಳ ಒಳಗೆ ಮರಣ ಹೊಂದಿದಳು. ಅವಳನ್ನೂ ಕೂಡ  ಕೊಳದ  ಬಳಿ ಅವಳ ಪ್ರೇಮಿಯ ಸಮಾಧಿಯ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತು . ಈ ರೀತಿ ಈ  ಕೊಳಕ್ಕೆ  ಬುವಾ ಕಾ ತಲಾಬ್ ಎಂಬ ಹೆಸರು ಬಂತು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed