Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಹವಾಮಾನ

ಮುಕ್ತೇಶ್ವರ್ ಹವಾಮಾನ

ಬೇಸಿಗೆಯು ಈ ಸುಂದರ ಗಿರಿಧಾಮಕ್ಕೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಮುಕ್ತೇಶ್ವರದಲ್ಲಿ ಮಾರ್ಚ್ ತಿಂಗಳು ಬೇಸಿಗೆಯ ಆರಂಭದ ತಿಂಗಳಾಗಿ ಗುರುತಿಸಲ್ಪಟ್ಟಿದೆ. ಇದು ಮೇ ವರೆಗೆ ಮುಂದುವರೆಯುತ್ತದೆ. ಈ ಸಮಯದಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 23° ಸೆಲ್ಶಿಯಸ್ ಆದರೆ ಕನಿಷ್ಠ ಉಷ್ಣಾಂಶವು 10° ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್ ): ಮುಕ್ತೇಶ್ವರದಲ್ಲಿ ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಅತಿಯಾದ ಮಳೆ ಬೀಳುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ ): ನವೆಂಬರ್ ತಿಂಗಳು ಇಲ್ಲಿ ಚಳಿಗಾಲದ ಆರಂಭದ ತಿಂಗಳಾಗಿ ಗುರುತಿಸಲ್ಪಟ್ಟಿದೆ. ಇದು ಫೆಬ್ರವರಿಯವರೆಗೆ ವಿಸ್ತರಿಸಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 17° ಸೆಲ್ಶಿಯಸ್ ಮತ್ತು ಕನಿಷ್ಠ 3° ಸೆಲ್ಶಿಯಸ್ ಇರುತ್ತದೆ. ಈ ಅವಧಿಯಲ್ಲಿ ಈ ಪ್ರಾಂತ್ಯದಲ್ಲಿ ಹಿಮಪಾತವು ಸಹ ಉಂಟಾಗುತ್ತದೆ.