ಲಾನ್ಸ್ ಡೌನ್ - ಉತ್ಸಾಹವನ್ನು ಇಮ್ಮಡಿಗೊಳಿಸುವ ತಾಣ

ಉತ್ತರಖಂಡದಲ್ಲಿ ಪ್ರವಾಸಿಗರು ಮೆಚ್ಚಿಕೊಳ್ಳುವಂತಹ ಸಾಕಷ್ಟು ಸ್ಥಳಗಳಿವೆ. ಎಲ್ಲಾ ಸ್ಥಳಗಳೂ ಒಂದೊಂದು ಇತಿಹಾಸವನ್ನು, ಒಂದೊಂದು ವೈಶಿಷ್ಟ್ಯತೆಗಳನ್ನು ಹೊಂದಿವೆ. ಇಲ್ಲಿಗೆ ರಜಾ ದಿನಗಳನ್ನು ಕಳೆಯಲು ಬರುವುದು ಎಂದರೇ ಎಲ್ಲಿಲ್ಲದ ಖುಷಿ! ಇಲ್ಲಿಗೆ ಬರುವ ಸಾಕಷ್ಟು ಪ್ರವಾಸಿಗರು, ಯಾತ್ರಿಗಳೂ ಕೂಡಾ ಆಗಿದ್ದಾರೆ. ಏಕೆಂದರೆ ಇಲ್ಲಿರುವ ದೇವಾಲಯಗಳು ಹಲವು ವಿಶಿಷ್ಟತೆಗಳಿಂದ ಕೂಡಿವೆ. ಇಂತಹುದೆ ಒಂದು ಸುಂದರ ಹಾಗು ಸಾಹಸಿಗಳಿಗೆ ನೆಚ್ಚಿನ ಸ್ಥಳ ಉತ್ತರಖಂಡದ ಲಾನ್ಸ್ ಡೌನ್ ಪಟ್ಟಣ.

ಲಾನ್ಸ್ ಡೌನ್ ಉತ್ತರಖಂಡದ ಪೌರಿ ಜಿಲ್ಲೆಯಲ್ಲಿರುವ ಒಂದು ದಂಡು(ಕಾಂಟೋನ್ಮೆಂಟ್)ಪಟ್ಟಣ. ಇದು ಸಮುದ್ರ ಮಟ್ಟದಿಂದ 1706 ಮೀಟರ್ ಎತ್ತರದಲ್ಲಿ ನೆಲೆಸಿರುವ ಒಂದು ಸುಂದರ ಗಿರಿಧಾಮ. ಸ್ಥಳೀಯ ಭಾಷೆಯಲ್ಲಿ, ಈ ಸ್ಥಳವು 'ಕಲುದಂದ' ಅದರ ಅರ್ಥ 'ಕಪ್ಪು ಬೆಟ್ಟ' ಎಂದು ಕರೆಯಲ್ಪಡುತ್ತದೆ. ಈ ಗಿರಿಧಾಮ 1887, ಭಾರತದ ಆಗಿನ ವೈಸ್ರಾಯ್ ಲಾರ್ಡ್ ಲಾನ್ಸ್ ಡೌನ್ ನಿಂದ ಸ್ಥಾಪಿಸಲಾಯಿತು.

ಈ ಸ್ಥಳವು ಗಡ್ವಾಲ್ ರೈಫಲ್ಸ್ ನೇಮಕಾತಿಗಳಿಗೆಂದು ಬ್ರಿಟೀಷರಿಂದ ತರಬೇತಿ ಕೇಂದ್ರವಾಗಿ ಅಭಿವೃದ್ಧಿಗೊಲಿಸಲ್ಪಟ್ಟಿತು. ಈ ಪ್ರದೇಶವು ವಸಾಹತುಕರಣದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವಾಗಿತ್ತು. ಪ್ರಸ್ತುತ ಭಾರತೀಯ ಸೇನೆಯ ಗಡ್ವಾಲ್ ರೈಫಲ್ಸ್ ಕಮಾಂಡ್ ಕಚೇರಿ ಇಲ್ಲಿ ಸ್ಥಾಪಿತವಾಗಿದೆ.  ಲಾನ್ಸ್ ಡೌನ್ ತನ್ನ ಸುತ್ತಲಿನ ಹಚ್ಚ ಹಸಿರಿನ ಓಕ್, ಪೈನ್ ಮೊದಲಾದ ಮರಗಳ ಸುಂದರವಾದ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಜೊತೆಗೆ ಈ ಬೆಟ್ಟಗಳ ಪ್ರದೇಶವು/ಗಿರಿಧಾಮವು ಪರಿಸರ ಪ್ರಯಾಣಕ್ಕೂ ಸೂಕ್ತವಾದ ಸ್ಥಳವಾಗಿದೆ.

ಪಟ್ಟಣದ ಸುತ್ತಲೂ  ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಅವುಗಳಲ್ಲಿ ಒಂದು ಕಣ್ವಾಶ್ರಮ, ದೇವಸ್ಥಾನದ ನಗರ ಪುರಿಯ ಮಹಾದ್ವಾರವೆನಿಸಿದ ಪ್ರಸಿದ್ಧ ಆಶ್ರಮ. ಈ ಆಶ್ರಮವು ಸುತ್ತಲೂ ಸುಂದರ ಹಸಿರು ಕಾಡುಗಳನ್ನು ಹೊಂದಿದ್ದು ಮತ್ತು ಮಾಲಿನಿ ನದಿಯು ಇದರ ಹತ್ತಿರ ಹರಿಯುತ್ತದೆ. ಹಿಂದೂ ಪುರಾಣದ ಪ್ರಕಾರ, ಜನಪ್ರಿಯ ಋಷಿ ವಿಶ್ವಾಮಿತ್ರ ಈ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದರು. ಇಲ್ಲಿ ಇನ್ನೊಂದು ಪ್ರಖ್ಯಾತ ಧಾರ್ಮಿಕ ಸ್ಥಳ ಹಿಂದೂ ಶಿವ ದೇವರನ್ನು ಪೂಜಿಸುವ ತರ್ಕೇಶ್ವರ ಮಹಾದೇವ ದೇವಾಲಯ. ದೇವಸ್ಥಾನವು ಸಮುದ್ರ ಮಟ್ಟದಿಂದ 2092 ಮೀಟರ್ ಎತ್ತರದಲ್ಲಿ ಒಂದು ಬೆಟ್ಟದ ಮೇಲೆ ಇದೆ. ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಈ ಸ್ಥಳದ ಪ್ರಮುಖ ಪ್ರವಾಸಿ ಆಕರ್ಷಣೆಗಳ ನಡುವೆ  ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಯುದ್ಧ ಸ್ಮಾರಕ ಮತ್ತು ಗಡ್ವಾಲಿ ಮೆಸ್ ಪ್ರಸಿದ್ಧವಾಗಿದೆ. ಯುದ್ಧ ಸ್ಮಾರಕವು, ಭಾರತದ ಮುಖ್ಯ ಕಮಾಂಡರ್ ಟ್ರೆಂಟ್ ಲಾರ್ಡ್ ಸನ್ ನಿಂದ 11 ನವೆಂಬರ್, 1923 ರಂದು ಸ್ಥಾಪಿಸಲಾಯಿತು. ಗಡ್ವಾಲಿ ಮೆಸ್ 1888 ರಲ್ಲಿ ಬ್ರಿಟಿಷರು ನಿರ್ಮಿಸಿದ ಹಳೆಯ ಕಟ್ಟಡಗಳಲ್ಲಿ ಒಂದಾಗಿದೆ. ಈಗ ಏಷ್ಯಾದ ಪ್ರಮುಖ ವಸ್ತು ಸಂಗ್ರಹಾಲಯ ಎಂದು ಪರಿಗಣಿಸಲಾಗುತ್ತದೆ.

ಭುಲ್ಲಾ ತಾಲ್, ಲಾನ್ಸ್ ಡೌನ್ ನ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ಗಡ್ವಾಲ್ ರೈಫಲ್ಸ್ ಯುವ ಯೋಧರಿಗೆ ಅರ್ಪಿತವಾದ ಒಂದು ಸುಂದರ ಕೃತಕ ಸರೋವರವಾಗಿದೆ. ಈ ಸರೋವರದ ಹೆಸರು ಗಡ್ವಾಲಿ ಪದದಿಂದ ಹುಟ್ಟಿಕೊಂಡಿದೆ, 'ಭುಲ್ಲಾ' ಪದದ ಅರ್ಥ 'ಕಿರಿಯ ಸಹೋದರ' ಎಂದು.  ಪ್ರವಾಸಿಗರು ಬೋಟಿಂಗ್ ಹಾಗೂ ಪೆಡಲಿಂಗ್ ಇನ್ನೂ ಮುಂತಾದ ಚಟುವಟಿಕೆಗಳನ್ನು ಈ ಸರೋವರದಲ್ಲಿ  ಆನಂದಿಸಬಹುದು. ಭುಲ್ಲಾ ತಾಲ್ ಒಂದು ಮಕ್ಕಳ ಉದ್ಯಾನ, ಬಿದಿರಿನ ಅಟ್ಟಣೆ ಮತ್ತು ಸುಂದರ ಕಾರಂಜಿಗಳನ್ನೂ ಒಳಗೊಂಡಿದೆ.

ರಾಯಲ್ ಇಂಜಿನಿಯರ್ಸ್ ನ ಕರ್ನಲ್ ಎ.ಹೆಚ್.ಬಿ. ಹ್ಯೂಮ್ ಅವರಿಂದ 1895 ರಲ್ಲಿ ನಿರ್ಮಿಸಲಾದ ಸೇಂಟ್ ಮೇರಿ ಚರ್ಚ್, ಒಂದು ಮೌಲ್ಯಯುತ, ಭೇಟಿ ಮಾಡಬಹುದಾದ ಸ್ಥಳವಾಗಿದೆ. ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಸೆಂಟರ್, ಇದನ್ನು ಪುನಃಸ್ಥಾಪಿಸಲು ಪ್ರಯತ್ನಿಸಿ 1947 ರಲ್ಲಿ ಕೈಬಿಡಲಾಯಿತು. ನಂತರ ಚರ್ಚ್ ಅನ್ನು ಭಾರತದ ಸ್ವಾತಂತ್ರ್ಯ ಪೂರ್ವ ಯುಗದ ಚಿತ್ರಗಳನ್ನು ಪ್ರದರ್ಶಿಸುವುದಕ್ಕಾಗಿ ಬಳಸಲಾಗುತ್ತದೆ. ರೆಜಿಮೆಂಟಲ್ ಮ್ಯೂಸಿಯಂ, ದುರ್ಗಾ ದೇವಿ ದೇವಸ್ಥಾನ, ಸೇಂಟ್ ಜಾನ್ಸ್ ಚರ್ಚ್, ಹವಾಘರ್/ಡ್ ಮತ್ತು ಟಿಪ್ ಇನ್ ಟಾಪ್ ಈ ಗಮ್ಯಸ್ಥಾನದ ಕೆಲವು ಇತರ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು.

ಸಾಹಸ ಉತ್ಸಾಹಿಗಳು ಈ ಪ್ರದೇಶದಲ್ಲಿ ಚಾರಣ ಮಾಡುವಿಕೆ ಮತ್ತು ಜಂಗಲ್ ಸಫಾರಿಯನ್ನು ಆನಂದಿಸಬಹುದು. ಇಡೀ ಪ್ರದೇಶದಲ್ಲಿ ಅತ್ಯುತ್ತಮ ಚಾರಣ ಮಾಡುವಿಕೆ ಮಾರ್ಗ ಎಂದರೆ ಲೌವರ್ಸ್ ಲೇನ್. ಇದು ವಿಸ್ಮಯಕಾರಿಯಾದ ಚಾರಣದ ಅವಕಾಶಗಳನ್ನು ಒದಗಿಸುತ್ತದೆ. ಸಮೃದ್ಧ ಹಸಿರು ಕಾಡುಗಳು ಪ್ರದೇಶದ ಮಧ್ಯೆ ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲಗಳು ವಿಫುಲವಾಗಿವೆ. ಪ್ರವಾಸಿಗರು ಇಲ್ಲಿನ ಸುಂದರ ಕಾಡುಗಳಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ನಡೆಯಬಹುದು. ಜಂಗಲ್ ಸಫಾರಿಗಳು ಮತ್ತು ಚಾರಣವನ್ನು ಯೋಗ್ಯ ಬೆಲೆಗೆ ಸಂಘಟಿಸುವ ಅನೇಕ ಪ್ರವಾಸ ನಿರ್ವಾಹಕರು ಪ್ರವಾಸಿಗರಿಗೆ ಸಹಾಯಮಾಡುತ್ತಾರೆ.

ಲಾನ್ಸ್ ಡೌನ್ ಅನ್ನು ಸುಲಭವಾಗಿ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದಾಗಿದೆ. ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಮತ್ತು ಕೋತ್ವಾರ ರೈಲ್ವೆ ನಿಲ್ದಾಣವು ಈ ಸ್ಥಳಕ್ಕೆ  ಅತ್ಯಂತ ಹತ್ತಿರದ ವಾಯುನೆಲೆ ಮತ್ತು ರೈಲು ನಿಲ್ದಾಣವಾಗಿದೆ.

ಮಾರ್ಚ್ ತಿಂಗಳಿನಿಂದ ನವೆಂಬರ್ ಅವಧಿಯವರೆಗೆ ಹವಾಮಾನ ಅನುಕೂಲಕರವಾಗಿರುವುದರಿಂದ ಈ ಸುಂದರ ತಾಣವನ್ನು ಅನ್ವೇಷಿಸಲು ಉತ್ತಮ ಸಮಯವಾಗಿದೆ.

Please Wait while comments are loading...