ಅಲ್ವಾರ್ – ಕೌತುಕಗಳ ಸಮ್ಮಿಶ್ರಣ

ರಾಜಸ್ತಾನ ರಾಜ್ಯದ ಅರಾವಳಿ ಶ್ರೇಣಿಯ ಒರಟಾದ ಕಲ್ಲುಗಳ ಮಧ್ಯೆ ಇರುವ ಪ್ರದೇಶ ಅಲ್ವಾರ್. ಈ ಪ್ರದೇಶವು ಅಲ್ವಾರ್ಣ ಜಿಲ್ಲೆಯ ಪ್ರಮುಖ ಕೇಂದ್ರವಾಗಿದೆ. ಪುರಾಣದ ಪ್ರಕಾರ ಇದನ್ನು ಮತ್ಸ್ಯ ದೇಶ ಎಂದು ಕರೆಯಲಾಗುತ್ತದೆ. ಪಾಂಡವರು ತಮ್ಮ ವನವಾಸದ 13ನೇ ವರ್ಷವನ್ನು ಇಲ್ಲೇ ಕಳೆದರು ಎಂಬುದು ಪ್ರತೀತಿ. ಐತಿಹಾಸಿಕವಾಗಿ ಈ ಪ್ರದೇಶವು ಮೇವಾರರ್ದ ಎಂದು ಕರೆಯಲ್ಪಡುತ್ತದೆ. ಅಲ್ವಾರವು ಸುಂದರವಾದ ಕೆರೆಗಳು, ವೈಭವಯುತ ಪ್ರದೇಶಗಳು, ಆಕರ್ಷಕ ದೇವಸ್ಥಾನಗಳು, ಸುಂದರವಾದ ಸ್ಮಾರಕಗಳು ಮತ್ತು ಕೋಟೆಗಳ ತಾಣವಾಗಿದೆ.

ಕೋಟೆ, ಅರಮನೆಗಳು, ಕೆರೆಗಳು, ಮ್ಯೂಸಿಯಂ‌ಗಳು ಮತ್ತು ಇತರೆ...

ಅಲ್ವಾರಿಗೆ ಬರುವ ಪ್ರವಾಸಿಗರು ಬಾಲಾ ಕಿಲಾವನ್ನು ಭೇಟಿ ಮಾಡಬಹುದು, ಇದನ್ನು ಅಲ್ವಾರ್ಇ ಕೋಟೆ ಎಂದು ಕರೆಯಲಾಗುತ್ತದೆ. ಇದನ್ನು 1550 ರಲ್ಲಿ ಹಸನ್ ಖಾನ್ ಮೆವಾತಿಯು ಕಟ್ಟಿದ್ದ. ಈ ಕಲ್ಲಿನ ಕಟ್ಟಡದ ಕುಸುರಿ ಕೆಲಸ ಮತ್ತು ವಿನ್ಯಾಸವು ಪ್ರವಾಸಿಗರ ಆಕರ್ಷಣೆಯನ್ನು ಸೆಳೆಯುತ್ತದೆ. ಕೋಟೆಗೆ ಆರು ಗೇಟುಗಳಿದ್ದು, ಜೈ‌ ಪೋಲ್‌, ಲಕ್ಷ್ಮಣ ಪೋಲ್, ಸೂರತ್ ಪೋಲ್, ಚಾಂದ್‌ ಪೋಲ್‌, ಅಂಧೇರಿ ಗೇಟ್ ಮತ್ತು ಕೃಷ್ಣ ಗೇಟ್‌ಗಳನ್ನು ಹೊಂದಿದೆ. ನಗರ ಅರಮನೆ ಮತ್ತು ವಿಜಯ ಮಂದಿರ ಅರಮನೆಯು ಅಲ್ವಾರಿನ ಇತರ ಪ್ರಮುಖ ವಾಸ್ತುಶಿಲ್ಪವಾಗಿದೆ. ಇದು ಮೊದಲ ಅರಮನೆಯಾಗಿದ್ದು, ಇದರ ವಾಸ್ತುಶಿಲ್ಪ ಶೈಲಿ ಮತ್ತು ಮ್ಯೂಸಿಯಂನಿಂದಾಗಿ ಜನಪ್ರಿಯವಾಗಿದೆ. ವಿಜಯ ಮಂದಿರ ಅರಮನೆಯು 105 ಕೋಣೆಗಳಿಗೆ, ಸುಂದರವಾದ ಗಾರ್ಡನ್‌ಗೆ ಮತ್ತು ಕೆರೆಗಳಿಗೆ ಹೆಸರುವಾಸಿಯಾಗಿದೆ.

ಜೈಸಮಂದ್‌ ಕೆರೆ, ಸಿಲಿಸೆರ್ ಕೆರೆ ಮತ್ತು ಸಾಗರ ಕೆರೆಯು ಕೂಡಾ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಪ್ರವಾಸಿಗರು ಮೂಸಿ ಮಹಾರಾಣಿ ಕಿ ಚತ್ರಿ, ತ್ರಿಪೋಲಿಯಾ, ಮೋತಿ ಡೋಗ್ರಿ, ಭಂಗ್ರಾ, ಕಂಪನಿ ಬಾಗ್‌, ಗೋಡೆ ಗಡಿಯಾರ, ಸರ್ಕಾರಿ ಮ್ಯೂಸಿಯಂ, ಫತೇ ಜುಂಗ್‌ನ ಸಮಾಧಿ, ಕಲಕಂಡ್‌ ಮಾರುಕಟ್ಟೆ ಮತ್ತು ನಲ್ದೇಶ್ವರವನ್ನು ಅಲ್ವಾರಕ್ಕೆ ಪ್ರವಾಸಮಾಡುವ ಸಂದರ್ಭದಲ್ಲಿ ವೀಕ್ಷಿಸಬಹುದು.

ಅಲ್ವಾರಕ್ಕೆ ಹೋಗುವುದು

ಪ್ರವಾಸಿಗರು ಅಲ್ವಾರವನ್ನು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಸಂಗಾನೇರ್ರ ವಿಮಾನ ನಿಲ್ದಾಣವು ಜೈಪುರಕ್ಕೆ ಸಮೀಪದ್ದಾಗಿದೆ. ವಿದೇಶಿ ಪ್ರವಾಸಿಗರು ನವದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರವಾಸ ಮಾಡಬಹುದು. ಅಲ್ವಾರ್ ರೈಲ್ವೆ ನಿಲ್ದಾಣವು ದೆಹಲು ಮತ್ತು ಜೈಪುರಕ್ಕೆ ಸಂಪರರ್ಕವನ್ನು ಹೊಂದಿವೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ಸ್ಟೇಷನ್ನುಗಳಿಂದ ಕ್ಯಾಬ್‌ಗಳು ಲಭ್ಯವಿದೆ. ಅಲ್ವಾರದ ಸಮೀಪದ ನಗರಗಳಿಂದ ಬಸ್‌ಗಳೂ ಕೂಡಾ ಓಡಾಡುತ್ತವೆ.

ವರ್ಷದ ಬಹುತೇಕ ಮಾಸಗಳಲ್ಲಿ ಅಲ್ವಾರ್ು ಪ್ರದೇಶವು ಒಣಹವೆಯನ್ನು ಹೊಂದಿರುತ್ತದೆ. ಅಲ್ವಾರಕ್ಕೆ ಪ್ರವಾಸ ಮಾಡುವ ಉತ್ತಮ ಸ್ಥಳವೆಂದರೆ ಅಕ್ಬೋರಿನಿಂದ ಮಾರ್ಚ್‌ ತಿಂಗಳುಗಳ ಮಧ್ಯೆ.

Please Wait while comments are loading...