ಸೈಕ್ಲಿಂಗ್, ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಇತ್ತೀಚಿಗಷ್ಟೆ ಅಭಿವೃದ್ಧಿ ಪಡಿಸಲಾದ ಆಟವಾಗಿದೆ. ಇಲ್ಲಿನ ಸೈಕ್ಲಿಂಗ್ ರಸ್ತೆಯನ್ನು, ಗಡ್ವಾಲ್ ವಿಶ್ವವಿದ್ಯಾನಿಲಯದ ಪ್ರವಾಸೋದ್ಯಮ ವಿಭಾಗ ಅಭಿವೃದ್ಧಿ ಪಡಿಸಿದೆ. ಈ ಸೈಕ್ಲಿಂಗ್ ರಸ್ತೆ ಸಮುದ್ರ ಮಟ್ಟದಿಂದ 1800 ಮೀ ಎತ್ತರದಲ್ಲಿ ನೆಲೆಸಿದ್ದು, ರೋಮಾಂಚನಕಾರಿ ಸೈಕ್ಲಿಂಗ್ ಅನುಭವವನ್ನು ನಿಮಗೆ ನೀಡುತ್ತದೆ. ಇಲ್ಲಿ ಹಿಮಾಲಯದ ಅಭೂತಪೂರ್ವ ಸೌಂದರ್ಯದ ರಸದೌತಣ ನೀವು ಪಡೆಯಬಹುದು. ಈ ರಸ್ತೆ ಓಕ್, ದೇವದಾರು ಮರಗಳ ದಟ್ಟಡವಿಯ ಮಧ್ಯೆ ಹಾದುಹೋಗುತ್ತದೆ. ಸಾಹಸದಿಂದ ತುಂಬಿರುವ ಸೈಕ್ಲಿಂಗ್ ಚಟುವಟಿಕೆ, ಮನೋರಂಜನೆಗೆ ಅತ್ಯಂತ ಉತ್ತಮವಾದ ವಿಧಾನವಾಗಿದೆ.