Search
  • Follow NativePlanet
Share
ಮುಖಪುಟ » ಸ್ಥಳಗಳು » ಧನೌಲ್ತಿ » ಹವಾಮಾನ

ಧನೌಲ್ತಿ ಹವಾಮಾನ

ಬೇಸಿಗೆಗಾಲ ಮತ್ತು ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಅವಧಿಗಳಾಗಿವೆ. ಈ ಅವಧಿಯಲ್ಲಿ ತಾಪಮಾನ ಬಹಳ ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಏಪ್ರಿಲ್ ತಿಂಗಳಲ್ಲಿ ಆರಂಭವಾಗುವ ಬೇಸಿಗೆ ಜೂನ್ ತನಕ ಮುಂದುವರೆಯುತ್ತದೆ. ಈ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31ಡಿಗ್ರಿ ಮತ್ತು 7ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್): ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಧನೌಲ್ತಿಯಲ್ಲಿ ಧಾರಾಕಾರ ಮಳೆಯಾಗುತ್ತದೆ. ಈ ಅವಧಿಯಲ್ಲಿ ತಾಪಮಾನ ಬಹಳ ಕಡಿಮೆಯಾಗಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಇಲ್ಲಿ ಭೇಟಿ ನೀಡುವುದು ಅಷ್ಟು ಸೂಕ್ತವಲ್ಲ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಧನೌಲ್ತಿಯಲ್ಲಿ ಚಳಿಗಾಲವಿರುತ್ತದೆ. ಈ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ 7ಡಿಗ್ರಿ ಮತ್ತು 1ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ಮಂಜು ಕೂಡ ಆವರಿಸುತ್ತದೆ.