Search
 • Follow NativePlanet
Share
ಮುಖಪುಟ » ಸ್ಥಳಗಳು» ಚೌಕೋರಿ

ಚೌಕೋರಿ - ಪವಿತ್ರ ಕ್ಷೇತ್ರಗಳ ತವರು

10

ಚೌಕೋರಿ ಕಣ್ಮನ ಸೆಳೆಯುವ ಸೌಂದರ್ಯವನ್ನು ಹೊಂದಿರುವ ಪರ್ವತ ಪ್ರದೇಶ. ಇದು ಸಮುದ್ರಮಟ್ಟದಿಂದ 2010 ಮೀಟರ್ ಎತ್ತರದಲ್ಲಿರುವ ಉತ್ತರಾಖಂಡ ರಾಜ್ಯದ ಪಿಥೋರಘರ್‌ನಲ್ಲಿದೆ. ಪಶ್ಚಿಮ ಹಿಮಾಲಯ ಸರಣಿಯ ಈ ಬೆಟ್ಟ ಸಾಲು ಟಿಬೇಟ್‌ನ ಉತ್ತರ ಹಾಗೂ ಟೇರೈನ ದಕ್ಷಿಣ ಗಡಿಭಾಗವೂ ಆಗಿದೆ.

ಹಸಿರು ಪೈನ್, ಓಕ್, ರೋಡೋಡೆನ್ಡ್ರೋನ್ ‌ಮರಗಳಿಂದ ಆವರಿಸಿರುವ ವಿಶೀಷ್ಟ ಕಾಡು ಇಲ್ಲಿನ ವಿಶೇಷ. ಸುಂದರ ತೋಟಗಳು ಇಲ್ಲಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ. ಚೌಕೋರಿಯಲ್ಲಿ ಅನೇಕ ಪುರಾತನ ದೇವಾಲಯಗಳೂ ಇವೆ. ಬೇರಿನಾಗ್ ಹಳ್ಳಿಯಲ್ಲಿರುವ ನಾಗಮಂದಿರ್ ಭೇಟಿ ನೀಡಲೇಬೇಕಾದ ಮಹತ್ವದ ದೇವಾಲಯ. ಸರ್ಪದ ಈ ದೇವಾಲಯವನ್ನು ಬೇನಿವಂಡಲದ ರಾಜ ನಾಗವೇಣಿ ನಿರ್ಮಿಸಿದನೆಂಬ ನಂಬಿಕೆ ಚಾಲ್ತಿಯಲ್ಲಿದೆ.

ಸಮುದ್ರ ಮಟ್ಟದಿಂದ 1350 ಮೀಟರ್ ಎತ್ತರದಲ್ಲಿರುವ ಪಾತಾಳ ಭುವನೆಶ್ವರ ದೇವಾಲಯವನ್ನೂ ಪ್ರವಾಸಿಗರು ವೀಕ್ಷಿಸಬಹುದು. ಈ ಗುಹಾಂತರ ದೇವಾಲಯದಲ್ಲಿ ಹಿಂದೂ ದೇವರು ಶಿವನನ್ನು ಆರಾಧಿಸಲಾಗುತ್ತದೆ. ಚೌಕೋರಿಯು, ಮಹಾಕಾಳಿ ದೇವಾಲಯದಿಂದ ಮತ್ತಷ್ಟು ಪ್ರಸಿದ್ಧಿ ಪಡೆದಿದೆ.

ಭಾರದತ ಕಾಳಿ ಶಕ್ತಿ ಪೀಠಗಳ ಪೈಕಿ ಈ ದೇವಾಲಯವೂ ಒಂದಾಗಿದ್ದು, ಆದಿಗುರು ಶಂಕರಾಚಾರ್ಯರ ಕಾಲದಲ್ಲಿ ಈ ದೇವಾಲಯ ಪ್ರವರ್ಧಮಾನಕ್ಕೆ ಬಂತು ಎನ್ನಲಾಗುತ್ತದೆ. ಇಲ್ಲಿ ಇಂದೂ ದೇವತೆ ಕಾಳಿಯನ್ನು ಆರಾಧಿಸಲಾಗುತ್ತದೆ. ಪಿತೋರ್‌ಘರ್‌ - ಚಂಡಕ್‌ ಮೋಟರ್‌ ರಸ್ತೆಗೆ ಹೊಂದಿಕೊಂಡಿರುವ ಪ್ರವಾಸಿಗರ ವಿಶ್ರಾಂತಿ ತಾಣದ ಬಳಿಯೇ ಇರುವ ಉಲ್ಕಾ ದೇವಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.

ವಿವಿಧ ದೇವತೆಗಳ ಕಲ್ಲಿನ ಪ್ರತಿಮೆಗಳನ್ನು ನೋಡುವ ಬಯಕೆ ನಿಮ್ಮದಾಗಿದ್ದರೆ ಗುಣಸೇರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಕಾಮಾಕ್ಷ ದೇವಾಲಯ, ಕೇದಾರ ದೇವಾಲಯ ಮುಂತಾದವು ಚೌಕೋರಿಯ ಪ್ರಸಿದ್ಧ ಶ್ರದ್ಧಾ ಭಕ್ತಿಯ ಕೇಂದ್ರಗಳು.

ಪ್ರವಾಸಿಗರು ಈ ಪ್ರದೇಶಕ್ಕೆ ರೈಲು, ವಿಮಾನ ಹಾಗೂ ರಸ್ತೆ ಮಾರ್ಗಗಳ ಮೂಲಕ ಬರಬಹುದು. ಪಂತನಗರ್ ವಿಮಾನ ನಿಲ್ದಾಣ ಚೌಕೋರಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಸಮೀಪದಲ್ಲೇ ಇರುವ ಮತ್ತೊಂದು ವಿಮಾನ ನಿಲ್ದಾಣ. ರೈಲಿನಲ್ಲಿ ಬರುವುದಾದರೆ ಕಾತ್ಗೊಂಡಮ್‌ ರೈಲು ನಿಲ್ದಾಣ ಚೌಕೋರಿಗೆ ಸಮೀಪದಲ್ಲಿದೆ. ಇಲ್ಲಿಂದ ಮುಂದೆ ಟ್ಯಾಕ್ಸಿ ಮತ್ತಿತರ ಖಾಸಗಿ ಬಸ್‌ಗಳ ಮೂಲಕ ಸಂಚರಿಸಬೇಕು. ಸುತ್ತಮುತ್ತಲ ಪ್ರಮುಖ ನಗರಗಳಿಂದ ಸಾಕಷ್ಟು ಬಸ್‌ಗಳು ಚೌಕೋರಿಗೆ ಓಡಾಡುತ್ತವೆ. ಸುಂದರವಾದ ಈ ಪರ್ವತ ಪ್ರದೇಶಕ್ಕೆ ಬೇಸಿಗೆ ಅವಧಿಯಲ್ಲಿ ಬಂದು ಆರಾಮಾಗಿ ಸುತ್ತಾಡಬಹುದು.

ಚೌಕೋರಿ ಪ್ರಸಿದ್ಧವಾಗಿದೆ

ಚೌಕೋರಿ ಹವಾಮಾನ

ಚೌಕೋರಿ
34oC / 92oF
 • Sunny
 • Wind: SW 5 km/h

ಉತ್ತಮ ಸಮಯ ಚೌಕೋರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚೌಕೋರಿ

 • ರಸ್ತೆಯ ಮೂಲಕ
  ಹಾಲ್‌ದ್ವಾನಿ ಮತ್ತು ಆಲ್ಮೋರಾಗಳ ಮೂಲಕ ಪ್ರವಾಸಿಗರು ಚೌಕೋರಿಯನ್ನು ತಲುಪಬಹುದು. ಆಲ್ಮೋರಾಕ್ಕೆ ಪೀಥೋರಘರ್, ಕೌಸಾನಿ, ಬಾಗೇಶ್ವರ್, ದಿದಿಹಟ್, ನೈನಿತಾಲ್‌ಗಳಿಂದ ನಿರಂತರ ಬಸ್‌ ಸೌಲಭ್ಯಗಳಿವೆ. ಕಾತ್ಗೋಡಂ ಹಾಗೂ ಆಲ್ಮೋರಾಗಳು ದೆಹಲಿಯಿಂದಲೂ ನಿರಂತರ ಬಸ್ ಸೌಲಭ್ಯವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಾತ್ಗೋಡಂ ಚೌಕೋರಿಯಿಂದ 180 ಕಿಮೀ ದೂರದಲ್ಲಿರುವ ರೈಲು ನಿಲ್ದಾಣ. ಇದು ದೇಶದ ಪ್ರಮುಖ ನಗರಗಳಾದ ಲಖ್ನೋ, ದೆಹಲಿ, ಕೋಲ್ಕತ್ತಾ ಗಳ ಜತೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಮುಂದೆ ಪ್ರವಾಸಿಗರು ಟ್ಯಾಕ್ಸಿ, ಬಸ್‌ಗಳ ಮೂಲಕ ಪ್ರವಾಸ ಮುಂದುವರೆಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚೌಕೋರಿಯಿಂದ 232 ಕಿಮೀ ದೂರದಲ್ಲಿರುವ ಪಂತನಗರ್ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ಬರಬಹುದು. ಇಲ್ಲಿಂದ ಮುಂದೆ ಟ್ಯಾಕ್ಸಿಗಳು, ಬಸ್‌ಗಳ ಮೂಲಕ ಪ್ರವಾಸ ಮುಂದುವರೆಸಬಹುದು. ಈ ವಿಮಾನ ನಿಲ್ದಾಣ ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಜತೆ ಸಂಪರ್ಕ ಕಲ್ಪಸುತ್ತದೆ. ಇದು ಹೊರದೇಶದ ಪ್ರವಾಸಿಗರಿಗೆ ಹತ್ತಿರದ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Jul,Fri
Return On
11 Jul,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
10 Jul,Fri
Check Out
11 Jul,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
10 Jul,Fri
Return On
11 Jul,Sat
 • Today
  Chaukori
  34 OC
  92 OF
  UV Index: 9
  Sunny
 • Tomorrow
  Chaukori
  29 OC
  84 OF
  UV Index: 9
  Sunny
 • Day After
  Chaukori
  30 OC
  85 OF
  UV Index: 9
  Partly cloudy