Search
  • Follow NativePlanet
Share

ಪೌಡಿ - ಒಂದು ಧಾರ್ಮಿಕ ಯಾತ್ರೆ

19

ಸಮುದ್ರ ಮಟ್ಟದಿಂದ 1650 ಮೀ ಎತ್ತರದಲ್ಲಿರುವ ಪೌಡಿ ಒಂದು ನಿಸರ್ಗ ಸಹಜ ಸೌಂದರ್ಯದಿಂದ ಮನಸ್ಸೆಳೆಯುವ ತಾಣವಾಗಿದೆ. ಇದು ಉತ್ತರಾಖಂಡದ ಪೌಡಿ ಗಡ್ವಾಲ್ ಜಿಲ್ಲೆಯ ಜಿಲ್ಲಾಕೇಂದ್ರ ಸ್ಥಳವಾಗಿದೆ. ದೇವದಾರು ಮರಗಳಿಂದ ಆವೃತವಾಗಿರುವ ಹಾಗೂ ಕಂಡೋಲಿಯಾ ಬೆಟ್ಟಗಳ ಇಳಿಜಾರಿನ ಉತ್ತರಕ್ಕೆ ಇರುವ ಇದು ಪ್ರವಾಸಿಗರಿಗೆ ತನ್ನ ಪ್ರಕೃತಿ ಸೌಂದರ್ಯದಿಂದ ಸೆಳೆಯುತ್ತದೆ.

ಇದಲ್ಲದೆ ಮಂಜು ಆವೃತವಾದ ಬಂದರ್ ಪಂಚ್, ಜೊನ್ಲಿ, ಗಂಗೋತ್ರಿ, ನಂದಾದೇವಿ, ತ್ರಿಶುಲ್, ಚೌಂಖಂಬಾ, ಘೋರಿ ಪರ್ವತ, ಹಾಥಿ ಪರ್ವತ, ಸ್ವರ್ ಗರೋಹಿನಿ, ಜೋಗಿನ್ ಸಮೂಹ, ಥಾಲೈಯ್ಯ-ಸಾಗರ್, ಕೇದಾರ್ ನಾಥ್, ಸುಮೇರು ಮತ್ತು ನೀಲಕಂಠ ಬೆಟ್ಟಗಳ ಸೊಬಗೂ ಕೂಡ ಇಲ್ಲಿದೆ. ಅಲಕ್ ನಂದಾ ಮತ್ತು ನಾಯರ್ ಇಲ್ಲಿನ ಎರಡು ಪ್ರಮುಖ ನದಿಗಳಾಗಿವೆ.

ಇದು ಹಲವಾರು ದೇವಾಲಯಗಳಿಗೆ, ವೀಕ್ಷಣಾ ಸ್ಥಳಗಳಿಗೆ ಹಾಗೂ ಪಿಕ್ ನಿಕ್ ತಾಣಗಳಿಗೆ ಪ್ರಸಿದ್ಧವಾಗಿದೆ. ಚೌಖಂಬಾ ವೀಕ್ಷಣಾ ಸ್ಥಳದಿಂದ ಹಿಮಾಲಯ ಪರ್ವತದ ಶಿಖರಗಳ ವೀಕ್ಷಣೆ ಹಾಗೂ ಹಿಮನದಿಗಳ ಸೊಬಗು ಎಲ್ಲರನ್ನು ರಂಜಿಸದೇ ಇರದು. ಖಿರ್ಸು ಇಲ್ಲಿನ ಇನ್ನೊಂದು ಪ್ರಸಿದ್ಧ ಪ್ರವಾಸಿ ಸ್ಥಳ ಇದು ಸಮುದ್ರ ಮಟ್ಟದಿಂದ ಸುಮಾರು 1700 ಮೀ ಎತ್ತರದಲ್ಲಿದೆ. ದಿನನಿತ್ಯದ ಭರಾಟೆ ಮತ್ತು ಆಧುನಿಕ ಜೀವನದ ಗದ್ದಲಗಳಿಂದ ಸ್ವಲ್ಪ ಕಾಲ ದೂರವಿರಲು ಇದೊಂದು ಅತ್ಯುತ್ತಮ ತಾಣ. ಇಲ್ಲಿ ನೀವು ಹಕ್ಕಿಗಳ ಕಲರವ ಬಿಟ್ಟರೆ ಬೇರೆ ಯಾವ ಸದ್ದನ್ನೂ ಕೇಳಲಾರಿರಿ. ಧಾರ್ ದೇವಿ 16 ಕಿ.ಮೀ ದೂರವಿರುವ ಇನ್ನೊಂದು ಪ್ರಸಿದ್ಧ ತಾಣವಾಗಿದೆ. ಇಲ್ಲಿ ದೇವಿ, ಧಾರಿ ದೇವಿಯನ್ನು ಪೂಜಿಸಲಾಗುತ್ತದೆ. ಇದರ ಜೊತೆಗೆ ಪ್ರವಾಸಿಗರು ಪ್ರಸಿದ್ಧವಾದ ಕ್ಯುಂಕಲೇಶ್ವರ ಮಹಾದೇವ ದೇವಾಲಯವನ್ನೂ ಕೂಡ ನೋಡಬಹುದಾಗಿದೆ. ಇದನ್ನು ಆದಿ ಶಂಕರಾಚಾರ್ಯರು ಶಿವ ದೇವರಿಗೊಸ್ಕರ ಕಟ್ಟಿದ ದೇವಾಲಯವಾಗಿದೆ.

ದೂಧಾತೋಲಿ ಸಮುದ್ರ ಮಟ್ಟದಿಂದ 3100 ಮೀ ಎತ್ತರದಲ್ಲಿದೆ. ಇಲ್ಲಿ ಕಂಡೋಲಿಯಾ, ಸಿದ್ಧಿಬಾಯಿ, ಶಂಕರ ಮಠ, ಕೆಷೋರಿ ಮಠ ಮತ್ತು ಜ್ವಲ್ಪಾ ದೇವಿ ದೇವಾಲಯಗಳು ನೋಡಲರ್ಹವಾದ ತಾಣಗಳಾಗಿವೆ. ಇದಲ್ಲದೆ ಲಾಲ್ ಧಂಗ್, ಅದ್ವಾನಿ, ತಾರಾಕುಂಡ್, ಕೊಡ್ವಾರಾ, ಭರತ್ ನಗರ ಮತ್ತು ಶ್ರೀನಗರ ಕೂಡ ನೋಡಲರ್ಹವಾದ ಸ್ಥಳಗಳಾಗಿವೆ. ದೇವಲ್ ಮತ್ತು ಕಾಂಡಾ ದಂತಹ ಸ್ಥಳಗಳಲ್ಲಿರುವ ಹಳೆಯ ಕಾಲದ ದೇವಾಲಯಗಳು ಇನ್ನೊಂದು ಆಕರ್ಷಣೆ.

ನಾಯರ್ ನದಿಯಲ್ಲಿ ಈಜುವುದರೊಂದಿಗೆ, ಆಗ್ಲಿಂಗ್ ಮತ್ತು ಸೈಕ್ಲಿಂಗ್ ಇಲ್ಲಿನ ಪ್ರಮುಖ ಆಟಗಳು. ಪೌಡಿಯನ್ನು ರೈಲು, ವಿಮಾನ ಮತ್ತು ರಸ್ತೆಯ ಮೂಲಕ ತಲುಪಬಹುದಾಗಿದೆ. ಡೆಹ್ರಾಡೂನಿನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ 155 ಕಿ.ಮೀ ದೂರದಲ್ಲಿದ್ದು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕೋಟ್ ದ್ವಾರಾ ಇಲ್ಲಿ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಈ ಎರಡು ನಿಲ್ದಾಣಗಳಿಂದ ಪೌಡಿ ಗೆ ಟಾಕ್ಸಿಗಳು ಲಭ್ಯವಿವೆ. ಪೌಡಿಯು ರಿಷಿಕೇಶ, ಹರಿದ್ವಾರ್, ಡೆಹ್ರಾಡೂನ್ ಮತ್ತು ಮಸ್ಸೂರಿಗೆ ಬಸ್ಸಿನ ಮೂಲಕ ಸಂಪರ್ಕ ಸಾಧಿಸುತ್ತದೆ. ಮಾರ್ಚ್ ನಿಂದ ನವೆಂಬರ್ ತನಕದ ಅವಧಿ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಅವಧಿಯಾಗಿದೆ.

ಪೌಡಿ ಪ್ರಸಿದ್ಧವಾಗಿದೆ

ಪೌಡಿ ಹವಾಮಾನ

ಉತ್ತಮ ಸಮಯ ಪೌಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪೌಡಿ

  • ರಸ್ತೆಯ ಮೂಲಕ
    ಇಲ್ಲಿಗೆ ಇರುವ ಸಾಕಷ್ಟು ಬಸ್ ಸೌಲಭ್ಯಗಳ ಮೂಲಕ ಪೌಡಿ ತಲುಪಬಹುದಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಪೌಡಿ ಮತ್ತು ರಿಷಿಕೇಶದ ನಡುವೆ ಓಡಾಡುತ್ತವೆ. ಹರಿದ್ವಾರ್, ಡೆಹ್ರಾಡೂನ್ ಮತ್ತು ಮಸ್ಸೂರಿಯಿಂದಲೂ ಪೌಡಿ ಗೆ ಬಸ್ಸಿನ ಸೌಲಭ್ಯ ಇದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪೌಡಿಯಿಂದ 108 ಕಿ.ಮೀ ದೂರದಲ್ಲಿರುವ ಕೋಟದ್ವಾರ ರೈಲು ನಿಲ್ದಾಣ ಇಲ್ಲಿಗೆ ಅತ್ಯಂತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ಭಾರತದ ಇತರೆ ಮುಖ್ಯ ರೈಲ್ವೆ ನಿಲ್ದಾಣಗಳಿಗೆ ಉತ್ತಮ ಸಂಪರ್ಕ ಸಾಧಿಸುತ್ತದೆ. ಪೌಡಿಗೆ ಈ ರೈಲ್ವೆ ನಿಲ್ದಾಣದಿಂದ ಟಾಕ್ಸಿ ಸೌಲಭ್ಯ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪೌಡಿ ಜಿಲ್ಲೆಯಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಡೆಹ್ರಾಡೂನಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ 155 ಕಿ.ಮೀ ದೂರದಲ್ಲಿದ್ದು ಅತ್ಯಂತ ಸಮೀಪವಾದ ವಿಮಾನ ನಿಲ್ದಾಣವಾಗಿದೆ. ವಿದೇಶಿ ಪ್ರವಾಸಿಗರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಲ್ಲಿ ತಲುಪಬಹುದಾಗಿದೆ. ಇದು ಇಲ್ಲಿಂದ 300 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಇತರೆ ವಿಮಾನ ನಿಲ್ದಾಣಗಳಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ. ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಟಾಕ್ಸಿಗಳು ಪೌಡಿಗೆ ಲಭ್ಯವಿರುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun