Search
  • Follow NativePlanet
Share
ಮುಖಪುಟ » ಸ್ಥಳಗಳು» ಧನೌಲ್ತಿ

ಧನೌಲ್ತಿ - ಆಲುಗಡ್ಡೆ ತೋಟಕ್ಕೆ ಪ್ರಖ್ಯಾತವಾದ ತಾಣ

13

ಉತ್ತರಖಂಡದ ಗಡ್ವಾಲ್ ಜಿಲ್ಲೆಯ ಸಮುದ್ರ ಮಟ್ಟದಿಂದ 2286 ಮೀ ಎತ್ತರದಲ್ಲಿರುವ ಸುಂದರವಾದ ತಾಣ ಧನೌಲ್ತಿ. ಈ ಸ್ಥಳವು ತನ್ನ ಶಾಂತ ವಾತಾವರಣದಿಂದ ಪ್ರಸಿದ್ಧವಾಗಿದ್ದು ಚಂಬಾದಿಂದ ಮಸ್ಸೂರಿಯ ದಾರಿಯ ಮಧ್ಯೆ ಇದೆ. ಇಲ್ಲಿಂದ ಮಸ್ಸೂರಿ ಕೇವಲ 24 ಕಿ.ಮೀ, ಹಾಗಾಗಿ ಪ್ರವಾಸಿಗರಲ್ಲಿ ಈ ತಾಣವೂ ಬಹಳ ಪ್ರಸಿದ್ಧವಾಗಿದೆ. ಇಲ್ಲಿಂದ ಕಾಣುವ ಡೂನ್ ಕಣಿವೆಯ ರಮಣೀಯ ಸೌಂದರ್ಯ ಎಲ್ಲರನ್ನು ಬೆರಗು ಗೊಳಿಸುತ್ತದೆ.

ಇಲ್ಲಿನ ಓಂದು ಪ್ರಮುಖ ಆಕರ್ಷಣೆ ಎಕೋ ಪಾರ್ಕ್. ಇದು ದೇವದಾರು ಮರಗಳಿಂದ ಆವೃತ್ತವಾಗಿದೆ. ಇಲ್ಲಿ ಮಸ್ಸೂರಿ ಅರಣ್ಯ ಇಲಾಖೆಯವರು ಕಟ್ಟಿಸಿದ ಅನೇಕ ಎಕೋ ಗುಡಿಸಲುಗಳಿವೆ. ಇಲ್ಲಿ ಸಿಗುವ ವಸತಿ ಆನಂದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಇಲ್ಲಿನ ಸ್ಥಳೀಯ ಭಾಷೆಯಲ್ಲಿ ಆಲೂಖೇತ್ ಎಂದು ಕರೆಯಿಸಿಕೊಳ್ಳುವ ಆಲುಗಡ್ಡೆಯ ತೋಟ ಬಹಳ ಪ್ರಸಿದ್ಧವಾಗಿದೆ.

ದಶಾವತಾರ ದೇವಾಲಯ, ಹೊಸ ತೆಹ್ರಿ ಪಟ್ಟಣ, ಬರೇಹಿ ಪಾಣಿ ಮತ್ತು ಜೊರ್ದಾನಾ ಜಲಪಾತ, ದೇವೋರಾಗ್ ಕೋಟೆ ಮತ್ತು ಮಟಾತಿಲಾ ಜಲಾಶಯ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಇಲ್ಲಿ ಪ್ರವಾಸಿಗರು ಇದರ ಜೊತೆಗೆ ಹಲವು ಸಾಹಸಿ ಕ್ರೀಡೆಗಳನ್ನೂ ಆನಂದಿಸಬಹುದು. ಅವುಗಳೆಂದರೆ ಬಂಡೆ ಕಲ್ಲು ಹತ್ತುವುದು, ನದಿ ದಾಟುವುದು, ಚಾರಣ ಇವೆಲ್ಲವೂ ಚಾಂಗ್ ಧರ್ ಕ್ಯಾಂಪ್ ನಲ್ಲಿ ಲಭ್ಯ. ಈ ಕ್ಯಾಂಪ್ ವಸತಿಯ ಜೊತೆಗೆ ಪ್ರವಾಸಿಗರಿಗೆ ಬೇಕಾದ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಒದಗಿಸುತ್ತದೆ.

