ಲಾನ್ಸ್ ಡೌನ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Lansdowne, India 21 ℃ Sunny
ಗಾಳಿ: 7 from the S ತೇವಾಂಶ: 32% ಒತ್ತಡ: 1012 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Saturday 21 Oct 12 ℃ 53 ℉ 23 ℃74 ℉
Sunday 22 Oct 11 ℃ 51 ℉ 24 ℃75 ℉
Monday 23 Oct 10 ℃ 49 ℉ 23 ℃74 ℉
Tuesday 24 Oct 9 ℃ 47 ℉ 23 ℃73 ℉
Wednesday 25 Oct 9 ℃ 48 ℉ 22 ℃71 ℉

ಮಾರ್ಚ್ ಮತ್ತು ನವೆಂಬರ್ ತಿಂಗಳ ನಡುವಿನ ಅವಧಿಯಲ್ಲಿ ಈ ಸುಂದರ ತಾಣಕ್ಕೆ ಭೇಟಿ ನೀಡುವುದು ಅತ್ಯಂತ ಸೂಕ್ತ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಮಾರ್ಚ್ ತಿಂಗಳಿನಿಂದ ಜೂನ್ ತನಕ ಇಲ್ಲಿ ಬೇಸಿಗೆ ಋತುವನ್ನು ಕಾಣಬಹುದು. ಈ ಕಾಲದಲ್ಲಿ, ಸ್ಥಳದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 30 ಡಿ. ಸೆ ಮತ್ತು 15 ಡಿ. ಸೆ ನಷ್ಟು ದಾಖಲಾಗುತ್ತದೆ. ಬೇಸಿಗೆ ಹವಾಮಾನ ಈ ಸಮಯದಲ್ಲಿ ಸಾಕಷ್ಟು  ಆಹ್ಲಾದಕರವಾಗಿರುತ್ತವೆ. ಈ ಸುಂದರ ಸ್ಥಳಕ್ಕೆ ಭೇಟಿ ನೀಡಲು ಇದು ಸೂಕ್ತವಾದ ಸಮಯ ಎಂದು ಪರಿಗಣಿಸಲಾಗಿದೆ.

ಮಳೆಗಾಲ

(ಜುಲೈ ನಿಂದ ಸಪ್ಟೆಂಬರ್): ಲಾನ್ಸ್ ಡೌನ್ ಪ್ರದೇಶದಲ್ಲಿ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿಗಳಲ್ಲಿ ಮಳೆಯಾಗುತ್ತದೆ. ಈ ಸಮಯದಲ್ಲಿ ಬೀಳುವ ಸಣ್ಣ ಪ್ರಮಾಣದ ಮಳೆಯಿಂದಾಗಿ ವಾತಾವರಣವು ಆರ್ದ್ರತೆಯಿಂದ ಕೂಡಿರುತ್ತದೆ. ಆದಾಗ್ಯೂ ಪ್ರಯಾಣಿಕರು ಈ ಸಮಯದಲ್ಲಿ ಸಮೃದ್ಧ ಹಸಿರಿನ ಸೌಂದಯವನ್ನು ಅನುಭವಿಸಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಲಾನ್ಸ್ ಡೌನ್ ನ ಚಳಿಗಾಲದ ಋತುವು ಡಿಸೆಂಬರ್ ತಿಂಗಳಲ್ಲಿ ಆರಂಭವಾಗುತ್ತದೆ ಮತ್ತು ಫೆಬ್ರವರಿ ತನಕ ಮುಂದುವರಿಯುತ್ತದೆ. ಚಳಿಗಾಲದಲ್ಲಿ ಸ್ಥಳದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 17 ಡಿ. ಸೆ ಮತ್ತು 4 ಡಿ.ಸೆ ದಾಖಲಿಸಲಾಗಿದೆ. ಪ್ರದೇಶದಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಭಾರೀ ಹಿಮಪಾತಗಳು ಸಂಭವಿಸುತ್ತವೆ.