Search
 • Follow NativePlanet
Share

ಜೈಪುರ – ಪಿಂಕ್‌ ಮ್ಯಾಜೆಸ್ಟಿ

126

ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.ಈ ಪ್ರದೇಶವು ಹಿಂದೂ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆ. ಇದನ್ನು ಪೀಠಪಾದ ಅಥವಾ ಎಂಟು ಮಂಡಲದ ರೂಪದಲ್ಲಿ ನಿರ್ಮಿಸಲಾಗಿದೆ. ರಾಜ ಎರಡನೇ ಸವಾಯಿ ಜೈ ಸಿಂಗ್‌ಗೆ ಜ್ಯೋತಿಷ್ಯಶಾಸ್ತ್ರದ ಬಗ್ಗೆ ಉತ್ತಮ ತಿಳುವಳಿಕೆಯಿತ್ತು ಮತ್ತು ಈತ 9ನೇ ಸಂಖ್ಯೆ ಮತ್ತು ಅದರ ಗುಣಾಕಾರವನ್ನು ಹೆಚ್ಚು ಬಳಸಿದ್ದ. ಇದು ನಗರ ರಚನೆಯಲ್ಲೂ ಕಂಡುಬರುತ್ತದೆ. 9ನೇ ಸಂಖ್ಯೆಯು 9 ಗ್ರಹಗಳನ್ನು ಸೂಚಿಸುತ್ತದೆ.ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ, ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು.

ಹಬ್ಬಗಳು ಮತ್ತು ಮೇಳಗಳು

ಅರಮನೆಗಳು ಮತ್ತು ಕೋಟೆಗಳ ಹೊರತಾಗಿ ಜೈಪುರದಲ್ಲಿನ ಹಬ್ಬಗಳು ಮತ್ತು ಮೇಳಗಳೂ ತುಂಬಾ ಜನಪ್ರಿಯವಾಗಿದೆ. ಇಲ್ಲಿನ ಮೇಳಗಳಲ್ಲಿ ಒಂದೆಂದರೆ ಜೈಪುರ ವಿಂಟೇಜ್ ಕಾರ್ ರ್ಯಾಲಿ. ಇದನ್ನು ಜನವರಿಯಲ್ಲಿ ನಡೆಸಲಾಗುತ್ತದೆ. ಇತ್ತೀಚೆಗೆ ಈ ಮೇಳವು ತುಂಬಾ ಜನಪ್ರಿಯವಾಗುತ್ತಿದೆ. ಕಾರು ಪ್ರಿಯರು ಮರ್ಸಿಡಿಸ್‌, ಆಸ್ಟಿನ್‌ ಮತ್ತು ಫಿಯೆಟ್‌ನ ವಿವಿಧ ಮಾದರಿಯ ಕಾರುಗಳನ್ನು ನೋಡಬಹುದು. ಇಲ್ಲಿನ ಕೆಲವು ಕಾರುಗಳು 1900ರದ್ದಾಗಿರುವುದು ಗಮನಾರ್ಹ.ಇನ್ನೊಂದು ಜನಪ್ರಿಯ ಮೇಳವೆಂದರೆ ಆನೆ ಉತ್ಸವ. ಹೋಳಿ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ರಂಗುರಂಗಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆನೆಯ ವಿವಿಧ ಆಟಗಳನ್ನೂ ನೋಡಬಹುದು. ಇದರ ಜೊತೆಗೆ, ಗಂಗಾರ್ ಹಬ್ಬ ಕೂಡಾ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ. ಗನ್‌ ಎಂದರೆ ಶೀವ, ಗೌರ್ ಎಂದರೆ ಶಿವನ ಪತ್ನಿ ಪಾರ್ವತಿ. ಈ ಹಬ್ಬವು ಮದುವೆಯ ಬಂಧದ ಬಗ್ಗೆ. ಇನ್ನೂ ಕೆಲವು ಜನಪ್ರಿಯ ಹಬ್ಬಗಳು ಮತ್ತು ಮೇಳಗಳೆಂದರೆ ಭಂಗಾಂಗ ಮೇಳ, ತೀಜ್‌, ಹೋಳಿ ಮತ್ತು ಚಕ್ಸು ಮೇಳ. ಅವಕಾಶಗಳುಸಾಹಸೀ ಪ್ರವೃತ್ತಿಯವರು ಒಂಟೆ ಸವಾರಿ, ಬಿಸಿ ಗಾಳಿ ಬಲೂನಿಂಗ್‌, ಪ್ಯಾರಾಗ್ಲೈಡಿಂಗ್‌ ಮತ್ತು ರಾಕ್‌ ಕ್ಲೈಂಬಿಂಗ್‌ನ್ನು ಮಾಡಬಹುದು. ಕರೌಲಿ ಮತ್ತು ರಣಥಂಬೋರ್ ನ್ಯಾಷನಲ್‌ ಪಾರ್ಕ್‌ಗೆ ಉತ್ಸಾಹಿಗಳು ಪ್ರವಾಸ ಕೈಗೊಳ್ಳಬಹುದು.ಪ್ರವಾಸಿಗರು ಜೈಪುರದಲ್ಲಿ ಶಾಪಿಂಗ್‌ ಮಾಡುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಆಭರಣಗಳು, ಕಾರ್ಪೆಟ್‌ಗಳು, ಮಡಿಕೆಗಳು ಮತ್ತು ಹರಳುಗಳ ಮಾರುಕಟ್ಟೆ ಹೆಚ್ಚು ಪ್ರಚಲಿತವಾಗಿದೆ. ಪ್ರವಾಸಿಗರು ಕರಕುಶಲ ಸಾಮಗ್ರಿಗಳನ್ನು, ಕಲಾಕೃತಿಗಳನ್ನು, ಅಪ್ಯಾರೆಲ್‌ಗಳನ್ನು ಮತ್ತು ಬ್ರಾಂಡೆಡ್‌ ಬಟ್ಟೆಗಳನ್ನು ಎಮ್‌ಐ ರಸ್ತೆಯಲ್ಲಿ ಖರೀದಿಸಬಹುದು. ಜೈಪುರದ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಸಂದಭದಲ್ಲಿ ಬಾರ್ಗೇನ್‌ ಮಾಡುವುದು ಅತ್ಯಗತ್ಯ.

ಆಹಾರಗಳು

ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ರುಚಿರುಚಿಯಾದ, ಬಾಯಲ್ಲಿ ನೀರೂರಿಸುವ ತಿಂಡಿಗಳಿಗೆ ಈ ನಗರ ಜನಪ್ರಿಯವಾಗಿದೆ. ದಾಲ್‌ ಬಾತಿ-ಕೂರ್ಮಾ, ಪ್ಯಾಜ್‌ ಕಿ ಕಚೋರಿ, ಕಬಾಬ್‌, ಮುರ್ಗ್‌ ಕೋ ಖಾತೋ ಮತ್ತು ಅಚಾರಿ ಮುರ್ಗ್‌ ಮುಂತಾದವುಗಳು ಇಲ್ಲಿನ ಕೆಲವು ಪ್ರಸಿದ್ಧ ತಿನಿಸುಗಳು. ನೆಹ್ರು ಬಜಾರ್ ಮತ್ತು ಜೋಹಾರಿ ಬಜಾರಿನಲ್ಲಿ ಆಹಾರ ಪ್ರಿಯರು ಈ ತಿನಿಸಉಗಳನ್ನು ಸವಿಯಬಹುದು. ಇಲ್ಲಿನ ರಸ್ತೆಗಳು, ರಸ್ತೆಬದಿಯ ಆಹಾರಕ್ಕೆ ಹೆಚ್ಚು ಜನಪ್ರಿಯವಾಗಿದೆ. ಘೇವಾರ್, ಮಿಶ್ರಿ ಮಾವಾ ಮತ್ತು ಮವಾ ಕಚೋರಿಯಂತ ಸ್ಥಳೀಯ ಸಿಹಿ ತಿನಿಸುಗಳೂ ಕೂಡಾ ಭಾರತದಲ್ಲೇ ಪ್ರಸಿದ್ಧವಾದದ್ದು.

ಜೈಪುರಕ್ಕೆ ಹೋಗುವುದು

ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಭಾರತದ ಬಹುತೇಕ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿ ಸಂಗಾನೇರ್ ವಿಮಾನ ನಿಲ್ದಾಣವಿದೆ. ಇದನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಈ ವಿಮಾನ ನಿಲ್ದಾಣವು ಮುಂಬೈ, ಚಂಡೀಗಢ, ದೆಹಲಿ ಮತ್ತು ಹೈದರಾಬಾದ್‌ಗೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಹೊಂದಿದೆ. ಜೈಪುರ ರೈಲ್ವೇ ನಿಲ್ದಾಣವು ಭಾರತದ ಬಹುತೇಕ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಿಗೆ ಪ್ರವಾಸಿಗರು ರಾಜಸ್ಥಾನ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ನಿಂದ ಬಸ್‌ಗಳನ್ನು ಪಡೆಯಬಹುದು. ನವದೆಹಲಿಯಿಂದ ನೇರವಾಗಿ ಜೈಪುರಕ್ಕೆ ಆರ್‌ಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ. ನಗರದಲ್ಲಿ ಪ್ರವಾಸಿಗರು ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್‌ ಲಿಮಿಟೆಡ್‌ನ ಸಾರಿಗೆ ಬಸ್‌ಗಳನ್ನು ಪ್ರಯಾಣಕ್ಕೆ ಅವಲಂಬಿಸಬಹುದು.

ವರ್ಷಂಪ್ರತಿ ಈ ಪ್ರದೇಶವು ಅತಿ ಉಷ್ಣ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ಎಷ್ಟು ಉಷ್ಣತೆಯಿರುತ್ತದೆಯೋ ಅಷ್ಟೇ ತಂಪು ವಾತಾವರಣ ಚಳಿಗಾಲದಲ್ಲಿರುತ್ತದೆ. ಪ್ರವಾಸಿಗರು ಬೇಸಿಗೆಕಾಲದಲ್ಲಿ ಜೈಪುರಕ್ಕೆ ಭೇಟಿ ನೀಡುವುದಾದರೆ ಬಟ್ಟೆಗಳು, ಟೊಪ್ಪಿಗಳು ಮತ್ತು ಸನ್‌ಸ್ಕ್ರೀನ್‌ಗಳನ್ನು ತರಬೇಕಾಗಿರುವುದು ಅಗತ್ಯ. ಮಾರ್ಚ್‌ ನಿಂದ ಅಕ್ಟೋಬರಿನ ಅವಧಿಯು ಪಿಂಕ್‌ ಸಿಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ.

ಜೈಪುರ ಪ್ರಸಿದ್ಧವಾಗಿದೆ

ಜೈಪುರ ಹವಾಮಾನ

ಉತ್ತಮ ಸಮಯ ಜೈಪುರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜೈಪುರ

 • ರಸ್ತೆಯ ಮೂಲಕ
  ಜೈಪುರದ ಪಿಂಕ್‌ ಸಿಟಿಯು ದೇಶದ ಬಹುತೇಕ ಎಲ್ಲಾ ನಗರಗಳಿಂದಲೂ ಬಸ್‌ಗಳ ಮೂಲಕ ಸಂಪರ್ಕವನ್ನು ಹೊಂದಿದೆ. ನೇರ ಬಸ್‌ ಸೇವೆಗಳು ನವದೆಹಲಿ ಮತ್ತು ಆಗ್ರಾದಿಂದ ಲಭ್ಯವಿದೆ. ದೆಹಲಿ ಮತ್ತು ಆಗ್ರಾದ ಜೊತೆಗೆ ಗೋಲ್ಡನ್ ಟ್ರಾವೆಲ್‌ ಸರ್ಕ್ಯೂಟ್‌ ಅಡಿಯಲ್ಲಿ ಜೈಪುರಕ್ಕೂ ಸಂಪರ್ಕ ಕಲ್ಪಿಸಲಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜೈಪುರ ರೈಲ್ವೆ ವಿಮಾನ ನಿಲ್ದಾಣವು ರಾಜಸ್ಥಾನದ ಪ್ರಮುಖ ರೈಲ್ವೆ ನಿಲ್ದಾಣ. ಭಾರತದ ಪ್ರಮುಖ ನಗರಗಳಿಂದ ಇಲ್ಲಿಗೆ ನಿರಂತರ ರೈಲುಗಳ ಸಂಪರ್ಕವಿದೆ. ಸಾಮಾನ್ಯ ರೈಲುಗಳ ಹೊರತಾಗಿ ಪ್ರವಾಸಿಗರು ದೆಹಲಿಯಿಂದ ವಿಶೇಷವಾದ ಪ್ಯಾಲೇಸ್‌ ಆನ್ ವೀಲ್ಸ್‌ ಎಂಬ ರೈಲಿನ ಮೂಲಕವೂ ಪ್ರಯಾಣಿಸಬಹುದು. ಇದೊಂದು ಲಕ್ಷುರಿ ರೈಲಾಗಿದ್ದು ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಾದ ಜೈಪುರ, ಅಲ್ವಾರ್ ಮತ್ತು ಉದಯಪುರಕ್ಕೆ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಂಗಾನೇರ್ ವಿಮಾನ ನಿಲ್ದಾಣವು ಜೈಪುರದಿಮದ ಸುಮಾರು 11 ಕಿ.ಮೀ ದೂರದಲ್ಲಿದೆ. ಇದು ಜೈಪುರಕ್ಕೆ ಸಮೀಪದ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಔರಂಗಾಬಾದ್‌, ಉದಯಪುರ ಮತ್ತು ಜೋಧಪುರದಿಂದ ವಿಮಾನಗಳನ್ನು ಹೊಂದಿದೆ. ಪ್ರವಾಸಿಗರು ನಗರಕ್ಕೆ ಬರಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
06 Feb,Mon
Return On
07 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Feb,Mon
Check Out
07 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Feb,Mon
Return On
07 Feb,Tue