Search
 • Follow NativePlanet
Share

ಟೋಂಕ್‌- ಅದ್ಭುತಗಳ ಸಮೂಹ ನಗರಿ

22

ಟೋಂಕ್‌  ರಾಜಸ್ಥಾನದ ಬನ್ಸಿ ನದಿಯ ತಟದಲ್ಲಿ ನೆಲೆಯೂರಿರುವ ನಗರಿ. ಟೋಂಕ್‌ ಜಿಲ್ಲೆಯೂ ಆಗಿದ್ದು, ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಇದನ್ನು ಹಲವು ರಾಜರು ಆಳಿದ್ದಾರೆ. ಇದು ಜಯಪುರ ನಗರದಿಂದ 95 ಕಿ.ಮೀ. ದೂರದಲ್ಲಿದೆ. ಅದ್ಭುತಗಳಿಗೆ ಹೆಸರಾಗಿರುವ ನಗರಿ ಇದು.

ಟೋಂಕ್‌ - ಅದ್ಭುತಗಳ ಖನಿ

ಈ ಪ್ರದೇಶವನ್ನು ಹತ್ತು ಹಲವು ಐತಿಹಾಸಿಕ ಸನ್ನಿವೇಶಗಳು ಪ್ರತಿನಿಧಿಸುತ್ತಿವೆ. ಸಾಕಷ್ಟು ಪ್ರವಾಸಿತಾಣಗಳನ್ನು ಹೊಂದಿದ್ದು, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ವಾತಾವರಣ ಹೊಂದಿದೆ. ಸುನ್ಹೆರಿ ಕೋಠಿ ಅಥವಾ ದಿ "ಮ್ಯಾನ್‌ಷನ್‌ ಆಫ್‌ ಗಾಡ್‌' ಎಂಬ ತಾಣ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣ. ಇದನ್ನು ನವಾಬ್‌ ಮೊಹಮ್ಮದ್‌ ಇಬ್ರಾಹಿಂ ಅಲಿ ಖಾನ್‌  ಇದನ್ನು ನಿರ್ಮಿಸಿದ್ದಾರೆ. ಸಂಗೀತ, ನೃತ್ಯ, ಕವಿಗೋಷ್ಠಿ ಇತ್ಯಾದಿಗಳನ್ನು ನಡೆಸಲು ಇದನ್ನು ನಿರ್ಮಿಸಿದ್ದರು. ಅಲ್ಲದೇ ಇದು ಕೆಲ ಗ್ಲಾಸ್‌ ಪೇಂಟಿಂಗ್‌ಗಳ ಶೋಕೇಸ್‌ ಆಗಿಯೂ ಬಳಸಿದ್ದರು. ಇದು ಇಲ್ಲಿನ ನಜರ್‌ಬಾಗ್‌ ರಸ್ತೆಯ ಬಡಾ ಕುವಾ ಬಳಿ ಇದೆ. ಇದನ್ನೇ ಶೀಶ್‌ ಮಹಲ್‌ ಅಂತಲೂ ಕರೆಯಲಾಗುತ್ತದೆ. ಸುನ್ಹೆರಿ ಕೋಠಿಯ ಗೋಡೆಗೆ ಚಿನ್ನದಿಂದ ಪಾಲಿಶ್‌ ಮಾಡಲಾಗಿದೆ. ಸಭಾಂಗಣದಲ್ಲಿ ಕನ್ನಡಿಯಿಂದ ಅಲಂಕೃತವಾದ ಚಿತ್ರಗಳನ್ನು ಅಳವಡಿಸಿದ್ದು, ಸುಂದರವಾಗಿ ಕಂಗೊಳಿಸುತ್ತಿವೆ. ಸುನ್ಹೆರಿ ಕೋಠಿ ಅಲ್ಲದೇ ಇಲ್ಲಿ ಸಾಕಷ್ಟು ಐತಿಹಾಸಿಕ ತಾಣಗಳಿವೆ. ಇವೆಲ್ಲವೂ ನಗರದ ಶ್ರೀಮಂತಿಕೆಯನ್ನು ಧಾರಾಳವಾಗಿ ಪ್ರದರ್ಶಿಸುತ್ತಿವೆ. "ರಾಸಿಯಾ ಕೆ ತಕಿರಿ'ಯಂತೂ ಇಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ತನ್ನ ಹೆಸರಿನ ಹಿಂದೆಯೇ ಸಾಕಷ್ಟು ಕುತೂಹಲಕಾರಿ ಅಂಶವನ್ನು ಹುದುಗಿಸಿಟ್ಟುಕೊಂಡಿದೆ. ಸ್ಥಳೀಯರ ಪ್ರಕಾರ ಈ ಹೆಸರಿಗೂ ಮುನ್ನ ತಾಣವನ್ನು ಕಯಾತಿ ಲವರ್ಸ್‌ ಅಂತ ಕರೆಯಲಾಗುತ್ತಿತ್ತು. ಇದನ್ನು ಬಳಸುವವರು ತಮ್ಮ ಹೆಚ್ಚಿನ ಸಮಯವನ್ನು ಪ್ರೇಮಗೀತೆಗಳನ್ನು ಹಾಡಲು ಬಳಸುತ್ತಿದ್ದರು. ಇದರಿಂದಲೂ ಈ ವಿಶೇಷ ಹೆಸರು ಬಂದಿತ್ತು. ಇದಲ್ಲದೇ ಐತಿಹಾಸಿಕ ತಾಣ ಘಂಟಾ ಘರ್‌ ಹಾಗೂ ಜಾಮಾ ಮಸೀದಿಗಳು ಇನ್ನಿತರ ಪ್ರಮುಖ ಪ್ರವಾಸಿ ತಾಣಗಳು. ಈ ವ್ಯಾಪ್ತಿಯಲ್ಲಿ ಕಾಣಸಿಗುವ ಪ್ರಮುಖ ಸ್ಥಳ ಎಂದು ಇವು ಕರೆಸಿಕೊಳ್ಳುತ್ತಿವೆ. ಟೊಂಕ್‌ನ ಜಾಮಾ ಮಸೀದಿಯು ದೇಶದ ಅತಿದೊಡ್ಡ ಪ್ರಾರ್ಥನಾ ಮಂದಿರ ಅನ್ನುವ ಹೆಗ್ಗಳಿಕೆ ಹೊಂದಿದೆ. ಮುಸಲ್ಮಾನ್‌ ಬಾಂಧವರ ಈ ಪವಿತ್ರ ಕ್ಷೇತ್ರದ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಇದಕ್ಕೆ ಅಗತ್ಯ ವಿನ್ಯಾಸವನ್ನು ಮೈಸೂರು ಉದ್ಯಾನ, ಹಿರಣ್‌ ಮಾಗರಿ ಉದ್ಯಾನ, ಶಿವಾಜಿ ಉದ್ಯಾನವನ್ನು ಆಧರಿಸಿ ಅತ್ಯಾಕರ್ಷಕವಾಗಿ ಹಾಗೂ ಪ್ರವಾಸಿಗರನ್ನು ಸೆಳೆಯುವ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಪ್ರವಾಸಿಗರ ಗಮನ ಸೆಳೆಯುವ ಇನ್ನೊಂದು ತಾಣ ಹಾಥಿ ಭಾತಾ. ಇದು ಶಿಲ್ಪಿಯ ಬಾಹ್ಯ ಕ್ರಿಯಾತ್ಮಕತೆಯನ್ನು ವ್ಯಕ್ತಪಡಿಸುತ್ತದೆ. ಏಕಶಿಲೆಯನ್ನು ಕೆತ್ತಿ ಆನೆರೂಪ ನೀಡಿದ್ದು ಕಲಾವಿದನ ಸಾಧನೆ. ಇವೆರಡೂ ತಾಣಗಳು ಬಹುತೇಕವಾಗಿ ನಗರಕ್ಕೆ ಹತ್ತಿರವಾಗಿಯೇ ಇವೆ. ಸರಿಸುಮಾರು 30 ಹಾಗೂ 22 ಕಿ.ಮೀ. ದೂರದಲ್ಲಿವೆ.

ತಲುಪುವ ರೀತಿ

ಟೋಂಕ್‌ ತನ್ನದೇ ಆದ ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣ ಹೊಂದಿಲ್ಲ. ಆದರೆ ರಸ್ತೆ ಸಂಪರ್ಕ ಅತ್ಯುತ್ತಮವಾಗಿದೆ. ತಾಣಕ್ಕೆ ಅತಿ ಸಮೀಪದಲ್ಲಿ ಬರುವ ವಿಮಾನ ನಿಲ್ದಾಣವೆಂದರೆ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಟೋಂಕ್‌ ನಗರದಿಂದ 100 ಕಿ.ಮೀ. ದೂರದಲ್ಲಿದೆ. ದೇಶದ ಹಲವು ಕಡೆಗಳಿಂದ ಅಲ್ಲದೇ ವಿದೇಶದಿಂದಲೂ ಇಲ್ಲಿಗೆ ಸಾಕಷ್ಟು ವಿಮಾನಗಳು ಆಗಮಿಸುತ್ತವೆ. ಬನ್ಸ್ತಾಲಿ ನೆವಾಯಿ ಸಮೀಪದ ರೈಲು ನಿಲ್ದಾಣ. ದೇಶದ ವಿವಿಧೇಡೆಯಿಂದ ಇಲ್ಲಿಗೆ ರೈಲು ಸಂಪರ್ಕ ಇದೆ. ಇನ್ನು ಇಲ್ಲಿಗೆ ತಲುಪಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾಕಷ್ಟು ಬಸ್‌ ಸೌಲಭ್ಯ ಇದೆ. ಸಮೀಪದ ಪಟ್ಟಣ, ನಗರ ಹಾಗೂ ಜಿಲ್ಲಾಕೇಂದ್ರದಿಂದ ಉತ್ತಮ ಬಸ್‌ ಸೌಲಭ್ಯ ನೀಡಲಾಗಿದೆ.  ಟೋಂಕ್‌ಗೆ ಭೇಟಿ ನೀಡುವ ಪ್ರವಾಸಿಗರಿಗಾಗಿಯೇ ವಿಶೇಷ ಬಸ್‌ ಸೌಲಭ್ಯವೂ ಇದೆ. ರಾಜಸ್ತಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಆರ್‌.ಎಸ್‌.ಆರ್‌.ಟಿ.ಸಿ.) ಹಾಗೂ ಸಾಕಷ್ಟು ಖಾಸಗಿ ಬಸ್‌ ಸೇವೆ ಈ ತಾಣಕ್ಕೆ ಸಮೀಪದ ಹಲವಾರು ಪ್ರದೇಶದಿಂದ ಯಥೇಚ್ಛವಾಗಿ ಇವೆ.

ವಾತಾವರಣ

ಇಲ್ಲಿನ ವಾತಾವರಣ ಸಮಶೀತೋಷ್ಣ ವಾಗಿದೆ. ಮೂರು ಕಾಲದಲ್ಲಿಯೂ ಅಂದಿನ ಸ್ಥಿತಿ ಆಧರಿಸಿ ಕೊಂಚ ಬದಲಾಗುತ್ತಿರುತ್ತದೆ. ವರ್ಷದ ಎಲ್ಲಾ ಸಂದರ್ಭದಲ್ಲೂ ಜನ ಭೇಟಿ ನೀಡುತ್ತಾರೆ. ಆದರೆ ಪ್ರವಾಸಿಗರಿಗೆ ಅಕ್ಟೋಬರ್‌ ಹಾಗೂ ಫೆಬ್ರವರಿ ಸೂಕ್ತ ಕಾಲ. ಆ ಸಂದರ್ಭದಲ್ಲಿ ವಾತಾವರಣ ಅತ್ಯಂತ ತಂಪಾಗಿರುತ್ತದೆ. ಆಹ್ಲಾದಮಯವೂ ಆಗಿರುತ್ತದೆ. ಅಲ್ಲದೇ ಈ ಶ್ರೀಮಂತ ನಗರಿಯನ್ನು ಮಳೆಗಾಲದ ಸಂದರ್ಭದಲ್ಲೂ ಸಂದರ್ಶಿಸಬಹುದು. ಅದು ಕೂಡ ಸಕಾಲವೇ ಆಗಿದೆ.

ಟೋಂಕ್ ಪ್ರಸಿದ್ಧವಾಗಿದೆ

ಟೋಂಕ್ ಹವಾಮಾನ

ಟೋಂಕ್
35oC / 95oF
 • Haze
 • Wind: W 11 km/h

ಉತ್ತಮ ಸಮಯ ಟೋಂಕ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಟೋಂಕ್

 • ರಸ್ತೆಯ ಮೂಲಕ
  ಇನ್ನು ಇಲ್ಲಿಗೆ ತಲುಪಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾಕಷ್ಟು ಬಸ್‌ ಸೌಲಭ್ಯ ಇದೆ. ಸಮೀಪದ ಪಟ್ಟಣ, ನಗರ ಹಾಗೂ ಜಿಲ್ಲಾಕೇಂದ್ರದಿಂದ ಉತ್ತಮ ಬಸ್‌ ಸೌಲಭ್ಯ ನೀಡಲಾಗಿದೆ. ಟೋಂಕ್‌ಗೆ ಭೇಟಿ ನೀಡುವ ಪ್ರವಾಸಿಗರಿಗಾಗಿಯೇ ವಿಶೇಷ ಬಸ್‌ ಸೌಲಭ್ಯವೂ ಇದೆ. ರಾಜಸ್ತಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಆರ್‌.ಎಸ್‌.ಆರ್‌.ಟಿ.ಸಿ.) ಹಾಗೂ ಸಾಕಷ್ಟು ಖಾಸಗಿ ಬಸ್‌ ಸೇವೆ ಈ ತಾಣಕ್ಕೆ ಸಮೀಪದ ಹಲವಾರು ಪ್ರದೇಶದಿಂದ ಯಥೇಚ್ಛವಾಗಿ ಇವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬನ್ಸ್ತಾಲಿ ನೆವಾಯಿ ಸಮೀಪದ ರೈಲು ನಿಲ್ದಾಣ. ದೇಶದ ವಿವಿಧೇಡೆಯಿಂದ ಇಲ್ಲಿಗೆ ರೈಲು ಸಂಪರ್ಕ ಇದೆ. ಟೋಂಕ್‌ ಪಟ್ಟಣದಿಂದ 35 ಕಿ.ಮೀ. ದೂರದಲ್ಲಿ ಇದೆ. ಅಲ್ಲದೇ ಜಯಪುರ ರೈಲು ನಿಲ್ದಾಣದಿಂದಲೂ ಬರಬಹುದು. ಇಲ್ಲಿಂದ 100 ಕಿ.ಮಿ. ದೂರ ಆಗುತ್ತದೆ. ಜಯಪುರ ಹಾಗೂ ಬನ್ಸ್ತಾಲಿ ನೆವಾಯಿದಿಂದ ಟೋಂಕ್‌ಗೆ ಬಸ್‌ ಹಾಗೂ ಟ್ಯಾಕ್ಸಿ ಸೌಲಭ್ಯ ಉತ್ತಮವಾಗಿ ಸಿಗುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತಾಣಕ್ಕೆ ಅತಿ ಸಮೀಪದಲ್ಲಿ ಬರುವ ವಿಮಾನ ನಿಲ್ದಾಣವೆಂದರೆ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಟೋಂಕ್‌ ನಗರದಿಂದ 100 ಕಿ.ಮೀ. ದೂರದಲ್ಲಿದೆ. ದೇಶದ ಹಲವು ಕಡೆಗಳಿಂದ ಅಲ್ಲದೇ ವಿದೇಶದಿಂದಲೂ ಇಲ್ಲಿಗೆ ಸಾಕಷ್ಟು ವಿಮಾನಗಳು ಆಗಮಿಸುತ್ತವೆ. ಮಸ್ಕತ್‌, ಶಾರ್ಜಾ ಹಾಗೂ ದುಬೈನಿಂದ ನೇರ ವಿಮಾನ ಸಂಪರ್ಕ ಇದೆ. ಜಯಪುರದಿಂದ ಟೋಂಕ್‌ಗೆ ಬಸ್‌ ಹಾಗೂ ಟ್ಯಾಕ್ಸಿ ಸೌಲಭ್ಯ ಉತ್ತಮವಾಗಿ ಸಿಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 May,Sun
Return On
27 May,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Sun
Check Out
27 May,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Sun
Return On
27 May,Mon
 • Today
  Tonk
  35 OC
  95 OF
  UV Index: 9
  Haze
 • Tomorrow
  Tonk
  32 OC
  89 OF
  UV Index: 9
  Sunny
 • Day After
  Tonk
  31 OC
  88 OF
  UV Index: 9
  Partly cloudy