ಧನೌಲ್ತಿಯು ವಿಮಾನ ಮಾರ್ಗ, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾದ ತಾಣವಾಗಿದೆ. ಜಾಲಿ ಗ್ರಾಂಟ್ ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವಾಗಿದೆ. ಡೆಹ್ರಾಡೂನ್ ಮತ್ತು ರಿಷಿಕೇಶ್ ದ ರೈಲ್ವೆ ನಿಲ್ದಾಣಗಳು ಸಮೀಪದ ರೈಲ್ವೆ ನಿಲ್ದಾಣಗಳಾಗಿವೆ. ಡೆಹ್ರಾಡೂನ್, ಮಸ್ಸೂರಿ, ಹರಿದ್ವಾರ್, ರಿಷಿಕೇಶ್, ರೂರ್ಕಿ ಮತ್ತು ನೈನಿತಾಲ್ ನಂತಹ ಸಮೀಪವಿರುವ ತಾಣಗಳಿಂದ ಬಸ್ಸು ಸೌಲಭ್ಯ ಕೂಡ ಇಲ್ಲಿಗಿದೆ.

ಧನೌಲ್ತಿಗೆ ಭೇಟಿ ನೀಡುವ ಪ್ರವಾಸಿಗರು ಬೇಸಿಗೆ ಅಥವಾ ಚಳಿಗಾಲದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ.

ಧನೌಲ್ತಿ ಪ್ರಸಿದ್ಧವಾಗಿದೆ

ಧನೌಲ್ತಿ ಹವಾಮಾನ

ಉತ್ತಮ ಸಮಯ ಧನೌಲ್ತಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಧನೌಲ್ತಿ

  • ರಸ್ತೆಯ ಮೂಲಕ
    ಮಸ್ಸೂರಿ ಮತ್ತು ಚಂಬಾ ರಸ್ತೆ ಮಾರ್ಗದಲ್ಲಿ ಧನೌಲ್ತಿ ಇರುವ ಕಾರಣ ಉತ್ತರಾಖಂಡದ ಪ್ರಮುಖ ನಗರಗಳಾದ ಡೆಹ್ರಾಡೂನ್, ಮಸ್ಸೂರಿ, ಹರಿದ್ವಾರ್, ರಿಷಿಕೇಶ್, ರೂರ್ಕೀ ಮತ್ತು ನೈನಿತಾಲ್ ನಿಂದ ಬಸ್ಸು ಸೌಲಭ್ಯ ಹೊಂದಿದೆ. ದೆಹಲಿ, ಚಂಡಿಗಡ ಮತ್ತು ಮಸ್ಸೂರಿಯಿಂದ ನಿರಂತರ ಬಸ್ಸು ಸೌಲಭ್ಯವನ್ನು ಪ್ರವಾಸಿಗರು ಪಡೆಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಧನೌಲ್ತಿಯು ರಿಷಿಕೇಶ್ ರೈಲ್ವೆ ನಿಲ್ದಾಣದಿಂದ 83 ಮತ್ತು ರಿಷಿಕೇಶ್ ದಿಂದ 60 ಕಿ.ಮೀ ದೂರದಲ್ಲಿದೆ. ಈ ರೈಲ್ವೆ ನಿಲ್ದಾಣಗಳಿಗೆ ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಿಂದ ನಿರಂತರ ರೈಲ್ವೆ ಸಂಪರ್ಕವಿದೆ. ಎರಡೂ ನಿಲ್ದಾಣಗಳಿಂದ ಸಾಕಷ್ಟು ಟಾಕ್ಸಿಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು 83 ಕಿ.ಮೀ ದೂರದಲ್ಲಿದೆ. ಇದು ದೆಹಲಿಯ ಇಂದಿರ ಗಾಂಧಿ ವಿಮಾನ ನಿಲ್ದಾಣಕ್ಕೆ ನಿರಂತರ ವಿಮಾನಗಳಿಂದ ಸಂಪರ್ಕ ಸಾಧಿಸುತ್ತದೆ. ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಟಾಕ್ಸಿಯ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed