Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಕೋರಿ » ಹವಾಮಾನ

ಚೌಕೋರಿ ಹವಾಮಾನ

ಚೌಕೋರಿಗೆ ಆಗಮಿಸಲು ಬೇಸಿಗೆ ಹಾಗೂ ಚಳಿಗಾಲದ ಪೂರ್ವದ ಕೆಲವು ದಿನಗಳು ಅತ್ಯಂತ ಸೂಕ್ತವಾಗಿದೆ. ಈ ಅವಧಿಯಲ್ಲಿ ಪ್ರವಾಸಕ್ಕೆ ಉತ್ತಮವಾದ ವಾತಾವರಣವಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್ ): ಏಪ್ರಿಲ್‌ನಲ್ಲಿ ಶುರುವಾಗುವ ಬೇಸಿಗೆಗಾಲ ಜೂನ್‌ ತಿಂಗಳಿನವರೆಗೂ ಇರುತ್ತದೆ. ಈ ಸಂದರ್ಭದಲ್ಲಿ ಕನಿಷ್ಠ 17 ಡಿಗ್ರಿ ಸೆಂಟಿಗ್ರೇಡ್‌ ನಿಂದ ಉಷ್ಣಾಂಶ 25 ಡಿಗ್ರಿ ಸೆಂ. ವರೆಗೂ ಏರಿಕೆಯಾಗುತ್ತದೆ. ಈ ಪ್ರದೇಶಕ್ಕೆ ಬರಲು ಇದು ಉತ್ತಮ ಕಾಲ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್): ಇಲ್ಲಿ ಮಳೆಗಾಲದಲ್ಲಿ ದಟ್ಟವಾದ ಮಳೆಯಾಗುತ್ತದೆ. ಜುಲೈನಿಂದ ಸೆಪ್ಟೆಂಬರ್ ವರೆಗೂ ಮಳೆಗಾಲವಿರುತ್ತದೆ.

ಚಳಿಗಾಲ

(ಆಕ್ಟೋಬರ್ ನಿಂದ ಫೆಬ್ರುವರಿ): ಚೌಕೋರಿಯಲ್ಲಿ ಆಕ್ಟೋಬರ್ ನಿಂದ ಫೆಬ್ರುವರಿ ವರೆಗೂ ಚಳಿಗಾಲ ಇರುತ್ತದೆ. ಈ ಅವಧಿಯಲ್ಲಿ ತಾಪಮಾನ 10 ರಿಂದ 2 ಡಿಗ್ರಿ ಸೆಂಟಿಗ್ರೇಡ್‌ ವರೆಗೂ ಇಳಿಕೆಯಾಗುತ್ತದೆ.