Search
  • Follow NativePlanet
Share
ಮುಖಪುಟ » ಸ್ಥಳಗಳು» ಕಥ್ಗೊಡಮ್

ಕಥ್ಗೊಡಮ್ - ಕುಮಾವೂನ್ ಪರ್ವತಗಳ ಹೆಬ್ಬಾಗಿಲು

6

'ಕುಮಾವೂನ್ ಬೆಟ್ಟಗಳ ದ್ವಾರ ' ದಂತಿರುವ ಕಥ್ಗೊಡಮ್, ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಗೌಲ ನದಿ ತೀರದಲ್ಲಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ 554 ಮೀ ಎತ್ತರದಲ್ಲಿದ್ದು, ಕುಮಾವೂನ್ ಹಿಮಾಲಯದ ತಪ್ಪಲಿನಲ್ಲಿದೆ. ಉತ್ತರಾಖಂಡದ ಎರಡನೇ ಅತಿದೊಡ್ಡ ಮುನ್ಸಿಪಲ್ ಕೌನ್ಸಿಲ್ ಆಗಿರುವ ಹಲ್ದ್ವಾನಿ-ಕಥ್ಗೊಡಮ್ ಕೌನ್ಸಿಲ್ 1942 ರಲ್ಲಿ ಸ್ಥಾಪಿತವಾಯಿತು. ಅಕ್ಷರಶಃ 'ಕಟ್ಟಿಗೆಯ ಉಗ್ರಾಣ' ಎಂಬ ಅರ್ಥ ಕೊಡುವ ನಾಮಧೇಯ ಉಳ್ಳ ಕಥ್ಗೊಡಮ್, ಜಿಲ್ಲೆಯ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಕುಮೌನಿ, ಹಿಂದಿ ಮತ್ತು ಗಡ್ವಾಲಿ ಇವು ಇಲ್ಲಿನ ಸ್ಥಳೀಯ ಭಾಷೆಗಳು.

ಈ ಮೊದಲು, ಕಥ್ಗೊಡಮ್ ಅತಿ ವಿರಳ ಜನಸಂಖ್ಯೆಯುಳ್ಳ (1901 ರಲ್ಲಿ 375) ಒಂದು ಕೊಂಪೆಯಾಗಿತ್ತು. ಆದರೆ 1909 ರಲ್ಲಿ ಬ್ರಿಟೀಷರು ತಯಾರಿಸಿದ ಭಾರತದ ರೈಲ್ವೆ ನಕಾಶೆಯಲ್ಲಿ ಗುರುತಿಸಲಾದಾಗಿನಿಂದ ಈ ಕೊಂಪೆಗೆ ಶುಕ್ರದೆಸೆ ಶುರುವಾಯಿತು. 1884 ರಲ್ಲಿ ಹಲ್ದ್ವಾನಿ ರೈಲುಮಾರ್ಗವನ್ನು ಕಥ್ಗೊಡಮ್ ಗೆ ವಿಸ್ತರಿಸಲಾಯಿತು. ಈಗ ಇದು ಉತ್ತರ ಪೂರ್ವ ರೈಲ್ವೆಯ ಕೊನೆಯ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. 'ಶೀತಲಾ ದೇವಿ' ಮತ್ತು 'ಕಲಿಚೌದ್' ಈ ಎರಡು ಹಿಂದೂ ದೇವಾಲಯಗಳು ಈ ಪ್ರದೇಶದ ಪ್ರಮುಖ ಆಕರ್ಷಣೆಗಳಾಗಿವೆ. ಹಬ್ಬ ಹರಿದಿನಗಳಂದು ಅನೇಕ ಭಕ್ತರು ಈ ದೇವಾಲಯಗಳಿಗೆ ಭೇಟಿ ನೀಡುವರು.

ಗೌಲ ನದಿಯೂ ಇಲ್ಲಿನ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಉತ್ತರಾಖಂಡದ ಸಾತ್ತಲ್ ಸರೋವರದಲ್ಲಿ  ಹುಟ್ಟಿ ಹಲ್ದ್ವಾನಿ ಮತ್ತು ಶಾಹಿಗಳಂತಹ  ವಿವಿಧ ಸ್ಥಳಗಳನ್ನು ದಾಟಿ ಮುಂದೆ ಹರಿಯುತ್ತದೆ. ಗೌಲ ಆಣೆಕಟ್ಟು ಎಂದು ಕರೆಯಲ್ಪಡುವ ಒಂದು ಅಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದ್ದು ಇದು ಒಂದು ಆದರ್ಶ ವಿಹಾರಿ ತಾಣವೂ ಆಗಿದೆ.

ಕಥ್ಗೊಡಮ್ ಗೆ ಭೇಟಿಗೆ ಬರುವ ಪ್ರವಾಸಿಗರು ಪಟ್ಟಣದಿಂದ ಕೇವಲ  21 ಕಿಮೀ ದೂರವಿರುವ ಸಣ್ಣ ಪಟ್ಟಣವಾದ ಭೀಮ್ತಲ್ ಗೂ ಸಹ ಭೇಟಿ ನೀಡಬಹುದು. ಇಲ್ಲಿ, ಪ್ರಕೃತಿ ಪ್ರೇಮಿಗಳ ಸ್ವರ್ಗವೆಂದೇ ಪರಿಗಣಿಸುವ, ನಿರಂತರವಾಗಿ ಹರಿಯುವ ಭೀಮ್ತಲ್ ಸರೋವರವಿದೆ. ಭಾರತೀಯ ಮಹಾಕಾವ್ಯ ಮಹಾಭಾರತದ ಒಂದು ಪೌರಾಣಿಕ ಪಾತ್ರವಾದ, ದ್ವಿತಿಯ ಪಾಂಡವನಾದ ಭೀಮನ ಹೆಸರನ್ನೇ ಪ್ರಸ್ತುತ ಸ್ಥಳಕ್ಕೂ ಇಡಲಾಗಿದೆ. ಸರೋವರದ ತೀರದಲ್ಲಿ ಭೀಮೇಶ್ವರ ಮಹಾದೇವ ದೇವಸ್ಥಾನ ಎಂಬ ಶಿವನ ಹಳೆಯ ದೇವಾಲಯವಿದೆ. ಇದನ್ನು  ಕುಮಾವೂನ್ ನ ದೊರೆ, ಬಾಜ್ ಬಹದ್ದೂರನು 17 ನೇ ಶತಮಾನದಲ್ಲಿ ನಿರ್ಮಿಸಿದ್ದನು. ಸರೋವರದ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ಮತ್ಸ್ಯಾಗಾರವಿದ್ದು ಇದೂ ಕೂಡ ಇಲ್ಲಿನ ಆಕರ್ಷಣೆಯಾಗಿದೆ.

ಮೋಹಕ ಸರೋವರಗಳ ನಗರವಾದ ನೈನಿತಾಲ್ ವು ಕಥ್ಗೊಡಮ್ ದಿಂದ  ಕೇವಲ 34 ಕಿಮೀ ದೂರವಿದ್ದು ರಸ್ತೆ ಮತ್ತು ರೈಲು ಮಾರ್ಗವಾಗಿ ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಅಲ್ಲದೇ ಕಥ್ಗೊಡಮ್ ನಿಂದ 23 ಕಿಮೀ ದೂರದಲ್ಲಿರುವ ಸಾತ್ತಲ್ ಗೂ ಪ್ರವಾಸಿಗರು ಭೇಟಿ ನೀಡಬಹುದು. ' ಸಾತ್ತಲ್ ' ನ ಅಕ್ಷರಶಃ ಅರ್ಥ ಏಳು ಸರೋವರಗಳು ಎಂದು. ಅದರ ಅರ್ಥದಂತೆ ಇಲ್ಲಿ ಏಳು ಅಂತರ್ಸಂಪರ್ಕಿತ ಸರೋವರಗಳಿವೆ. ತಾಜಾ ನೀರಿನ ಸರೋವರಗಳಾದ, ರಾಮ್ ತಾಲ್, ನೀಲ್ ದಮಯಂತಿ ತಾಲ್, ಲಕ್ಷ್ಮಣ್ ತಾಲ್, ಖುದಾರಿಯಾ ತಾಲ್, ಪೂರ್ಣಾ ತಾಲ್, ಸುಖ ತಾಲ್ ಮತ್ತು ಸೀತಾ ತಾಲ್ ಗಳು. ಇವಲ್ಲದೆ, ಕಾರ್ಬೆಟ್ ನೀರಿನ ಝರಿ ಮತ್ತು ಹೆಡ್ಖನ್ ಆಶ್ರಮ ಇವು  ಕೂಡ ಅಷ್ಟೇ ಜನಪ್ರಿಯ.

ಕಥ್ಗೊಡಮ್, ಪಂತನಗರ್ ಏರ್ಪೋರ್ಟ್ ನಿಂದ 71 ಕಿ ಮೀ  ದೂರವಿದೆ. ವಾಯುಯಾನ ಬಯಸುವ  ಪ್ರವಾಸಿಗರು ಇಲ್ಲಿಂದ ತಮ್ಮ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಈ ವಾಯುನೆಲೆಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಸಂಪರ್ಕವೂ ಇದೆ. IGI ಕಥ್ಗೊಡಮ್ ದ ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ, ಆದ್ದರಿಂದ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ IGI ವಿಮಾನನಿಲ್ದಾಣದಿಂದ ಪಂತನಗರ್ ಏರ್ಪೋರ್ಟ್ ಗೆ ಸಂಪರ್ಕ ವಿಮಾನಗಳು ಲಭ್ಯವಿವೆ. ಕಥ್ಗೊಡಮ್ ವು  ಉತ್ತರ ಪೂರ್ವದ ಕೊನೆಯ ರೈಲ್ವೆ ತುದಿಯಾಗಿದ್ದು, ಇಲ್ಲಿಂದ ಲಕ್ನೋ, ದೆಹಲಿ ಮತ್ತು ಹೌರಾಗಳಂತಹ ಪ್ರಮುಖ ಭಾರತೀಯ ನಗರಗಳಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ರಸ್ತೆ ಪ್ರಯಾಣ ಬಯಸುವ ಪ್ರವಾಸಿಗರು, NH-87 ಮಾರ್ಗದಲ್ಲಿ ಸಾಗಬೇಕಾಗಿದ್ದು, ಕಥ್ಗೊಡಮ್ ತಲುಪಲು ಘಾಜಿಯಾಬಾದ್, ದೆಹಲಿ, ನೈನಿತಾಲ್ ಮತ್ತು ಹಲ್ದ್ವಾನಿಗಳಿಂದ ಬಸ್ ಗಳು ಲಭ್ಯವಿವೆ.

ಕಥ್ಗೊಡಮ್ ನ ಹವಾಗುಣ ವರ್ಷದ ಹೆಚ್ಚುಕಾಲದಲ್ಲಿ  ಮಧ್ಯಮ ರೀತಿಯಲ್ಲಿರುತ್ತಿದ್ದು, ಬೇಸಿಗೆಯು ಏಪ್ರಿಲ್ ನಿಂದ ಜೂನ್ ತನಕ ವ್ಯಾಪಿಸಿರುತ್ತದೆ. ಈ ಸಮಯದಲ್ಲಿ ಸ್ಥಳದ ತಾಪಮಾನ 30°C ಮತ್ತು 15°C ಗಳ ಆಸುಪಾಸಿನಲ್ಲಿರುತ್ತದೆ. ಜುಲೈ ನಿಂದ ನವೆಂಬರ್ ತಿಂಗಳಲ್ಲಿ ತಾಪಮಾನವು ತಂಪಾಗಿದ್ದು ಆಹ್ಲಾದಕರವಾಗಿರುವುದರಿಂದ ಈ ಸಮಯವು ಪ್ರವಾಸಕ್ಕೆ ಪ್ರಶಸ್ತವಾಗಿರುತ್ತದೆ.

ಕಥ್ಗೊಡಮ್ ಪ್ರಸಿದ್ಧವಾಗಿದೆ

ಕಥ್ಗೊಡಮ್ ಹವಾಮಾನ

ಉತ್ತಮ ಸಮಯ ಕಥ್ಗೊಡಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಥ್ಗೊಡಮ್

  • ರಸ್ತೆಯ ಮೂಲಕ
    ರಸ್ತೆ ಪ್ರಯಾಣ ಬಯಸುವ ಪ್ರವಾಸಿಗರು, NH-87 ಮಾರ್ಗದಲ್ಲಿ ಸಾಗಬೇಕಾಗಿದ್ದು, ಕಥ್ಗೊಡಮ್ ತಲುಪಲು ಘಾಜಿಯಾಬಾದ್, ದೆಹಲಿ, ನೈನಿತಾಲ್, ಮತ್ತು ಹಲ್ದ್ವಾನಿಗಳಿಂದ ಬಸ್ ಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಥ್ಗೊಡಮ್ ವು ಉತ್ತರ ಪೂರ್ವದ ಕೊನೆಯ ರೈಲ್ವೆ ತುದಿಯಾಗಿದ್ದು, ಇಲ್ಲಿಂದ ಲಕ್ನೋ, ದೆಹಲಿ ಮತ್ತು ಹೌರಾಗಳಂತಹ ಪ್ರಮುಖ ಭಾರತೀಯ ನಗರಗಳಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಥ್ಗೊಡಮ್, ಪಂತನಗರ್ ಏರ್ಪೋರ್ಟ್ ನಿಂದ 71 ಕಿ ಮೀ ದೂರವಿದೆ. ವಾಯುಯಾನ ಬಯಸುವ ಪ್ರವಾಸಿಗರು ಇಲ್ಲಿಂದ ತಮ್ಮ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಈ ವಾಯುನೆಲೆಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಸಂಪರ್ಕವೂ ಇದೆ. IGI ಕಥ್ಗೊಡಮ್ ದ ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ, ಆದ್ದರಿಂದ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ IGI ವಿಮಾನನಿಲ್ದಾಣದಿಂದ ಪಂತನಗರ್ ಏರ್ಪೋರ್ಟ್ ಗೆ ಸಂಪರ್ಕ ವಿಮಾನಗಳು ಲಭ್ಯವಿವೆ. ಪಂತನಗರ್ ಏರ್ಪೋರ್ಟ್ ನಿಂದ ನಗರಕ್ಕೆ ಟ್ಯಾಕ್ಸಿ, ಕ್ಯಾಬಗಳು ಲಭ್ಯವಿರುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat