ಬಿನ್ಸರ್, ಅಲ್ಮೋರಾ

ಬಿನ್ಸರ್, ಅಲ್ಮೋರಾ ಜಿಲ್ಲೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಸ್ಥಳದ ಹೆಸರು ಹಿಂದೂ ದೇವರು ಶಿವನಿಂದ ಬಂದಿದ್ದು ಬಿನ್ಸರ್ ದೇವ್ ಎಂದೂ ಕೂಡಾ ಪ್ರಸಿದ್ಧವಾಗಿದೆ. ಈ ಸ್ಥಳವು ಚಂದ್ ರಾಜರುಗಳ ಬೇಸಿಗೆಯ ರಾಜಧಾನಿಯಾಗಿತ್ತು. ಈ ತಾಣವು ಬೃಹತ್ ಹಿಮಾಲಯ ಶ್ರೇಣಿಗಳ ಹಿನ್ನೆಲೆಯಲ್ಲಿ ನೆಲೆಗೊಂಡಿದ್ದು, ಅಲ್ಮೋರಾದ ಜನಪ್ರಿಯ ಗಿರಿಧಾಮವಾಗಿ ಸೇವೆಸಲ್ಲಿಸುತ್ತಿದ್ದು, ಸಮುದ್ರ ಮಟ್ಟದಿಂದ 2400 ಮೀಟರ್ ಎತ್ತರದಲ್ಲಿ ನೆಲೆಸಿದೆ.

ಕುಮಾವೂನ್ ಪ್ರದೇಶದಲ್ಲಿರುವ ಅತ್ಯಂತ ಎತ್ತರದ ಗಿರಿಧಾಮ ಇದಾಗಿದೆ. ಈ ಸ್ಥಳಕ್ಕೆ ಹತ್ತಿರದಲ್ಲಿ ಹಿಂದೂ ಭಗವಾನ್ ಶಿವನ ದೇವಾಲಯವಿದೆ. ಜೊತೆಗೆ, ಈ ಸ್ಥಳವು ಬೃಹತ್ ಹಿಮಾಲಯದ ಶಿಖರಗಳು, ಕೇದಾರ್ನಾಥ್ ಶಿವಲಿಂಗ, ತ್ರಿಶೂಲ್ ಮತ್ತು ನಂದಾ ದೇವಿ ಮೊದಲಾದವುಗಳ ಒಂದು ಪರಿದೃಶ್ಯದ ನೋಟವನ್ನು ಒದಗಿಸುತ್ತದೆ.

Please Wait while comments are loading...