ನೈನಿತಾಲ್ - ದಟ್ಟ ಹಸಿರಿನ ನಡುವೆ ಒಂದು ತಾಜಾ ಅನುಭವ

'ಭಾರತದ ಸರೋವರ ಜಲ್ಲೆ' ನೈನಿತಾಲ್ ನ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅಲ್ಲಿನ ಸೌಂದರ್ಯವನ್ನು ಬಣ್ಣೀಸುವುದೇ ಅಸಾಧ್ಯ. ಹಲವಾರು ಪುರಾಣ ಕಥೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಪ್ರದೇಶ ಇಲ್ಲಿಗೆ ಬಂದ ಪ್ರವಾಸಿಗರನ್ನು ಮೈಮರೆಯುವಂತೆ ಮಾಡುತ್ತದೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

'ಭಾರತದ ಸರೋವರ ಜಿಲ್ಲೆ' ಎಂದು ಕೂಡಾ ಪ್ರಸಿದ್ಧವಾಗಿರುವ ನೈನಿತಾಲ್, ಹಿಮಾಲಯದ ಪಟ್ಟಿಯಲ್ಲಿದೆ. ಇದು ಕುಮಾವೂನ್ ಬೆಟ್ಟಗಳು ನಡುವೆ ನೆಲೆಗೊಂಡಿದೆ ಮತ್ತು ಅಮೋಘವಾದ ಸುಂದರ ಸರೋವರಗಳನ್ನು ಹೊಂದಿದೆ.

ನೈನಿತಾಲ್ ಅನ್ನು 'ಮೂರು ಸನ್ಯಾಸಿಗಳ ಸರೋವರ' ಅಥವಾ ಮಾನಸ ಖಂಡದಲ್ಲಿ 'ತ್ರಿ-ಋಷಿ ಸರೋವರ', (ಸ್ಕಂದ ಪುರಾಣದಲ್ಲಿ) ಎಂದು ಕರೆಯಲಾಗುತ್ತದೆ. ಮೂರು ಋಷಿಗಳಾದ, ಅತ್ರಿ, ಪುಲಸ್ತ್ಯಾ ಮತ್ತು ಪುಲಹ ಋಷಿಗಳು ತಮ್ಮ ಬಾಯಾರಿಕೆಯನ್ನು ನೈನಿತಾಲ್ ನಲ್ಲಿ ನೀಗಿಸಿಕೊಂಡರು ಎಂದು ಹೇಳಲಾಗುತ್ತದೆ. ಅವರು ನೀರಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ನೀರಿನ ಸುಳಿವೂ ಪತ್ತೆಮಾಡಲಾಗಲಿಲ್ಲ, ಆದ್ದರಿಂದ ಮುನಿಗಳು ಒಂದು ಒಂದು ರಂಧ್ರವನ್ನು ಅಗೆದರು ಮತ್ತು ನೀರು ತುಂಬಿ ಬಂದ ಸರೋವರಕ್ಕೆ ಮಾನಸಸರೋವರ ಎನ್ನಲಾಯಿತು. ಅಲ್ಲಿಂದ ನೈನಿತಾಲ್ ಈ ಹೆಸರನ್ನು ಪಡೆದುಕೊಂಡಿತು. ಮತ್ತೊಂದು ದಂತಕಥೆ ಹೇಳುವಂತೆ, ಹಿಂದೂ ದೇವತೆ ಸತಿ (ಶಿವನ ಹೆಂಡತಿ)ಯ ಎಡ ಕಣ್ಣು ಈ ಸ್ಥಳದಲ್ಲಿ ಕುಸಿಯಿತು ಮತ್ತು ಕಣ್ಣಿನ ಆಕಾರದ ನೈನಿ ಸರೋವರವು ಈ ಸ್ಥಳದಲ್ಲಿ ಸೃಷ್ಟಿಸಲ್ಪಟ್ಟಿತು.

