Search
 • Follow NativePlanet
Share
ಮುಖಪುಟ » ಸ್ಥಳಗಳು» ರುದ್ರಪ್ರಯಾಗ್

ರುದ್ರಪ್ರಯಾಗ - ರುದ್ರನ ಧಾರ್ಮಿಕ ನೆಲೆ

24

ರುದ್ರಪ್ರಯಾಗ ಶಿವನ ನೆಲೆವೀಡು ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಪುರಾಣದಲ್ಲಿ ಪ್ರಸ್ತಾಪವಿರುವ ಹಲವಾರು ಧಾರ್ಮಿಕ ಸ್ಥಳಗಳನ್ನು ಕಾಣಬಹುದು. ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದಾದ ಈ ಸ್ಥಳಕ್ಕೆ ಹಿಮಾಲಯದ ಬೃಹತ್ ಮುಚ್ಚಳವಿದೆ ಅರ್ಥಾತ್ ಸುತ್ತಲೂ ಆವರಿಸಿದೆ. ಈ ಅದ್ಭುತ ದೃಶ್ಯವನ್ನು ಈ ಸ್ಥಳಕ್ಕೆ ಭೇಟಿ ನೀಡಿದ ನಂತರವಷ್ಟೇ ಅನುಭವಿಸಬಹುದು. ಸುಂದರ ನಾಡು ರುದ್ರಪ್ರಯಾಗದ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದು ಇಲ್ಲಿದೆ.

ರುದ್ರಪ್ರಯಾಗ ಉತ್ತರಖಂಡದ ಒಂದು ಸಣ್ಣ ಪಟ್ಟಣ. 'ರುದ್ರ', ಎಂಬ ಪದ ಹಿಂದೂ ದೇವತೆ, ಶಿವನ ಅವತಾರ ರುದ್ರ ಎಂಬ ಪದದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹಿಂದೂ ಪುರಾಣದ ಪ್ರಕಾರ, ನಾರದ ಮುನಿಯು ಈ ಸ್ಥಳದಲ್ಲಿ ರುದ್ರನಿಂದ ಆಶೀರ್ವಾದ ಪಡೆದಿದ್ದನು ಎಂದು ಹೇಳಲಾಗುತ್ತದೆ. ರುದ್ರಪ್ರಯಾಗ ಈ ಮೊದಲು ಮೂರು ಜಿಲ್ಲೆಗಳಾದ, ಚಮೋಲಿ, ಪೌರಿ ಮತ್ತು ತೆಹ್ರಿ ಯ ಭಾಗವಾಗಿತ್ತು. ಇದನ್ನು 1997, ಸೆಪ್ಟೆಂಬರ್ 16 ರಲ್ಲಿ  ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ಈ ಪಟ್ಟಣವು ಒಮ್ಮುಖವಾಗಿ ಹರಿಯುವ ಮಂದಾಕಿನಿ ಮತ್ತು ಅಲಕನಂದಾ ನದಿಗಳ ಮೇಲೆ ನೆಲೆಗೊಂಡಿದೆ.

ಪ್ರವಾಸಿಗರು, ರುದ್ರಪ್ರಯಾಗ ದೇವಾಲಯದ ಸಮೀಪದಲ್ಲಿರುವ ಜಗದಂಬಾ ದೇವಾಲಯಕ್ಕೂ ಭೇಟಿ ಮಾಡಬಹುದು. ಅಗಸ್ತ್ಯಮುನಿ ಪಟ್ಟಣದ, ಅಗಸ್ತೇಶ್ವರ  ಮಹಾದೇವ ದೇವಾಲಯಕ್ಕೂ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಪುರಾಣದ ಪ್ರಕಾರ, ಅಗಸ್ತ್ಯಮುನಿ ಅನೇಕ ವರ್ಷಗಳ ಕಾಲ ಈ ಸ್ಥಳದಲ್ಲಿ  ಧ್ಯಾನಮಾಡಿದ್ದರು ಎನ್ನಲಾಗುತ್ತದೆ.

ಡಿಯೋರಿಯಾ ತಾಲ್, ರುದ್ರಪ್ರಯಾಗದಲ್ಲಿ ಭೇಟಿ ಮಾಡಲೇ ಬೇಕಾದ ಒಂದು ಮೋಡಿಮಾಡುವ ಕೆರೆ. ಇದು ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿದೆ. ಈ ಸರೋವರದ ಚೌಕಂಬಾ ಶ್ರೇಣಿಗಳ ಜೊತೆಗೆ ಗಂಗೋತ್ರಿ, ಬದರಿನಾಥ್, ಕೇದಾರ್ನಾಥ್, ಯಮುನೋತ್ರಿ ಮತ್ತು ನೀಲಕಂಠ ಶಿಖರಗಳ ರುದ್ರರಮಣೀಯ ಪ್ರತಿಫಲನಗಳ ನೋಟಗಳನ್ನು ಒದಗಿಸುತ್ತದೆ. ಪಕ್ಷಿವೀಕ್ಷಣೆ, ದೋಣಿ ವಿಹಾರ ಮತ್ತು ಆಂಗ್ಲಿಂಗ್ (ಗಾಳ ಹಾಕುವುದು) ಇಲ್ಲಿ ಅನುಭವಿಸವಹುದಾದಂತಹ ಜನಪ್ರಿಯ ಚಟುವಟಿಕೆಗಳು.

ಪ್ರವಾಸಿಗರು, ರುದ್ರಪ್ರಯಾಗದ ಒಂದು ಸಣ್ಣ ಗ್ರಾಮವಾದ ತ್ರಿಯುಗಿನಾರಾಯಣ್ ನಲ್ಲಿ ನಿರಂತರ ಉರಿಯುತ್ತಿರುವ ಜ್ವಾಲೆಯನ್ನು ಹೊಂದಿರುವ ಹವನ ಕುಂಡವನ್ನು ನೋಡಬಹುದು. ನಂಬಿಕೆಗಳ ಪ್ರಕಾರ, ಈ ಗ್ರಾಮದ ದೇವತೆ ಪಾರ್ವತಿಯು, ಈ ಹವನ ಕುಂಡದ ಅಗ್ನಿ ಸಾಕ್ಷಿಯಾಗಿ ಶಿವನನ್ನು ಮದುವೆಯಾದಳು. ಅಲ್ಲದೇ ಇದು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು.

ರುದ್ರಪ್ರಯಾಗದ ಇತರ ಪ್ರಮುಖ ಪ್ರವಾಸಿ ತಾಣಗಳೆಂದರೆ ಗುಪ್ತಕಾಶಿ, ಉಖಿಮಠ, ವಾಸುಕಿ ತಾಲ್, ಜಖೋಲಿ ಮತ್ತು ತುಂಗಾನಾಥ್ ಮೊದಲಾದವು. ಅಲ್ಲದೇ ಪ್ರವಾಸಿಗರು ಕಲಿಮಠ, ಕಾರ್ತಿಕ ಸ್ವಾಮಿ ದೇವಸ್ಥಾನ, ಇಂದ್ರಸಾನಿ, ಮಾನಸ ದೇವಿ ದೇವಾಲಯ, ಚಂದ್ರಶೀಲ, ಮಾ ಹರಿಯಾಲಿ ದೇವಿ ದೇವಸ್ಥಾನ, ಕೋಟೇಶ್ವರ ದೇವಸ್ಥಾನ ಮತ್ತು ಮದ್ ಮಹೇಶ್ವರಕ್ಕೂ ಹೋಗಬಹುದು.

ರುದ್ರಪ್ರಯಾಗ ಪಟ್ಟಣವು ಉತ್ತಮವಾದ ವಿಮಾನ, ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಹವಾಮಾನವು ಅನುಕೂಲಕರವಾಗಿರುವುದರಿಂದ ಪ್ರವಾಸಿಗರು ಬೇಸಿಗೆಯಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಒಳ್ಳೆಯದು.

ರುದ್ರಪ್ರಯಾಗ್ ಪ್ರಸಿದ್ಧವಾಗಿದೆ

ರುದ್ರಪ್ರಯಾಗ್ ಹವಾಮಾನ

ರುದ್ರಪ್ರಯಾಗ್
21oC / 69oF
 • Sunny
 • Wind: NE 6 km/h

ಉತ್ತಮ ಸಮಯ ರುದ್ರಪ್ರಯಾಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರುದ್ರಪ್ರಯಾಗ್

 • ರಸ್ತೆಯ ಮೂಲಕ
  ಪ್ರವಾಸಿಗರು ಬಸ್ಸುಗಳ ಮೂಲಕವೂ ರುದ್ರಪ್ರಯಾಗವನ್ನು ತಲುಪಬಹುದು. ಈ ಸ್ಥಳವು ದೆಹಲಿಯಿಂದ ಬದರೀನಾಥ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ - 58 ರ ಮೇಲೆ ನೆಲೆಸಿದೆ. ಬೇಸಿಗೆಯಲ್ಲಿ, ದೆಹಲಿಯಿಂದ ಬದರೀನಾಥ್ ಗೆ ಪ್ರಯಾಣ ಮಾಡುವ ಎಲ್ಲಾ ಬಸ್ಸುಗಳು ಜೋಶಿಮಠ್ ಮಾರ್ಗವಾಗಿ ರುದ್ರಪ್ರಯಾಗದ ಮೂಲಕ ಹಾದು ಹೋಗುತ್ತವೆ. ರಿಷಿಕೇಶ್ ನಿಂದ ರುದ್ರಪ್ರಯಾಗ ಸ್ಥಳಕ್ಕೆ ನಿರಂತರವಾಗಿ ಬಸ್ ಸಂಚಾರವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಿಷಿಕೇಶ್ ರೈಲು ನಿಲ್ದಾಣ ರುದ್ರಪ್ರಯಾಗಕ್ಕೆ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಇದು ಕೆಲವು ರೈಲುಗಳ ಸಂಪರ್ಕವನ್ನು ಹೊಂದಿರುವ ಒಂದು ಸಣ್ಣ ರೈಲ್ವೆ ನಿಲ್ದಾಣ. ಪ್ರವಾಸಿಗರು ರಿಷಿಕೇಶ್ ನಿಂದ 24 ಕಿ. ಮೀ ದೂರದಲ್ಲಿರುವ, ಉತ್ತಮ ಸಂಪರ್ಕ ಹೊಂದಿರುವ ಹರಿದ್ವಾರ ರೈಲ್ವೆ ಜಂಕ್ಷನ್ ಮೂಲಕವೂ ಸ್ಥಳಕ್ಕೆ ಬರಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ರುದ್ರಪ್ರಯಾಗ ಪಟ್ಟಣದಿಂದ 183 ಕಿ. ಮೀ ದೂರದಲ್ಲಿದ್ದು ಹತ್ತಿರದ ವಾಯುನೆಲೆಯಾಗಿದೆ. ಈ ವಿಮಾನ ನಿಲ್ದಾಣದಿಂದ ರುದ್ರಪ್ರಯಾಗವನ್ನು ತಲುಪಲು ಕ್ಯಾಬ್ ಸೌಲಭ್ಯಗಳನ್ನು ಪಡೆಯಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Jul,Fri
Return On
11 Jul,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
10 Jul,Fri
Check Out
11 Jul,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
10 Jul,Fri
Return On
11 Jul,Sat
 • Today
  Rudraprayag
  21 OC
  69 OF
  UV Index: 6
  Sunny
 • Tomorrow
  Rudraprayag
  14 OC
  56 OF
  UV Index: 6
  Partly cloudy
 • Day After
  Rudraprayag
  14 OC
  58 OF
  UV Index: 6
  Partly cloudy