ಚಾರಣ, ಅಲ್ಮೋರಾ

ಚಾರಣ/ಟ್ರೆಕ್ಕಿಂಗ್, ಅಲ್ಮೋರಾ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ನಡುವೆ ಜನಪ್ರಿಯ ಚಟುವಟಿಕೆಯಾಗಿ ಗುರುತಿಸಿಕೊಂಡಿದೆ. ಈ ಸ್ಥಳದಿಂದ 5 ಕಿ. ಮೀ ಉದ್ದದ ಟ್ರೆಕ್ಕಿಂಗ್ ಮಾರ್ಗ ಅಲ್ಮೋರಾ ಪರ್ವತ ಶ್ರೇಣಿಯ ಸೌಮ್ಯ ವೀಕ್ಷಣೆಗಳನ್ನು ಒದಗಿಸುತ್ತವೆ. ಇಲ್ಲಿ ಪ್ರಸಿದ್ಧ  ಹಾಗೂ ಆಸಕ್ತಿದಾಯಕ ಚಾರಣ ಮಾರ್ಗ  ಅಲ್ಮೋರಾದಿಂದ ಜಾಗೇಶ್ವರದ ವರೆಗೆ ಹೋಗುಗುವುದು. ಈ ಮಾರ್ಗದಲ್ಲಿ, ಟ್ರೆಕ್ಕಿಂಗ್ ಹೋಗುವವರು ಸಮೃದ್ಧ ಹಸಿರು ಹೊಲಗಳು ಮತ್ತು ಸುಂದರ ಕುಮೌನಿ ಹಳ್ಳಿಗಳ ಪರಿದೃಶ್ಯಗಳನ್ನು ನೋಡಿ ಆನಂದಿಸಬಹುದು.

ರೋಡೋಡೆನ್ಡ್ರೋನ್ ಮರಗಳು ದೇವದಾರು ಮರಗಳು, ಜಾಗೇಶ್ವರ ದೇವಾಲಯ ಸಂಕೀರ್ಣ ಮತ್ತು ವೃದ್ಧ್ ಜಾಗೇಶ್ವರ ಈ ಚಾರಣ ಯಾತ್ರೆಯ ಮುಖ್ಯ ಆಕರ್ಷಣೆಗಳು. ಧಾರ್ಮಿಕ ನಂಬಿಕೆಯುಳ್ಳವರು ಕಸರ್ ದೇವಿ ದೇವಸ್ಥಾನ ತಲುಪಲೂ ಈ ಮಾರ್ಗವನ್ನು ಬಳಸಬಹುದು. ಈ ಸ್ಥಳದಲ್ಲಿ ಚಾರಣಕ್ಕೆ ಉತ್ತಮ ಸಮಯ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗಿನ ಅವಧಿ.

ಪಿಂಡಾರಿಯು ಚಾರಣ ಸಾಹಸ ಪ್ರಿಯರಿಗೆ ಇಷ್ಟವಾಗುವ ಮತ್ತೊಂದು ಜನಪ್ರಿಯ ಮಾರ್ಗ. ಈ ಮಾರ್ಗವು ಸಮೃದ್ಧ ಹಸಿರು ದೇವದಾರು ಮರದ ಕಾಡುಗಳ ಮತ್ತು ಕಣಿವೆಗಳ ಮೂಲಕ ಹಾದುಹೋಗುತ್ತದೆ. ಪಿಂಡಾರಿ ಹಿಮನದಿ, ನಂದಾ ದೇವಿ ಪರ್ವತ ಮತ್ತು ನಂದಕೋಟ್ ಗಳನ್ನು ಮಾರ್ಗದ ಮಧ್ಯೆ ಕಾಣಬಹುದಾಗಿದ್ದು, ಚಾರಣ ಮಾಡುವವರಿಗೆ ಇದೊಂದು ಸ್ಮರಣೀಯ ಅನುಭವ ನೀಡುತ್ತದೆ.

Please Wait while comments are loading...