Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಆಕರ್ಷಣೆಗಳು » ಚೌತಿ ಜಾಲಿ

ಚೌತಿ ಜಾಲಿ, ಮುಕ್ತೇಶ್ವರ್

1

ಚೌತಿ ಜಾಲಿ ಅಥವಾ ಚೌಲಿ ಕಿ ಜಾಲಿಯು ಮುಕ್ತೇಶ್ವರದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಮುಕ್ತೇಶ್ವರ್ ದೇವಾಲಯಕ್ಕೆ ಹೊಂದಿಕೊಂಡಂತಿದೆ. ಇದು ಗಿರಿಶೃಂಗದಲ್ಲಿ ನೆಲೆಗೊಂಡಿದ್ದು, ಕುಮಾವೂನ್ ಕಣಿವೆ ಮತ್ತು ಹಿಮಾಲಯದ ಪರ್ವತ ಶ್ರೇಣಿಗಳ ಸುಂದರವಾದ ನೋಟವನ್ನು ಒದಗಿಸುತ್ತದೆ. ದಂತಕತೆಗಳ ಪ್ರಕಾರ, ಈ ಸ್ಥಳದಲ್ಲಿ ದೇವತೆಗಳಿಗು ಮತ್ತು ದಾನವರಿಗು ಯುದ್ಧ ನಡೆದಿತ್ತಂತೆ. ಅದಕ್ಕೆ ಪುರಾವೆಯಾಗಿ ಇಲ್ಲಿ ಒಂದು ಗುರಾಣಿ, ಆನೆಯ ಮುಂಡ ಮತ್ತು ಅಸ್ಪಷ್ಟವಾದ ಕತ್ತಿಯ ಗುರುತುಗಳನ್ನು ನಾವು ಇಂದಿಗು ಕಾಣಬಹುದಾಗಿದೆ.

ಮತ್ತೊಂದು ದಂತಕಥೆಯು ಇಲ್ಲಿರುವ ಸ್ವಾಭಾವಿಕವಾಗಿ ರಚನೆಯಾದ ಜಾಲಕ ಒಳಗೊಂಡಂತಹ ಬಂಡೆಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿದೆ. ಆ ನಂಬಿಕೆಗಳ ಪ್ರಕಾರ, ಯಾವುದೆ ಬಂಜೆ ಹೆಂಗಸು ಇದನ್ನು ಸ್ಪರ್ಶಿಸಿ ಬಂದರೆ ಆಕೆಗೆ ಮಕ್ಕಳಾಗುವ ವರ ಪ್ರಾಪ್ತವಾಗುತ್ತದಂತೆ. ಮತ್ತೊಂದು ದಂತ ಕಥೆಯ ಪ್ರಕಾರ ಕೈಲಾಷ್ - ಮಾನಸ ಸರೋವರ ಯಾತ್ರೆಗೆ ತೆರಳುತ್ತಿದ್ದ ಒಂದು ಭಕ್ತ ಸಮೂಹವು ನಡುದಾರಿಯಲ್ಲಿ ದೊಡ್ಡ ಬಂಡೆ ಅಡ್ಡ ಬಂದದುಕ್ಕಾಗಿ ಮುಂದೆ ತೆರಳಲಾರದೆ ನಿಂತರಂತೆ. ಆಗ ಅವರು ಪರಶಿವನನ್ನು ಬೇಡಿಕೊಂಡರಂತೆ. ಆಗ ಪರಶಿವನು ಆ ಸಮೂಹದ ಗುರುವಿಗೆ ಕಲ್ಲಿಗೆ ನಾಲ್ಕು ಬಾರಿ ಹೊಡೆಯಲು ತಿಳಿಸಿದನಂತೆ. ಗುರುವು ಹಾಗೆ ನಾಲ್ಕು ಬಾರಿ ಮಾಡಲು ಆ ಬಂಡೆಯ ಮೇಲೆ ಕುಳಿ ಅಥವಾ ರಂಧ್ರ ಕಾಣಿಸಿಕೊಂಡಿತಂತೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat