Search
  • Follow NativePlanet
Share
ಮುಖಪುಟ » ಸ್ಥಳಗಳು» ಸಾತ್ತಲ್

ಸಾತ್ತಲ್ - ಏಳು ಕೆರೆಗಳ ನಗರ

12

ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿ ನೆಲೆಸಿದ್ದು, ಹಿಮಾಲಯ ಪರ್ವತ ಶ್ರೇಣಿಗಳ ಕೆಳಸ್ತರದಲ್ಲಿ ಸ್ಥಿತಗೊಂಡಿರುವ ಸಾತ್ತಲ್ ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಈ ಒಂದು ಸ್ಥಳದಲ್ಲಿ ಒಂದಕ್ಕೊಂದು ಅಂತರಸಂಪರ್ಕ ಹೊಂದಿರುವ ಸುಂದರವಾದ ಏಳು ಕೆರೆಗಳನ್ನು ನೋಡಬಹುದಾಗಿದೆ. ಆ ಸುಂದರವಾದ ಕೆರೆಗಳೆಂದರೆ, ಗರುಡ ತಾಲ್, ಪೂರ್ಣಾ ತಾಲ್, ಸೀತಾ ತಾಲ್, ರಾಮ ತಾಲ್, ಲಕ್ಷ್ಮಣ ತಾಲ್, ನಳ ದಮಯಂತಿ ತಾಲ್ ಮತ್ತು ಸುಖ ತಾಲ್. ಹಿಂದಿ ಭಾಷೆಯಲ್ಲಿ ಸಾತ್ ಎಂದರೆ ಏಳು ಎಂಬರ್ಥವಿರುವುದರಿಂದ, ಈ ಪ್ರದೇಶಕ್ಕೆ 'ಸಾತ್-ತಾಲ್' ಎಂಬ ಹೆಸರು ಬಂದಿದೆ. ಮೆಹ್ರಾಗಾಂವ್ ಕಣಿವೆಯಲ್ಲಿರುವ ಈ ಪ್ರದೇಶದ ಸುತ್ತಲೂ ದಟ್ಟವಾದ ಓಕ್ ಮರಗಳ ಕಾಡು ಆವರಿಸಿದೆ. ಬ್ರಿಟೀಷರ ಆಡಳಿತಾವಧಿಯಲ್ಲಿ ಈ ಒಂದು ಪ್ರದೇಶವು ಚಹಾ ತೋಟಗಳಿಗಾಗಿಯೂ ಪ್ರಸಿದ್ಧವಾಗಿತ್ತು.

ಈ ತಾಣವು ಏಳು ಮೆಸೋಟ್ರೊಫಿಕ್ ಕೆರೆಗಳ(ಮಧ್ಯಮ ಪ್ರಮಾಣದಲ್ಲಿ ಸಸ್ಯಗಳನ್ನು ಹೊಂದಿರುವ ಕೆರೆ) ಸಮುಚ್ಚಯವಾಗಿದ್ದು ಅವುಗಳು ಹೇರಳವಾಗಿ ಖನಿಜಾಂಶಗಳನ್ನು ಒಳಗೊಂಡಿವೆ. ಹಲವು ಪ್ರಭೇದಗಳ ಸಸ್ಯ ಹಾಗು ಪ್ರಾಣಿಗಳ ನೈಸರ್ಗಿಕ ಆವಾಸಸ್ಥಾನವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು 500 ಬಗೆಯ ಸ್ಥಳೀಯ ಹಾಗು ವಲಸೆಬಂದ ಹಕ್ಕಿಗಳು, 525 ಬಗೆಯ ಚಿಟ್ಟೆಗಳು, 20 ಬಗೆಯ ಸಸ್ತನಿಗಳು ಮತ್ತು 1100 ಬಗೆಯ ಜೀವರಾಶಿಗಳನ್ನು ನೋಡುವ ಅವಕಾಶವನ್ನು ಪಡೆಯುತ್ತಾರೆ. ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳೆಂದರೆ, ರೆಡ್ ಬಿಲ್ಡ್ ಬ್ಲು ಮ್ಯಾಗ್ಪೈಸ್, ಕಿಂಗ್ ಫಿಶರ್, ನೀಲಿ ಗಂಟಲು ಹಾಗು ಕಂದು ತಲೆಯ ಬಾರ್ಬೆಟ್ಸ್, ಇಂಡಿಯನ್ ಟ್ರೀ ಪೈಸ್, ಬ್ಲು ವ್ಹಿಸ್ಟ್ಲಿಂಗ್ ಥ್ರಷ್ ಮತ್ತು ಲ್ಯಾಮ್ಮರ್ಗೀರ್ಸ್. ಇವುಗಳ ಹೊರತಾಗಿ ಹಿಮಾಲಯನ್ ಗ್ರಿಫ್ಫಾನ್ಸ್, ಕ್ರೆಸ್ಟೆಡ್ ಸರ್ಪಂಟ್ ಈಗಲ್ಸ್, ನೊಣ ಹಿಡುಕ, ಚೀರ್ ಫೀಸಂಟ್ಸ್, ಕಲಿಜ್ ಫೀಸಂಟ್ಸ್, ಕೊಕ್ಲಾಸ್ ಫೀಸಂಟ್ಸ್, ಡಾಲರ್ ಬರ್ಡ್ಸ್, ಲೀಫ್ ಬರ್ಡ್ಸ್ ಮತ್ತು ಫ್ಲಾವರ್ ಪೆಕ್ಕರ್ಸ್ ಪಕ್ಷಿಗಳೂ ಕಂಡುಬರುತ್ತವೆ.

ರೆಡ್ ಬೇಸ್ ಜಾಸೇಬಲ್ಸ್, ರೆಡ್ ಹೆಲೆನ್ಸ್ ಮತ್ತು ಲಾರ್ಜ್ ಸಿಲ್ವರ್ ಸ್ಟ್ರೈಪ್ಸ್ ನಂತಹ ವೈವಿಧ್ಯಮಯ ಚಿಟ್ಟೆಗಳ ಪ್ರಭೇದಗಳನ್ನು ಸಾತ್ತಲ್ ನಲ್ಲಿ ಕಾಣಬಹುದಾಗಿದೆ. ಇವುಗಳಲ್ಲದೆ ಹಲವು ಅಳಿವಿನಂಚಿನಲ್ಲಿರುವ ಸಸ್ಯಗಳಾದ ಕ್ರೀಪರ್ಸ್, ಫರ್ನ್ಸ್, ಆರ್ಚಿಡ್ಸ್ ಮತ್ತು ಔಷಧೀಯ ಗುಣಣವುಳ್ಳ ಗಿಡಮೂಲಿಕೆಗಳನ್ನು ಪ್ರವಾಸಿಗರು ಈ ಪ್ರದೇಶದಲ್ಲಿ ಗಮನಿಸಬಹುದಾಗಿದೆ. ಇವುಗಳಲ್ಲದೆ, ಈ ಪ್ರದೇಶದಲ್ಲಿ ಹಲವು ಭೇಟಿಯೋಗ್ಯವಾದ ಜನಪ್ರಿಯ ಆಕರ್ಷಣೆಗಳನ್ನೂ ಕಾಣಬಹುದು. ಇಂತಹ ಕೆಲವು ಪ್ರಮುಖ ಆಕರ್ಷಣೆಗಳೆಂದರೆ, ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮ, ಬಟರ್ ಫ್ಲೈ ಮ್ಯೂಸಿಯಮ್ ಮತ್ತು ಸುಭಾಶ ಧಾರಾ.

