Search
  • Follow NativePlanet
Share
ಮುಖಪುಟ » ಸ್ಥಳಗಳು» ಜಾಗೇಶ್ವರ್

ಜಾಗೇಶ್ವರ - ದೇವರ ದಿವ್ಯ ಸನ್ನಿಧಿಯಲ್ಲಿ

13

ಜಾಗೇಶ್ವರ ಎನ್ನುವುದು ಉತ್ತರ್ ಖಂಡ್ ರಾಜ್ಯದಲ್ಲಿರುವ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಧಾರ್ಮಿಕ ಮಹತ್ವವನ್ನು ಹೊಂದಿರುವ ನಗರವಾಗಿದೆ. ಇದು ಸಮುದ್ರ ಮಟ್ಟದಿಂದ 1870 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇತಿಹಾಸದ ಪ್ರಕಾರ, ಈ ಸ್ಥಳವು ಲಕುಲಿಶ್ ಶೈವರ ನೆಲೆಯಾಗಿ ಸೇವೆ ಸಲ್ಲಿಸಿತ್ತು. ಈ ಪಟ್ಟಣವು ಜಟಗಂಗಾ ನದಿ ಕಣಿವೆಯಲ್ಲಿ ನೆಲೆಗೊಂಡಿದೆ. ದಟ್ಟವಾಗಿ ಬೆಳೆದಿರುವ ಹಚ್ಚಹಸಿರಿನ ದೇವದಾರು ಮರಗಳಿಂದ ಕೂಡಿರುವ ಈ ಪ್ರಾಂತ್ಯವು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಈ ಸ್ಥಳದಲ್ಲಿ 12 ಜ್ಯೋರ್ತೀಲಿಂಗಗಳ ಪೈಕಿ ಎಂಟನೇಯ ಜ್ಯೋತಿರ್ಲಿಂಗವಾದ ನಾಗೇಶ್ ಜ್ಯೋರ್ತೀಲಿಂಗವನ್ನು ನಾವು ಇಲ್ಲಿ ಕಾಣಬಹುದು. ಈ ಸ್ಥಳವು ತೀರ್ಥಕ್ಷೇತ್ರವೆಂದು ಸಹ ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ನಗರದ ಸುತ್ತಲು ಶಿವನಿಗಾಗಿ ನಿರ್ಮಿಸಲಾಗಿರುವ 124 ಸಣ್ಣ ಮತ್ತು ದೊಡ್ಡ ದೇವಾಲಯಗಳು ಇವೆ. ಈ ದೇವಾಲಯಗಳ ನಿರ್ಮಾಣ ಕಾಲವು 9 ರಿಂದ 13ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತವೆ. ದಂಡೇಶ್ವರ್ ದೇವಾಲಯ, ಜಾಗೇಶ್ವರ ದೇವಾಲಯ, ಚಂಡೀ-ಕಾ-ದೇವಾಲಯ, ಮಹಾಮೃತ್ಯುಂಜಯ ದೇವಾಲಯ, ಕುಬೇರ್ ದೇವಾಲಯ, ನವಗ್ರಹ ದೇವಾಲಯ, ನಂದಾದೇವಿ ದೇವಾಲಯಗಳು ಇಲ್ಲಿರುವ ಪ್ರಸಿದ್ಧ ದೇವಾಲಯಗಳಾಗಿವೆ. ಇವುಗಳೆಲ್ಲದರಲ್ಲಿ ಮಹಾಮೃತ್ಯುಂಜಯ ದೇವಾಲಯವು ಅತ್ಯಂತ ಹಳೆಯದು ಮತ್ತು ದಂಡೇಶ್ವರ್ ದೇವಾಲಯವು ಅತ್ಯಂತ ದೊಡ್ಡದಾಗಿದೆ. ಬುಡ್ ಜಾಗೇಶ್ವರ ದೇವಾಲಯ, ಪುಷ್ಟಿ ಭಗವತಿ ಮಾ ಮತ್ತು ಪ್ರಾಚ್ಯ ವಸ್ತುಸಂಗ್ರಹಾಲಯವು ಈ ಸ್ಥಳದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.

ಜಾಗೇಶ್ವರ ಮಳೆಗಾಲದ ಉತ್ಸವವು ಈ ಪ್ರಾಂತ್ಯದಲ್ಲಿನ ಪ್ರಸಿದ್ಧ ಉತ್ಸವವಾಗಿದೆ. ಇದನ್ನು ಪ್ರತಿವರ್ಷವು ಜುಲೈನಿಂದ 15 ರಿಂದ ಆಗಸ್ಟ್15 ರ ನಡುವೆ ಬರುವ ಶ್ರವಣ ಮಾಸದಲ್ಲಿ ಆಚರಿಸಲಾಗುತ್ತದೆ. ಇದರ ಜೊತೆಗೆ ಮಹಾಶಿವರಾತ್ರಿಯನ್ನು ಸಹ ಅತ್ಯಂತ ಶ್ರದ್ಧಾಭಕ್ತಿಯಿಂದ ಇಲ್ಲಿ ಆಚರಿಸಲಾಗುತ್ತದೆ.

ಈ ಸ್ಥಳಕ್ಕೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಕಠ್‍ಗೋಡಂ ರೈಲು ನಿಲ್ದಾಣ ಮತ್ತು ಪಂತನಗರ್ ವಿಮಾನ ನಿಲ್ದಾಣವು ಜಾಗೇಶ್ವರಕ್ಕೆ ಸಮೀಪದ ರೈಲು ಮತ್ತು ವಿಮಾನ ನಿಲ್ದಾಣಗಳಾಗಿವೆ. ಪ್ರವಾಸಿಗರು ಪಿಥೋರರಗಡ್, ಹಲ್ದ್ ವಾನಿ ಮತ್ತು ಅಲ್ಮೋರಾದಿಂದ ಜಾಗೇಶ್ವರಕ್ಕೆ ಬಸ್ಸಿನಲ್ಲಿ ಸಹ ಹೋಗಬಹುದು.

ಜಗೇಶ್ವರಕ್ಕೆ ಹೋಗಲು ಯೋಚಿಸುವ ಪ್ರವಾಸಿಗರು ಇಲ್ಲಿಗೆ ಬೇಸಿಗೆ ಕಾಲದಲ್ಲಿ ಭೇಟಿಕೊಡುವುದು ಉತ್ತಮ. ಆಗ ಇಲ್ಲಿನ ವಾತಾವರಣವು ತುಂಬಾ ಆಹ್ಲಾದಕರವಾಗಿರುತ್ತದೆ.

ಜಾಗೇಶ್ವರ್ ಪ್ರಸಿದ್ಧವಾಗಿದೆ

ಜಾಗೇಶ್ವರ್ ಹವಾಮಾನ

ಉತ್ತಮ ಸಮಯ ಜಾಗೇಶ್ವರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಾಗೇಶ್ವರ್

  • ರಸ್ತೆಯ ಮೂಲಕ
    ಈ ಸ್ಥಳವು ಹತ್ತಿರದ ಸ್ಥಳಗಳ ಜೊತೆಗೆ ಉತ್ತಮ ಬಸ್ ಸಂಪರ್ಕವನ್ನು ಹೊಂದಿದೆ. ಅಲ್ಮೋರಾ, ಪಿಥೋರಗಡ್ ಮತ್ತು ಹಲ್ಡ್ ವಾನಿಗಳಿಂದ ಸರ್ಕಾರಿ ಬಸ್ಸುಗಳು ಜಾಗೇಶ್ವರಕ್ಕೆ ಬಂದು ಹೋಗುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಠ್‍ಗೋಡಂ ರೈಲು ನಿಲ್ದಾಣವು ಜಾಗೇಶ್ವರಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ. ಈ ರೈಲು ನಿಲ್ದಾಣಕ್ಕೆ ಲಖ್ನೋ, ದೆಹಲಿ ಮತ್ತು ಕೊಲ್ಕೊತ್ತಾಗಳಿಂದ ಪ್ರತಿನಿತ್ಯ ರೈಲುಗಳು ಬಂದು ಹೋಗುತ್ತಿರುತ್ತವೆ. ಈ ನಿಲ್ದಾಣದಿಂದ ನೀವು ಜಾಗೇಶ್ವರಕ್ಕೆ ತಲುಪಲು ಟ್ಯಾಕ್ಸಿಗಳು ನೆರವಾಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪಂತನಗರ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಇದು ಈ ಸ್ಥಳದಿಂದ 150 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವಿಮಾನ ನಿಲ್ದಾಣವು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕವನ್ನು ಹೊಂದಿದ್ದು, ನಿತ್ಯ ವಿಮಾನಗಳು ಬಂದು ಹೋಗುತ್ತಿರುತ್ತವೆ. ದೆಹಲಿಯ ವಿಮಾನ ನಿಲ್ದಾಣವು ಮುಂಬೈ, ಕೊಲ್ಕೊತ್ತಾ, ಚೆನ್ನೈ ಮತ್ತು ಬೆಂಗಳೂರಿನಂತಹ ಭಾರತೀಯ ನಗರಗಳೋಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಪಂತನಗರ್ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯನ್ನು ಹಿಡಿದು ಜಾಗೇಶ್ವರಕ್ಕೆ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun