Search
 • Follow NativePlanet
Share
ಮುಖಪುಟ » ಸ್ಥಳಗಳು» ಮುಕ್ತೇಶ್ವರ್

ಮುಕ್ತೇಶ್ವರ್ - ಮೋಕ್ಷ ದೊರೆಯುವ ಗಿರಿಧಾಮ

19

ಮುಕ್ತೇಶ್ವರ್ ಉತ್ತರ್ ಖಂಡ್ ರಾಜ್ಯದಲ್ಲಿರುವ ಕುಮಾವೂನ್ ವಿಭಾಗದಲ್ಲಿ ಬರುವ ನೈನಿತಾಲ್ ಜಿಲ್ಲೆಯಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಇದು ಸಮುದ್ರ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳಕ್ಕೆ ಹೆಸರು ಇಲ್ಲಿರುವ ಸುಮಾರು 350 ವರ್ಷ ಹಳೆಯದಾದ ಶಿವನ ದೇವಾಲಯದಿಂದಾಗಿ ಬಂದಿದೆ. ಇದನ್ನು ಮುಕ್ತೇಶ್ವರ್ ಧಾಮ್ ಎಂದೂ ಸಹ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ, ಪರಶಿವನು ಇಲ್ಲಿ ತನ್ನ ಭಕ್ತಾಧಿಗಳಿಗೆ " ಮುಕ್ತಿಯನ್ನು ಅಥವಾ ಮೋಕ್ಷವನ್ನು" ದಯಪಾಲಿಸುತ್ತಾನೆ.

1893 ರ ಸುಮಾರಿನಲ್ಲಿ ಬ್ರಿಟೀಷರು ತಮ್ಮ ಆಡಳಿತಾವಧಿಯಲ್ಲಿ ಈ ಗಿರಿಧಾಮವನ್ನು ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಯನ್ನಾಗಿ ಪರಿವರ್ತಿಸಿದರು. ಈ ಸ್ಥಳದಿಂದ ಪ್ರವಾಸಿಗರು ಮಂತ್ರಮುಗ್ಧಗೊಳಿಸುವ ನಂದಾದೇವಿ ಪರ್ವತದ ದೃಶ್ಯಗಳನ್ನು ಸವಿಯಬಹುದು. ಈ ಪರ್ವತವು ಭಾರತದ ಎರಡನೆ ಅತಿದೊಡ್ಡ ಶಿಖರವೆಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಸಿದ್ಧ ಬ್ರಿಟೀಷ್ ಬೇಟೆಗಾರ ಮತ್ತು ಪರಿಸರ ತಜ್ಞರಾದ ಜಿಮ್ ಕಾರ್ಬೆಟ್‍ರವರು ಬರೆದಿರುವ, ಜನಪ್ರಿಯ ಪುಸ್ತಕವಾದ " ದ ಮ್ಯಾನ್ ಈಟರ್ಸ್ ಆಫ್ ಕುಮಾಂವ್" (ಕುಮಾಂವಿನ ನರಭಕ್ಷಕಗಳು) ಈ ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ಜನಪ್ರಿಯತೆಯನ್ನು ಒದಗಿಸಿದೆ. ಈ ಪ್ರಸಿದ್ಧ ಬೇಟೆಗಾರ ಕುಮಾವೂನ್ ನಲ್ಲಿದ್ದ ಆರು ಅಪಾಯಕಾರಿ ಹುಲಿಗಳನ್ನು ಬೇಟೆಯಾಡಿ ಕೊಂದಿದ್ದರು. ಅವುಗಳಲ್ಲಿ ಈ ಪ್ರಾಂತ್ಯದಲ್ಲಿ ನೂರಾರು ಬಲಿಗಳನ್ನು ಪಡೆದಿದ್ದ ಚಂಪಾವತ್‍ನ ಹುಲಿ ಮತ್ತು ಪನರ್ ನ ಚಿರತೆಗಳು ಸೇರಿವೆ.

ಮುಕ್ತೇಶ್ವರ್ ಕಾಡುಗಳು ಮುಸಿಯ ಕೋತಿಗಳಿಗೆ, ಲಂಗೂರ್ ಜಬ್ಬರ್ಸ್, ಜಿಂಕೆ, ಬೆಟ್ಟಗಾಡು ಹಕ್ಕಿಗಳು, ಬೆಟ್ಟಗಾಡು ಚಿರತೆಗಳು ಹಾಗು ಹಿಮಾಲಯದ ಕಪ್ಪು ಕರಡಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರು ಹಿಮಾಲಯನ್ ರೂಬಿಥ್ರೋಟ್, ಬಿಳಿ ಕಂಠದ ಲಾಫಿಂಗ್ ತ್ರಷ್ಮ್, ರೆಡ್-ಬಿಲ್ಲೆಡ್ ಲೆಯೊತ್ರಿಕ್ಸ್ ಮತ್ತು ಕಪ್ಪು ಬಾಲದ ಹದ್ದಿನಂತಹ ಪಕ್ಷಿಗಳನ್ನು ಕಾಣಬಹುದು. ಇದರ ಜೊತೆಗೆ ಅಪರೂಪದ ಹಿಮಾಲಯನ್ ಮೌಂಟೇನ್ ಕ್ವೇಯಿಲ್ ಪಕ್ಷಿಗಳನ್ನು ಸಹ ಕಣ್ತುಂಬಿಕೊಳ್ಳಬಹುದು. ಪ್ರವಾಸಿಗರು ಇಲ್ಲಿ ಶಿಲಾರೋಹಣ ಮತ್ತು ರಾಪ್ಪೆಲಿಂಗ್‍ನಂತಹ ಚಟುವಟಿಕೆಗಳನ್ನು ಈ ಪ್ರಾಂತ್ಯದಲ್ಲಿರುವ ಎತ್ತರದ ಪರ್ವತಗಳಲ್ಲಿ ಕೈಗೊಳ್ಳಲು ಅವಕಾಶಗಳಿವೆ.

ಪರಶಿವನಿಗಾಗಿ ನಿರ್ಮಿಸಲಾಗಿರುವ ಪ್ರಾಚೀನವಾದ ಮುಕ್ತೇಶ್ವರ್ ದೇವಾಲಯ ಇಲ್ಲಿದೆ. ಇದರಲ್ಲಿ ಬಿಳಿಯ ಅಮೃತಶಿಲೆಯ ಶಿವಲಿಂಗವಿದೆ. ಇದರ ಸುತ್ತಲು ಬ್ರಹ್ಮ, ವಿಷ್ಣು, ಪಾರ್ವತಿ, ಹನುಮಾನ್, ಗಣೇಶ ಮತ್ತು ನಂದಿ ವಿಗ್ರಹಗಳಿವೆ. ಈ ದೇವಾಲಯಕ್ಕೆ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಸುಲಭವಾಗಿ ತಲುಪಬಹುದು.

ಮುಕ್ತೇಶ್ವರ್ ಸಮೀಪದಲ್ಲಿ ಸಿಟ್ಲ ಎಂಬ ಗಿರಿಧಾಮವಿದೆ. ಇದೊಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದ್ದು, ಸಮುದ್ರ ಮಟ್ಟದಿಂದ 7000 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಗಿರಿಧಾಮವು ಸುಮಾರು 39 ಎಕರೆ ಪ್ರದೇಶದಷ್ಟು ವಿಸ್ತೀರ್ಣವನ್ನು ಹೊಂದಿದೆ. ನೀವು ಇಲ್ಲಿಂದ ನಯನ ಮನೋಹರವಾದ ಹಿಮಾಲಯದ ಗಿರಿಶಿಖರಗಳನ್ನು ಕಾಣಬಹುದು. ಈ ಗಿರಿಧಾಮವು ಹಚ್ಚ ಹಸಿರಾದ ಓಕ್ ಮತ್ತು ಪೈನ್ ಮರಗಳಿಂದ ಸುತ್ತುವರೆದಿದೆ.

ತನ್ನ ದಂತಕಥೆಗಳಿಂದ ಗಮನಸೆಳೆಯುವ 'ಚೌತಿ ಜಾಲಿ' ಅಥವಾ 'ಚೌಲಿ ಕಿ ಜಾಲಿ' ಎಂಬ ಸ್ಥಳವು ಮುಕ್ತೇಶ್ವರ್ ದೇವಾಲಯದ ಪಕ್ಕದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ, ಇಲ್ಲಿ ದೇವತೆಗಳಿಗು ಮತ್ತು ದಾನವರ ನಡುವೆ ಒಂದು ಯುದ್ಧ ನಡೆಯಿತಂತೆ. ಒಂದು ಗುರಾಣಿ, ಆನೆಯ ಮುಂಡ ಮತ್ತು ಅಸ್ಪಷ್ಟವಾದ ಕತ್ತಿಯಂತಹ ರಚನೆಯನ್ನು ಇಂದಿಗು ನಾವು ಇಲ್ಲಿ ಕಾಣಬಹುದು. ವರ್ಷಪೂರ್ತಿ ಇಲ್ಲಿಗೆ ಹಲವಾರು ಭಕ್ತಾಧಿಗಳು ಬಂದು ಹೋಗುತ್ತಿರುತ್ತಾರೆ. ಪ್ರಾಚೀನವಾದ ರಾಜರಾಣಿ ದೇವಾಲಯವು ಇಲ್ಲಿರುವ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಾಲಯವನ್ನು ಸುಮಾರು 11 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ತನ್ನ ಶಿಲ್ಪಕಲೆಗೆ ಖ್ಯಾತಿ ಪಡೆದಿದೆ.

ಕ್ರಿ.ಶ 1050 ರಲ್ಲಿ ನಿರ್ಮಾಣಗೊಂಡಿರುವ ಬ್ರಹ್ಮೇಶ್ವರ ದೇವಾಲಯವು ಇಲ್ಲಿನ ಪ್ರಮುಖ ದೇವಾಲಯವಾಗಿದೆ. ಪ್ರವಾಸಿಗರು ಇಲ್ಲಿ ಅದ್ಭುತವಾದ ಶಿಲ್ಪಕಲೆಯ ವೈಭವವನ್ನು ನೋಡಿ ಆನಂದಿಸಬಹುದು. ಕುಮಾವೂನ್ ಬೆಟ್ಟಗಳ ಮೇಲೆ ನೆಲೆಗೊಂಡಿರುವ ನಾಥುವಖಾನ್ ಎಂಬ ಸುಂದರವಾದ ಗುಡ್ಡಗಾಡು ಹಳ್ಳಿಯು ಇಲ್ಲಿನ ಮತ್ತೊಂದು ಪ್ರಮುಖವಾದ ಆಕರ್ಷಣೆಯಾಗಿದೆ. ಇದು ಹಿಮಾಲಯ ಶ್ರೇಣಿಗಳ ಸುಂದರವಾದ ನೋಟವನ್ನು ಒದಗಿಸುತ್ತದೆ. ಈ ಪ್ರಾಂತ್ಯವು ಓಕ್, ಪೈನ್, ಬಿರ್ಚ್ ಮತ್ತು ಕಪಃಲ್ ಮರಗಳಿಂದ ಆವೃತವಾಗಿದೆ. ಇಲ್ಲಿ ಹಳೆಯ ಕಾಟೇಜ್‍ಗಳು ಸಹ ಕಾಣಸಿಗುತ್ತವೆ. ಇವುಗಳು ಒಟ್ಟಾರೆಯಾಗಿ ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಪ್ರವಾಸಿಗರು ಇಲ್ಲಿ ಚಾರಣ ಮತ್ತು ನಡಿಗೆಗಳಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ಈ ಪ್ರಾಂತ್ಯದ ಸೌಂದರ್ಯವನ್ನು ಸವಿಯಬಹುದು.

1893 ರಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿ ಸ್ಥಾಪನೆಗೊಂಡ ಪಾರಂಪರಿಕ ಸಂಸ್ಥೆಯಾದ ಭಾರತೀಯ ಪಶು ವೈಧ್ಯ ಸಂಶೋಧನಾ ಸಂಸ್ಥೆಯ ಕಛೇರಿ ಇಲ್ಲಿದೆ. ಇದು ಭಾರತದಲ್ಲಿ ಪಶು ವೈಧ್ಯ ವಿಜ್ಞಾನವು ಬೆಳೆಯಲು ತನ್ನದೆ ಆದ ಕೊಡುಗೆಯನ್ನು ನೀಡಿದೆ. ಈ ಸಂಸ್ಥೆಯು ಬ್ಯಾಕ್ಟೀರಿಯಾಲಜಿ, ವಂಶವಾಹಿ ಮತ್ತು ಪಶು ಪೋಷಕಾಂಶಗಳ ಬಗ್ಗೆ ಆಳವಾದ ಅಧ್ಯಯನವನ್ನು ಕೈಗೊಳ್ಳುತ್ತದೆ. ಇಲ್ಲಿ ಪಶು ವೈದ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವು ಸಹ  ಇದ್ದು ಪ್ರವಾಸಿಗರು ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

ಪ್ರಖ್ಯಾತ ಬ್ರಿಟೀಷ್ ಬೇಟೆಗಾರ ಮತ್ತು ಪರಿಸರ ತಜ್ಞರಾದ ಜಿಮ್ ಕಾರ್ಬೆಟ್ ಅಥವಾ ಎಡ್ವರ್ಡ್ ಜೇಮ್ಸ್ ಎಂದು ಸಹ ಕರೆಯಲ್ಪಡುತ್ತಿದ್ದ ಇವರಿಗಾಗಿ ಅರ್ಪಿಸಲಾಗಿರುವ ಮುಕ್ತೇಶ್ವರ್ ಪ್ರವಾಸಿ ಬಂಗಲೆಯು ಶಿವನ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಬಂಗಲೆಯು ಕುಮಾವೂನ್ ನಲ್ಲಿದ್ದ ಭಯಾನಕ ನರಭಕ್ಷಕ ಹುಲಿಯನ್ನು ಬೇಟೆಯಾಡಲು ತಂತ್ರಗಳನ್ನು ರೂಪಿಸುತ್ತಿದ್ದ ಸಮಯದಲ್ಲಿ ಜಿಮ್ ಕಾರ್ಬೆಟ್‍ರವರ ವಿಶ್ರಾಂತಿ ಗೃಹವಾಗಿ ಕಾರ್ಯನಿರ್ವಹಿಸಿತ್ತು. ಈ ಪ್ರಸಿದ್ಧ ವ್ಯಕ್ತಿ ಬಳಸುತ್ತಿದ್ದ ಕೆಟಲ್ ಅನ್ನು ನಾವು ಇಂದಿಗೂ ಇಲ್ಲಿ ಕಾಣಬಹುದು.

ಮುಕ್ತೇಶ್ವರಕ್ಕೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಈ ಪ್ರಾಂತ್ಯವು ವರ್ಷ ಪೂರ್ತಿ ಆಹ್ಲಾದಕರವಾದ ಹವಾಮಾನವನ್ನು ಹೊಂದಿದೆ. ಆದರೆ, ಪ್ರವಾಸಿಗರು ಈ ಪ್ರದೇಶಕ್ಕೆ ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಭೇಟಿಕೊಡದಿರುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ವಿಮಾನ ವಿಳಂಬ ಮತ್ತು ಟ್ರಾಫಿಕ್ ಸಮಸ್ಯೆಗಳು ದಿನ ನಿತ್ಯದ ಗೋಳಾಗಿರುತ್ತದೆ.

ಮುಕ್ತೇಶ್ವರ್ ಪ್ರಸಿದ್ಧವಾಗಿದೆ

ಮುಕ್ತೇಶ್ವರ್ ಹವಾಮಾನ

ಮುಕ್ತೇಶ್ವರ್
34oC / 92oF
 • Sunny
 • Wind: SW 5 km/h

ಉತ್ತಮ ಸಮಯ ಮುಕ್ತೇಶ್ವರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮುಕ್ತೇಶ್ವರ್

 • ರಸ್ತೆಯ ಮೂಲಕ
  ಮುಕ್ತೇಶ್ವರವು ಇತರ ನಗರಗಳೊಂದಿಗೆ ಉತ್ತಮ ಬಸ್ಸು ಸಂಪರ್ಕವನ್ನು ಹೊಂದಿದೆ. ರಾಜ್ಯ ಸರ್ಕಾರಿ ಮತ್ತು ಖಾಸಗಿ ಐಶಾರಾಮಿ ಬಸ್ಸುಗಳು ಈ ಸ್ಥಳಕ್ಕೆ ಹೋಗಲು ದೊರೆಯುತ್ತವೆ. ಪ್ರವಾಸಿಗರು ದೆಹಲಿಯ ವಿವೇಕಾನಂದ್ ಅಂತರ್ ರಾಜ್ಯ ಬಸ್ ನಿಲ್ದಾಣದಿಂದ ಇಲ್ಲಿಗೆ ಬಸ್ಸಿನಲ್ಲಿ ಸಹ ಆಗಮಿಸಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಟ್‍ಗೋಡಂ ನಿಲ್ದಾಣವು ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಇದು ಮುಕ್ತೇಶ್ವರದಿಂದ 73 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಮುಕ್ತೇಶ್ವರಕ್ಕೆ ಟ್ಯಾಕ್ಸಿಗಳು ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಂತನಗರ್ ವಿಮಾನ ನಿಲ್ದಾಣವು ಮುಕ್ತೇಶ್ವರಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 100 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವಿಮಾನ ನಿಲ್ದಾಣದಿಂದ ಪೂರ್ವ ಪಾವತಿ ಟ್ಯಾಕ್ಸಿಗಳು ನಿಮ್ಮನ್ನು ಮುಕ್ತೇಶ್ವರಕ್ಕೆ ತಲುಪಿಸಲು ನೆರವಾಗುತ್ತವೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಸಹ ಪಂತನಗರ್ ವಿಮಾನ ನಿಲ್ದಾಣದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಗೆ ದಿನ ನಿತ್ಯ ವಿಮಾನಗಳು ಬಂದು ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
04 Jul,Sat
Return On
05 Jul,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
04 Jul,Sat
Check Out
05 Jul,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
04 Jul,Sat
Return On
05 Jul,Sun
 • Today
  Mukteshwar
  34 OC
  92 OF
  UV Index: 9
  Sunny
 • Tomorrow
  Mukteshwar
  29 OC
  84 OF
  UV Index: 9
  Sunny
 • Day After
  Mukteshwar
  30 OC
  85 OF
  UV Index: 9
  Partly cloudy