ಅಜ್ಮೇರ್ - ಇತಿಹಾಸದ ಒಂದು ಅದ್ಭುತ ತುಣುಕು

ಅಜ್ಮೇರ್, ರಾಜಸ್ಥಾನ ರಾಜ್ಯದ ಒಂದು ಜಿಲ್ಲೆಯಾಗಿದ್ದು, ರಾಜ್ಯದ ಐದನೇ ದೊಡ್ಡ ನಗರವಾಗಿದೆ ಮತ್ತು ರಾಜಧಾನಿ ಜೈಪುರದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ. ಇದನ್ನು ಹಿಂದೆ ಅಜ್ಮೇರೆ ಅಥವಾ ಅಜಯ್ಮೇರು ಎಂದು ಕರೆಯಲಾಗುತ್ತಿತ್ತು. ನಗರವು ಅರಾವಳಿ ಪರ್ವತಗಳಿಂದ ಸುತ್ತುವರಿದಿದೆ. ದೇಶದ ಅತಿ ಹಳೆಯ ಕೋಟೆಯಾದ ತಾರಾಗಢ ಕೋಟೆಯು, ಅಜ್ಮೇರದ ಆಕರ್ಷಕ ತಾಣವಾಗಿದೆ.

ಏಳನೇ ಶತಮಾನದಲ್ಲಿ ಅಜಯರಾಜ್ ಸಿಂಗ್ ಚೌಹಾಣ್ರಿಂದ ಈ ನಗರವು ಸ್ಥಾಪನೆಯಾಗಲ್ಪಟ್ಟಿದೆ. ಹಲವು ದಶಕಗಳ ಕಾಲ ಚೌಹಾಣ್ರಿಂದ ಆಳಲ್ಪಟ್ಟಿತು. ಅಲ್ಲದೇ ಪ್ರಥ್ವಿರಾಜ್ ಚೌಹಾಣ್ ತುಂಬಾ ಜನಪ್ರಿಯ ಆಡಳಿತಗಾರರಾಗಿದ್ದರು.

ಇತಿಹಾಸದಲ್ಲಿ ಅಜ್ಮೇರ್

1193 ರಲ್ಲಿ ಮಹಮ್ಮದ್ ಘಜನಿಯಿಂದ ವಶಪಡಿಸಿಕೊಳ್ಳಲ್ಪಟ್ಟಿತ್ತು. ಆದಾಗ್ಯೂ, ಚೌಹಾಣ್ರು ಹೆಚ್ಚಿನ ಕಪ್ಪ ಕಾಣಿಕೆ ಕೊಡುವ ಮೂಲಕ ತಮ್ಮ ಅಧಿಪತ್ಯವನ್ನು ಉಳಿಸಿಕೊಂಡರು. ಅಜ್ಮೇರವನ್ನು ನಂತರದಲ್ಲಿ ಮೆವಾರರರಿಂದ ೧೩೬೫ರಲ್ಲಿ ಮತ್ತು ಮಾರ್ವಾರರಿಂದ ೧೫೩೨ರಲ್ಲಿ ವಶಪಡಿಸಿಕೊಳ್ಳಲ್ಪಟ್ಟಿತು. 1553ರಲ್ಲಿ ಹಿಂದೂ ಆಡಳಿತಗಾರ ಹೇಮಚಂದ್ರ ವಿಕ್ರಮಾದಿತ್ಯ , ಹೇಮು ಎಂದೇ ಜನಪ್ರಿಯನಾಗಿದ್ದ ರಾಜ ಅಜ್ಮೇರವನ್ನು ವಶಪಡಿಸಿಕೊಂಡ. 1556 ರಲ್ಲಿ ನಡೆದ ಎರಡನೇ ಪಾಣಿಪತ್ ಕದನದಲ್ಲಿ ಈತ ಕೊಲ್ಲಲ್ಪಟ್ಟ. 1559 ರಲ್ಲಿ ಅಜ್ಮೇರವು ಮೊಘಲ್ ದೊರೆಗಳ ಆಡಳಿತಕ್ಕೆ ಒಳಪಟ್ಟಿತು ಮತ್ತು ನಂತರದಲ್ಲಿ 18ನೇ ಶತಮಾನದಲ್ಲಿ ಮರಾಠರ ಆಡಳಿತಕ್ಕೆ ಒಳಪಟ್ಟಿತು. 1818 ರಲ್ಲಿ ಇಂಗ್ಲಿಷರು ಅಜ್ಮೇರವನ್ನು 50,000ಕ್ಕೆ ಕೊಡುವಂತೆ ಮರಾಠರನ್ನು ಕೇಳಿದರು. 1950 ರಲ್ಲಿ ಅಜ್ಮೇರ ರಾಜ್ಯವನ್ನಾಗಿ ಮಾಡಲಾಯಿತು, ಮತ್ತು ನಂತರ 1956, ನವೆಂಬರ್ ಒಂದರಿಂದ ರಾಜಸ್ತಾನ ರಾಜ್ಯಕ್ಕೆ ಸೇರಿತು.

ರಾಜಧಾನಿ ಜೈಪುರದಿಂದ ಅಜ್ಮೇರವು 135 ಕಿ.ಮೀ ದೂರದಲ್ಲಿದೆ. ಅಜ್ಮೇರ ನಗರದ ಪ್ರಮುಖ ಆಕರ್ಷಣೀಯ ಸ್ಥಳವೆಂದರೆ ತಾರಾಗಠ ಕೋಟೆ.

ಭವ್ಯವಾದ ತಾಣಗಳ ಚಿತ್ತಾರ

ದರ್ಗಾ ಷರೀಫ್ರಿಂದ ಈ ತಾಣವು ಪ್ರಸಿದ್ಧವಾಗಿದ್ದು, ಇದು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಸಮಾಧಿ ಸ್ಥಳವಾಗಿದೆ. ದರ್ಗಾ ಷರೀಫ್, ತಾರಾಗಢ ಕೋಟೆಯ ಬುಡದಲ್ಲಿದ್ದು, ಎಲ್ಲಾ ಧರ್ಮದವರೂ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ನಗರದ ಉತ್ತರದಲ್ಲಿ ಸುಂದರವಾದ ಕೆರೆಯಿದ್ದು, ಆನಾ ಸಾಗರ ಕೆರೆ ಎಂದು ಇದನ್ನು ಕರೆಯಲಾಗುತ್ತದೆ. ಪೆವಿಲಿಯನ್ಗಳನ್ನು ಅಥವಾ ಬರ್ದಾರಿಯನ್ನು ರಾಜ ಶಾಹ್ಜಹಾನ್ ನಿರ್ಮಿಸಿದ್ದಾನೆ. ಇದು ಕೆರೆಯನ್ನು ಇನ್ನೂ ಸುಂದರವಾಗಿಸುತ್ತದೆ. ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಆನಾ ಸಾಗರವು ಅತ್ಯುತ್ತಮವಾದ ಪಿಕ್ನಿಕ್ ಸ್ಥಳ. ಅಜ್ಮೇರಕ್ಕೆ ಭೇಟಿ ನೀಡಿದ್ದಾಗ ಅಕ್ಬರನ ಮನೆಯಾಗಿದ್ದಿದ್ದು ಈಗ ಅಜ್ಮೇರ್ ಮ್ಯೂಸಿಯಂ ಆಗಿದೆ. ಸದ್ಯ ಇಲ್ಲಿ ೬ ಹಾಗೂ ೭ನೇ ಶತಮಾನದ ಪ್ರಮುಖ ಹಿಂದೂ ಮೂರ್ತಿಗಳಿಗೆ ತಾಣವಾಗಿದೆ. ಮುಘಲ್ ಮತ್ತು ರಜಪೂತರ ಕಾಲದ ಹಲವು ಮೂರ್ತಿಗಳನ್ನು ಇಲ್ಲಿ ಪ್ರವಾಸಿಗರಿಗೆಂದು ಪ್ರದರ್ಶನಕ್ಕೆ ಇಡಲಾಗಿದೆ.

ಅಧಾಯಿ ದಿನ್ ಕಾ ಝೋಪ್ರಾವು ಮಸೀದಿಯಾಗಿದ್ದು, ಎರಡೂವರೆ ದಿನದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ದಿ ನಾಸಿಯಾನ್ (ಕೆಂಪು) ದೇವಸ್ಥಾನ, ನಿಂಬಾರ್ಕ್ ಪೀಠ ಮತ್ತು ನರೇಲಿ ಜೈನ್ ದೇವಸ್ಥಾನವು ಅಜ್ಮೇರಿನಲ್ಲಿನ ಪ್ರಮುಖ ಆಕರ್ಷಕ ಸ್ಥಳವಾಗಿದೆ. ಮೇಯೋ ಕಾಲೇಜು, ರಜಪೂತರ ಕಾಲದಲ್ಲಿ ಸ್ಥಾಪಿತವಾಗಿದ್ದು, ಈಗ ಇದು ದೇಶದಲ್ಲೇ ಅತ್ಯುತ್ತಮ ಶಾಲೆಯಾಗಿದೆ.

ಅಜ್ಮೇರವು ಪುಷ್ಕರ್ದಂಥ ಪವಿತ್ರ ನಗರಕ್ಕೆ ಹೆಬ್ಬಾಗಿಲಾಗಿದೆ.. ಪುಷ್ಕರ್ ನಗರದಿಂದ ಅಜ್ಮೇರವು ಕೇವಲ 11 ಕಿ.ಮೀ ದೂರದಲ್ಲಿದೆ. ಪುಷ್ಕರ್ ಕೆರೆ ಮತ್ತು ಬ್ರಹ್ಮ ದೇವಸ್ಥಾನಕ್ಕೆ ಪುಷ್ಕರ್ ನಗರವು ಪ್ರಮುಖವಾಗಿದೆ ಮತ್ತು ಅಪಾರ ಪ್ರಮಾಣದ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವಾಗಿದೆ.

ಅಜ್ಮೇರಕ್ಕೆ ತಲುಪುವುದು

ಅಜ್ಮೇರಕ್ಕೆ ರೈಲು, ರಸ್ತೆ ಮತ್ತು ವಿಮಾನದಿಂದ ಸುಲಭವಾಗಿ ತಲುಪಬಹುದು.ಸಂಗಾನೇರ್ ವಿಮಾನ ನಿಲ್ದಾಣವು ಜೈಪುರಲ್ಲಿದ್ದು, ಇದು ಅಜ್ಮೇರಕ್ಕೆ ಸಮೀಪದಲ್ಲಿದೆ. ಅಜ್ಮೇರ್ ರೈಲ್ವೇ ನಿಲ್ದಾಣವು ಸಮೀಪದ ರೈಲ್ವೆ ನಿಲ್ದಾಣವಾಗಿದ್ದು ಭಾರತದ ಎಲ್ಲಾ ಪ್ರಮುಖ ನಿಲ್ದಾಣಗಳಿಂದಲೂ ಕೂಡಾ ರೈಲು ಸಂಪರ್ಕವನ್ನು ಹೊಂದಿದೆ. ರಸ್ತೆಗಳ ಮೂಲ ಭಾರತದ ಇತರ ಬಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ಅಜ್ಮೇರಕ್ಕೆ ಪ್ರಯಾಣಿಸಲು ಚಳಿಗಾಲವು ಉತ್ತಮ ಕಾಲವಾಗಿದ್ದು, ಇಡೀ ವರ್ಷದಲ್ಲಿ ಉತ್ತಮ ತಂಪಾದ ವಾತಾವರಣ ಇದೇ ಆಗಿದೆ.

Please Wait while comments are loading...