ಬೋಟಿಂಗ್, ಸಾತ್ತಲ್

ಬೆಟ್ಟ ಪ್ರದೇಶಗಳ ಕಾನನದ ಮಧ್ಯೆ, ಹಚ್ಚ ಹಸಿರಿನ ನಡುವೆ, ಪಕ್ಷಿಗಳ ಚಿಲಿ ಪಿಲಿ ಕೇಳುತ್ತ, ಶುದ್ಧವಾದ ಗಾಳಿ ಸೇವಿಸುತ್ತ ತಂಪಾದ ನೀರಿನಲ್ಲಿ ವಿಹರಿಸುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ! ಹೌದು..ಈ ರೀತಿಯಾಗಿ ಬೋಟಿಂಗ್ ಮಾಡಲು ಈ ಪ್ರದೇಶದಲ್ಲಿ ಅವಕಾಶವಿದ್ದು, ಇದೊಂದು ಸಾತ್ತಲ್ ನ ಪ್ರಮುಖ ಆಕರ್ಷಣೀಯ ಚಟುವಟಿಕೆಯಾಗಿದೆ. ಪೂರ್ಣ ಚಂದ್ರ ಸಮಯದಲ್ಲಂತೂ ಈ ಬೋಟಿಂಗ್ ಅನುಭವ ನಿಮಗೆ ಸ್ವರ್ಗ ಮೂರೇ ಗೇಣು ಎಂಬ ಭಾವನೆ ಮೂಡಿಸುವುದರಲ್ಲಿ ಯಶಸ್ವಿ ಪಾತ್ರ ನಿರ್ವಹಿಸುತ್ತದೆ.

Please Wait while comments are loading...