ಸಾತ್ತಲ್ ತನ್ನ ಪ್ರಾಕೃತಿಕ ಸೌಂದರ್ಯದ ಹೊರತಾಗಿ, ಸಾಹಸಮಯ ಚಟುವಟಿಕೆಗಳನ್ನೂ ಹುರುದುಂಬಿಸುವ ತಾಣವಾಗಿದೆ. ಹೌದು, ಹಲವು ಸಾಹಸಮಯ ಚಟುವಟಿಕೆಗಳಾದ ಕ್ಯಾಂಪಿಂಗ್, ಟ್ರೆಕ್ಕಿಂಗ್, ಬೋಟಿಂಗ್ ಮತ್ತು ಮೌಂಟೆನ್ ಬೈಕಿಂಗ್ ನಂತಹ ರೋಮಾಂಚನಕಾರಿ ಅನುಭವಗಳನ್ನು ಪ್ರವಾಸಿಗರು ಪಡೆಯಬಹುದಾಗಿದೆ. ಇವುಗಳ ಜೊತೆಯಲ್ಲಿ ಈಗೀಗ ರಾಫ್ಟಿಂಗ್ ಮತ್ತು ಬಂಡೆ ಹತ್ತುವುದು ಕೂಡ ಜನಪ್ರಿಯವಾಗುತ್ತಿದೆ.

ಸಾತ್ತಲ್ ಅನ್ನು ಸುಲಭವಾಗಿ ತಲುಪಬಹುದಾಗಿದ್ದು, ಇದಕ್ಕೆ ಹತ್ತಿರದ ವಾಯುನೆಲೆ ಎಂದರೆ ಪಂತನಗರ್ ವಿಮಾನ ನಿಲ್ದಾಣ ಹಾಗು ರೈಲುತುದಿ ಎಂದರೆ ಕಾಥ್ಗೋಡಮ್ ರೈಲು ನಿಲ್ದಾಣ. ಸಾತ್ತಲ್ ನ ಸುತ್ತಮುತ್ತಲಿನ ಪಟ್ಟಣಗಳಿಂದಲೂ ಬಸ್ಸುಗಳ ಸಂಪರ್ಕ ಸುಗಮವಾಗಿದ್ದು ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ಮಾರ್ಚ್ ನಿಂದ ಜೂನ್ ಹಾಗು ಸೆಪ್ಟಂಬರ್ ನಿಂದ ನವಂಬರ್, ಈ ಕಾಲಾವಧಿಗಳನ್ನು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದವುಗಳೆಂದು ಪರಿಗಣಿಸಲಾಗಿದೆ.

ಸಾತ್ತಲ್ ಪ್ರಸಿದ್ಧವಾಗಿದೆ

ಸಾತ್ತಲ್ ಹವಾಮಾನ

ಉತ್ತಮ ಸಮಯ ಸಾತ್ತಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಾತ್ತಲ್

  • ರಸ್ತೆಯ ಮೂಲಕ
    ದೆಹಲಿಯಿಂದ ಖಾಸಗಿ ಹಾಗು ಸರ್ಕಾರಿ ಸ್ವಾಮ್ಯದ ಬಸ್ಸುಗಳೆರಡೂ ಸಾತ್ತಲ್ ಗೆ ಸಂಚರಿಸುತ್ತವೆ. ಇದಲ್ಲದೆ ಪ್ರವಾಸಿಗರು ನೈನಿತಾಲ್ ಹಾಗು ರಾಮ್ಗಡ್ ಗಳಿಂದಲೂ ಸಹ ಸಾತ್ತಲ್ ಗೆ ಬಸ್ಸುಗಳನ್ನು ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಾತ್ತಲ್ ಗೆ ಹತ್ತಿರದಲ್ಲಿರುವ ರೈಲುತುದಿ ಎಂದರೆ 36 ಕಿ.ಮೀ ಅಂತರದಲ್ಲಿರುವ ಕಾಥ್ಗೋಡಮ್ ರೈಲು ನಿಲ್ದಾಣ. ಈ ರೈಲು ನಿಲ್ದಾಣವು ಭಾರತದ ಇತರೆ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಈ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆದು ಸಾತ್ತಲ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಾತ್ತಲ್ ತಲುಪಲು ಹತ್ತಿರದ ವಿಮಾನ ನಿಲ್ದಾಣ ಪಂತನಗರ್ ದಲ್ಲಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಆಗಿದೆ. ಈ ಎರಡೂ ವಿಮಾನ ನಿಲ್ದಾಣಗಳು ಉತ್ತಮ ಸಂಪರ್ಕವನ್ನು ಹೊಂದಿವೆ. ಇನ್ನು ಪ್ರವಾಸಿಗರು ಪಂತನಗರ್ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆದು ಸಾತ್ತಲ್ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri