ಚೌಖಂಬಾ ವೀಕ್ಷಣಾ ಕೇಂದ್ರ ಹಿಮಾಲಯದ ಶಿಖರ ಹಾಗೂ ಹಿಮನದಿಗಳ ಅಭೂತಪೂರ್ವ ಸೊಬಗನ್ನು ಪ್ರವಾಸಿಗಳ ಮುಂದಿಡುತ್ತದೆ. ಇದು ದ್ವಾರಿಖಾಲ್ ನ ದಟ್ಟ ಅರಣ್ಯ ಮತ್ತು ಓಕ್ ನ ಮರಗಳಿಂದ ಸುತ್ತುವರೆದ ಅತ್ಯಂತ ಶಾಂತವಾದ ಪ್ರವಾಸಿ ತಾಣವಾಗಿದೆ. ಪೌಡಿ ಯಿಂದ ನಾಲ್ಕು ಕಿ.ಮೀ ದೂರವಿರುವ ಈ ಸ್ಥಳ ಇದ್ವಾಲ್ ಕಣಿವೆ ಮತ್ತು ಚೌಖಂಬಾ ಶಿಖರಗಳಿಂದ ಪ್ರಸಿದ್ಧವಾಗಿದೆ. ಇದು ನಿಸರ್ಗ ಪ್ರಿಯರು ಮತ್ತು ಪಿಕ್ ನಿಕ್ ತಾಣಗಳ ಹುಡುಕಾಟದಲ್ಲಿರುವವರಿಗೆ ಸೂಕ್ತವಾದ ತಾಣವಾಗಿದೆ.