ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ

ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೈಸರ್ಗಿಕ ಸೌಂದರ್ಯ ಎಂತಹವರನ್ನಾದರೂ ಮೌನಿಯನ್ನಾಗಿಸಿ ಬಿಡುತ್ತದೆ!

ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ. 5 ಕಿಮೀ ಉದ್ದದ ಈ ಪರ್ವತ ಸುಯಲ್ ಮತ್ತು ಕೊಸಿ ನದಿಯ ನಡುವೆ ಇದೆ. ಸಮುದ್ರ ಮಟ್ಟದಿಂದ 1651 ಮೀಟರ್ ಎತ್ತರದಲ್ಲಿರುವ ಈ ಬೆಟ್ಟದ ಪಟ್ಟಣ, ಸುಂದರ ಹಸಿರು ಕಾಡುಗಳಿಂದ ಸುತ್ತುವರೆದಿದೆ. ಚಂದ್ ಮತ್ತು ಕತ್ಯೂಕ್ ರಾಜವಂಶದರು 15 ಮತ್ತು 16 ನೇ ಶತಮಾನಗಳ ಅವಧಿಯಲ್ಲಿ ಈ ಪ್ರದೇಶವನ್ನು ಆಳಿದ್ದರು.

ಪ್ರವಾಸಿಗರು ಅಲ್ಮೋರಾ ಬೆಟ್ಟಗಳ ಮೇಲಿನಿಂದ ಬೃಹತ್ ಹಿಮಾಲಯದ ಹಿಮಮಯ ಶೃಂಗಗಳ ದೃಶ್ಯಾವಳಿಗಳನ್ನು ಆನಂದಿಸಬಹುದು. ಈ ಸ್ಥಳದಲ್ಲಿ ಪ್ರತಿ ವರ್ಷ ಜಗತ್ತಿನಾದ್ಯಂತ ಎಲ್ಲ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಆಕರ್ಷಣೀಯ ತಾಣಗಳಿವೆ. ಕಸಾರ್ ದೇವಿ ದೇವಸ್ಥಾನ, ನಂದಾ ದೇವಿ ದೇವಸ್ಥಾನ, ಚಿತೈದೇವಸ್ಥಾನ ಮತ್ತು  ಕತರ್ಮಲ್ ಸೂರ್ಯ/ಸನ್ ದೇವಾಲಯ ಇಲ್ಲಿನ ಇನ್ನಿತರ ಜನಪ್ರಿಯ ಧಾರ್ಮಿಕ ಕೇಂದ್ರಗಳು.

ನಂದಾ ದೇವಿ ದೇವಾಲಯ ಕುಮೌನಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಪ್ರಾಚೀನ ದೇವಾಲಯ. ಈ ದೇವಸ್ಥಾನದಲ್ಲಿ ಚಂದ್ ವಂಶದ ಕುಲ ದೇವರನ್ನು ಪೂಜಿಸಲಾಗುತ್ತದೆ. ಇಲ್ಲಿಗೆ ಪ್ರತಿ ವರ್ಷ ಭಕ್ತಾದಿಗಳು ಗುಂಪುಗುಂಪಾಗಿ ಆಗಮಿಸುತ್ತಾರೆ. ಇಲ್ಲಿನ ಇನ್ನೊಂದು ಪ್ರಸಿದ್ಧ ದೇವಾಲಯ ಕಸರ್ ದೇವಿ ದೇವಾಲಯ, ಇದು ಅಲ್ಮೋರಾದಿಂದ 5 ಕಿ. ಮೀ ದೂರದಲ್ಲಿದೆ. ಈ ದೇವಾಲಯವು 2 ನೇ ಶತಮಾನದಲ್ಲಿ ನಿರ್ಮಿತವಾಗಿದೆ ಮತ್ತು ಸ್ವಾಮಿ ವಿವೇಕಾನಂದರು ಇಲ್ಲಿ ತಪಸ್ಸು ಮಾಡುತ್ತಿದ್ದರು ಎಂದು ನಂಬಲಾಗಿದೆ.

ಇಲ್ಲಿಗೆ ಭೇಟಿ  ನೀಡುವ ಪ್ರವಾಸಿಗರು ಅತ್ಯಂತ ಅದ್ಭುತವಾದ ಸುರ್ಯೋದಯ ಮತ್ತು 'ಬ್ರೈಟ್' ಸೂರ್ಯಾಸ್ತವನ್ನು ಬ್ರೈಟ್ ಎಂಡ್ ಮೂಲೆ/ಕಾರ್ನರ್ ನಿಂದ ವೀಕ್ಷಿಸಬಹುದು. ಸಿಮ್ತೊಲಾ ಮತ್ತು ಮಾತೋಲಾಗಳು ಪ್ರವಾಸಿಗರಿಗೆ ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿವೆ. ಅಲ್ಮೋರಾ ಪಟ್ಟಣದಿಂದ ಸುಮಾರು 3 ಕಿ. ಮೀ ದೂರದಲ್ಲಿರುವ ಜಿಂಕೆ ಉದ್ಯಾನ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಈ ಉದ್ಯಾನವು ಜಿಂಕೆ, ಚಿರತೆ, ಹಿಮಾಲಯದ ಕಪ್ಪು ಕರಡಿ ಮುಂತಾದ ಪ್ರಾಣಿಗಳಿಗೆ ನೆಲೆಯಾಗಿದೆ. ಅಲ್ಲದೇ, ಈ ಸ್ಥಳದ ಕೆಲವು ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಗೋಬಿಂದ್ ಬಲ್ಲಭ್ ಪಂಥ್ ಪಬ್ಲಿಕ್ ವಸ್ತು ಸಂಗ್ರಹಾಲಯ ಮತ್ತು ಬಿನ್ಸರ್ ವನ್ಯಜೀವಿಗಳ ಅಭಯಾರಣ್ಯಗಳೂ ಸೇರಿವೆ. ಇಲ್ಲಿನ ಚಾರಣ ಮತ್ತು ಮೌಂಟೇನ್ ಬೈಕಿಂಗ್ ಪ್ರವಾಸಿಗರ ನಡುವೆ ಜನಪ್ರಿಯತೆ ಪಡೆದ ಚಟುವಟಿಕೆಗಳು.

ಅಲ್ಮೋರಾವನ್ನು ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ವಾಯು, ರೈಲು ಮತ್ತು ರಸ್ತೆಯ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಇದಕ್ಕೆ ಹತ್ತಿರದಲ್ಲಿರುವ ವಾಯು ನಿಲ್ದಾಣ ಮತ್ತು ರೈಲು ನಿಲ್ದಾಣ ಕ್ರಮವಾಗಿ ಪಂತನಗರ್ ಮತ್ತು ಕಾಥ್ಗೋಡಮ್ ಪ್ರದೇಶಗಳಲ್ಲಿವೆ.

ಈ ಸುಂದರ ತಾಣದಲ್ಲಿ ಬೇಸಿಗೆ ಉತ್ತಮ ಹವಾಮಾನ ಹೊಂದಿರುವುದರಿಂದ ಈ ಸಮಯದಲ್ಲಿಯೇ ಭೇಟಿ ನೀಡುವುದು ಒಳ್ಳೆಯದು.

Please Wait while comments are loading...