Search
  • Follow NativePlanet
Share
ಮುಖಪುಟ » ಸ್ಥಳಗಳು » ಝಜ್ಜರ್ » ಹವಾಮಾನ

ಝಜ್ಜರ್ ಹವಾಮಾನ

ಬೇಸಿಗೆಗಾಲ

ಬೇಸಿಗೆಯು ಝಜ್ಜರ್ ನಲ್ಲಿ ಮಾರ್ಚ್ ನಿಂದ ಮೆ ತಿಂಗಳವರೆಗೆ ಇರುತ್ತದೆ ಈ ಸಮಯದಲ್ಲಿ ವಾತಾವರಣವು ಅತ್ಯಂತ ಬಿಸಿಯಾಗಿದ್ದು ಸುಮಾರು 45 ಡಿ. ಸೆ ವರೆಗೆ ತಾಪಮಾನ ದಾಖಲಾಗುತ್ತದೆ. ಹಗಲಿನಲ್ಲಿ ಬೀಸುವ ಬಿಸಿ ಗಾಳಿ ಈ ಸಮಯದ ನಿಮ್ಮ ಪ್ರಯಾಣವನ್ನು ಅಹಿತರವನ್ನಾಗಿಸಬಹುದು.

ಮಳೆಗಾಲ

ಝಜ್ಜರ್ ಪಟ್ಟಣದಲ್ಲಿ ಮಳೆಯ ತುಂತುರು ಹನಿಗಳು ಜೂನ್ ತಿಂಗಳಿನಲ್ಲಿ ಆರಂಭವಾಗಿತ್ತವೆ. ಮತ್ತು ಅಗಸ್ಟ್ ವರೆಗೆ ಮಳೆರಾಯನ ಆರ್ಭಟ ಮುಂದುವರಿಯುತ್ತದೆ. ಬೇಸಿಗೆಯ ಅತಿಯಾದ ಶಾಖವನ್ನು ಅನುಭವಿಸಿದ್ದ ಪಟ್ಟಣ, ಮಳೆಯಿಂದಾಗಿ ಕೊಂಚ ಸಮಾಧಾನವನ್ನು ಪಡೆಯುವುದು ಮಳೆಗಾಲದಲ್ಲೇ!

ಚಳಿಗಾಲ

ಚಳಿಗಾಲವು ಈ ಪಟ್ಟಣದಲ್ಲಿ ಅಕ್ಟೋಬರ್ ನಿಂದ ಜನವರಿವರೆಗೆ ಉಂಟಾಗುತ್ತದೆ. ಈ ಸಮಯದಲ್ಲಿ ಹಗಲಿನಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತಿದ್ದು ರಾತ್ರಿ ಹವಾಮಾನ ತಂಪಾಗಿರುತ್ತದೆ. ತಾಪಮಾನವು ಕನಿಷ್ಠ 12 ಡಿ. ಸೆ ನಿಂದ ಗರಿಷ್ಠ 25 ಡಿ.ಸೆ ನಷ್ಟು ದಾಖಲಾಗುತ್ತದೆ.