ನೈನಿತಾಲ್ ಅದರ ಸುಂದರ ಭೂದೃಶ್ಯ ಮತ್ತು ಪ್ರಶಾಂತ ಸುತ್ತಮುತ್ತಲಿನ ದೃಶ್ಯದಿಂದಾಗಿ ಪ್ರವಾಸಿಗರಿಗೆ ಸ್ವರ್ಗ ಎಂದೇ ಕರೆಯಲಾಗುತ್ತದೆ. ವ್ಯಾಪಾರಿ, ಪಿ ಬ್ಯಾರನ್, 1839 ರಲ್ಲಿ ನೈನಿತಾಲ್ ಸೌಂದರ್ಯದಿಂದ ವಶೀಕರಣಗೊಂಡು, ಇಲ್ಲಿ ಬ್ರಿಟಿಷ್ ವಸಾಹತು ಸ್ಥಾಪಿಸಿದ ನಂತರದಿಂದ ನೈನಿತಾಲ್ ಖ್ಯಾತಿಗಳಿಸಿತು ಎಂದು ನಂಬಲಾಗಿದೆ. ನೈನಿತಾಲ್ ಗೆ ಪ್ರಯಾಣ ಬೆಳೆಸುವ ಯೋಜನೆ ಹೊಂದಿರುವ ಪ್ರವಾಸಿಗರು ಹಿಂದೂ ಹನುಮಾನ ದೇವರಿಗೆ ಮುಡಿಪಾದ ದೇವಸ್ಥಾನ ಎಂದು ಹೆಸರುವಾಸಿಯಾದ ಹನುಮಾನ್ಗರ್ಹಿ (ಹನುಮನನಗರಿ)ಗೂ ಭೇಟಿ ಮಾಡಬಹುದು. ಜೊತೆಗೆ, ಭಾರತದ 51 'ಶಕ್ತಿ ಪೀಠ'ಗಳ ನಡುವೆ ಪರಿಗಣಿಸಲಾದ ಪ್ರಮುಖ ಧಾರ್ಮಿಕ ಸ್ಥಳ, ನೈನಾ ದೇವಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.

ನೈನಿತಾಲ್ ನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ  ಸುಂದರ ಕಿಲ್ಬರಿ ಸ್ಥಳಕ್ಕೂ ಪಿಕ್ನಿಕ್ ಗೆ ಹೋಗಬಹುದು. ಸಮೃದ್ಧ ಹಸಿರು ಓಕ್, ಪೈನ್ ಮತ್ತು ರೋಡೋಡೆನ್ಡ್ರೋನ್ (ಗುಲ್ಮ) ಕಾಡುಗಳಲ್ಲಿ ಪ್ರಕೃತಿಯ ನಡುವೆ ವಿರಮಿಸಲು ಪರಿಪೂರ್ಣವಾದ ಗಮ್ಯಸ್ಥಾನವಾಗಿದೆ. ಇದು ಕಂದು ಮರದ ಗೂಬೆಗಳು, ಕಾಲರ್ (grosbeaks) ಮತ್ತು ಬಿಳಿಗಲ್ಲದ ನಗುವ ಹಾಡುಹಕ್ಕಿಗಳನ್ನು ಒಳಗೊಂಡ ವರ್ಣರಂಜಿತ ಹಕ್ಕಿಗಳು ಹೀಗೆ 580 ಕ್ಕೂ ಹೆಚ್ಚು ಜಾತಿಯ ಹಕ್ಕಿಗಳ ಆವಾಸಸ್ಥಾನವನ್ನು ಇಲ್ಲಿ ಕಾಣಬಹುದು. ಲರಿಕಾಂತ, ಸಮುದ್ರ ಮಟ್ಟದಿಂದ 2481 ಮೀಟರ್ ಎತ್ತರದಲ್ಲಿದ್ದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಭವ್ಯವಾದ ವೀಕ್ಷಣೆಗಳನ್ನು ನೀಡುತ್ತದೆ. ಇದು ಈ ಪಟ್ಟಣದಿಂದ 6 ಕಿಮೀ ದೂರದಲ್ಲಿರುವ ನೈನಿತಾಲ್ ನ ಎರಡನೇ ಶಿಖರ.

ಲ್ಯಾಂಡ್ಸ್ ಎಂಡ್, ಸುಂದರ ಕುರ್ಪಟಲ್ ಸರೋವರದ ಸಮ್ಮೋಹನಗೊಳಿಸುವ ವೀಕ್ಷಣೆಗಳನ್ನು ಆನಂದಿಸಲು ಪರಿಪೂರ್ಣ ಸ್ಥಳವಾಗಿದೆ. ಇದು ಸಮೃದ್ಧ ಹಸಿರು ಕಣಿವೆಯ ಮತ್ತು ನೈನಿತಾಲ್ ಸುತ್ತಮುತ್ತಲಿನ ಬೆಟ್ಟಗಳ ಪರಿದೃಶ್ಯದ ನೋಟಗಳನ್ನು ನೀಡುತ್ತದೆ. ಪ್ರವಾಸಿಗರು ಈ ಗಮ್ಯ ಬೆಟ್ಟದ ಸ್ಥಳಗಳನ್ನು ತಲುಪಲು ರೋಪ್ ವೆ (ಕೇಬಲ್ ಕಾರ್) ಮೂಲಕ ಹೋಗಬಹುದು. ರೋಪ್ ವೆ 705 ಮೀ ಒಟ್ಟು ದೂರ ಹೊಂದಿದ್ದು, ಪ್ರತಿಯೊಂದು ಕಾರು (ಕೇಬಲ್ ಕಾರು) ಒಮ್ಮೆಗೆ ಗರಿಷ್ಠ 12 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಸಂಚರಿಸುವಾಗ ಭವ್ಯವಾದ ಹಿಮಾವೃತ ದೃಶ್ಯಗಳನ್ನು ವೀಕ್ಷಿಸಬಹುದು. ಪ್ರವಾಸಿಗರಿಗೆ  ಹಿಮಾಲಯನ್ ಶ್ರೇಣಿಯ ಸೌಂದರ್ಯ ಇಷ್ಟವಾಗಬಹುದು ಮತ್ತು ಇದು ಇಲ್ಲಿಯ ನೋಡಲೇ ಬೇಕಾದ ಸುಂದರ ಆಕರ್ಷಣೆಯ ಬಿಂದುವಾಗಿದೆ.

ಚೀನಾ ಶಿಖರ ಎಂದೂ ಕರೆಯಲ್ಪಡುವ ನೈನಾ ಶಿಖರ, ನೈನಿತಾಲ್ ನ ಅತ್ಯುನ್ನತ ಶಿಖರವಾಗಿದೆ. ಇದು ಸಮುದ್ರ ಮಟ್ಟದಿಂದ 2611 ಮೀಟರ್ ಎತ್ತರದಲ್ಲಿದೆ ಮತ್ತು ಈ ಸ್ಥಳಕ್ಕೆ ಕುದುರೆ ಸವಾರಿ ಮೂಲಕ ತಲುಪಬಹುದು. ಟಿಫಿನ್ ಟಾಪ್ ಅಥವಾ ಡೊರೊಥಿ ಸೀಟ್, ಪ್ರವಾಸಿಗರು ಅನಿಯಮಿತವಾಗಿ ಮೋಜಿನ ಜೊತೆಗೆ ಬಿಡುವಿನ ಸಮಯವನ್ನು ಕಳೆಯಬಹುದಾದ ಉತ್ತಮ ಸ್ಥಳ. ಇಲ್ಲಿ ಮಾದರಿ ವಿಹಾರಿ ಸ್ಥಳವಿದೆ. ಈ ಸ್ಥಳ, ಡೊರೊಥಿ ಕೆಲ್ಲೆಟ್ (ಒಂದು ಇಂಗ್ಲೀಷ್ ಕಲಾವಿದ) ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಆಕೆಯ ಪತಿಯಂದ ಅಭಿವೃದ್ಧಿಪಡಿಸಲಾಯಿತು. ಇಕೋ ಕೇವ್ ಗಾರ್ಡನ್ (ಪರಿಸರ ಗುಹಾ ಉದ್ಯಾನ) ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ನೈನಿತಾಲ್ ನ ಮತ್ತೊಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.ರಾಜ್ ಭವನ, ಝೂ/ಪ್ರಾಣಿ ಸಂಗ್ರಹಾಲಯ, ಪ್ಲಾಟ್ಸ್, ಸೇಂಟ್ ಜಾನ್ ನ ವೈಲ್ಡರ್ನೆಸ್ ಚರ್ಚ್ ಮಾಲ್ ಮತ್ತು ಪಾನ್ಗೊಟ್ ಇವು ನೈನಿತಾಲ್ ನ ಇತರೆ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಥಂಡೀ ಸಡಕ್, ಗುರ್ನೆಯ್ ಹೌಸ್, ಕುರ್ಪಟಲ್, ಗೌನೋ ಬೆಟ್ಟಗಳು ಮತ್ತು ಅರಬಿಂದೋ ಆಶ್ರಮ ಕೂಡ ಭೇಟಿ ಯೋಗ್ಯವಿರುವ ತಾಣಗಳು. ಜೊತೆಗೆ, ಪ್ರವಾಸಿಗರು, ಕುದುರೆ ಸವಾರಿ, ಚಾರಣ ಮತ್ತು  ದೋಣಿ ವಿಹಾರ ಹಾಗೂ ಇನ್ನಿತರ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ನೈನಿತಾಲ್ ದೇಶದ ವಿವಿಧ ಭಾಗಗಳಿಗೆ ರಸ್ತೆ, ರೈಲು ಮತ್ತು ವಿಮಾನ ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಇದಲ್ಲದೆ, ಬೇಸಿಗೆಯ ಋತುವನ್ನು ಈ ಸುಂದರ ತಾಣಕ್ಕೆ ಭೇಟಿ ನೀಡಲು ಸೂಕ್ತ ಸಮಯ ಎಂದು ಪರಿಗಣಿಸಲಾಗಿದೆ.

Please Wait while comments are loading...