ಗಡ್ವಾಲಿ ಮೆಸ್ ಕಟ್ಟಡವು, ಲಾನ್ಸ್ ಡೌನ್ ನ ಪ್ರಾಚೀನ ಪರಂಪರೆಯ ಕಟ್ಟಡಗಳಲ್ಲಿ ಒಂದಾಗಿದೆ. ಈ ಕಟ್ಟಡವನ್ನು ಬ್ರಿಟಿಷರಿಂದ 1888 ರಲ್ಲಿ ನಿರ್ಮಿಸಲಾಯಿತು ಮತ್ತು ನಂತರದಲ್ಲಿ 1892 ರಲ್ಲಿ ಒಂದು ಮೆಸ್ ಆಗಿ ಇದು ಪರಿವರ್ತಿತವಾಯಿತು. ಈ ಮೆಸ್ ಭಾರತೀಯ ಸೇನೆಯ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುವ ಮತ್ತು ಏಷ್ಯಾದ ಒಂದು ಪ್ರಮುಖ ವಸ್ತು ಸಂಗ್ರಹಾಲಯ ಎಂದು ಪರಿಗಣಿಸಲ್ಪಟ್ಟಿದೆ. ಈ ವಸ್ತು ಸಂಗ್ರಹಾಲಯವು ಕಾಡು ಪ್ರಾಣಿಗಳ ಚರ್ಮದ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಅಲ್ಲದೇ ಇಲ್ಲಿ ಹಿಮಾಲಯದ ಕೆಲವು ಶಿಖರಗಳಾದ ನಂದಾದೇವಿ, ಚೌಕಾಂಬಾ, ಕಮೇಟ್/ತ್ ಮೊದಲಾದ ಶಿಖರಗಳನ್ನು ಮಾರ್ಗವನ್ನು ನಿರ್ದೇಶಿಸಲಾತ್ತದೆ.