Search
 • Follow NativePlanet
Share
ಮುಖಪುಟ » ಸ್ಥಳಗಳು» ರಣಕ್‍ಪುರ್

ರಣಕ್‍ಪುರ್- ಒಂದು ತೀರ್ಥ ಕ್ಷೇತ್ರ

20

ರಣಕ್‍ಪುರ್ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್‍ಪುರ್ ಮತ್ತು ಜೋಧ್‍ಪುರ್ ಹಾದಿಯ ಮಧ್ಯೆ ನೆಲೆಗೊಂಡಿದೆ. ಈ ಗ್ರಾಮವು ತನ್ನಲ್ಲಿರುವ 15ನೆಯ ಶತಮಾನದ ಜೈನ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಈ ದೇವಾಲಯವು ಧಾರ್ಮಿಕತೆಯ ದೃಷ್ಟಿಯಿಂದ ಜೈನರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ.ಈ ದೇವಾಲಯದ ಭವ್ಯತೆಯು ಇಲ್ಲಿನ ಮನಮೋಹಕ ಕಂಬಗಳಲ್ಲಿ ಅಡಗಿದೆ. ಈ ದೇವಾಲಯದ ಸೌಂದರ್ಯವು ಮರುಭೂಮಿಯ ಹಿನ್ನಲೆಯಲ್ಲಿ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ರಣಕ್‍ಪುರದಲ್ಲಿ ಹಾಗು ಸುತ್ತ- ಮುತ್ತ ಏನೇನಿದೆ.

ಸೂರ್ಯದೇವನಿಗಾಗಿ ನಿರ್ಮಿಸಲಾದ ಸೂರ್ಯನಾರಾಯಣ ದೇವಾಲಯವು ರಣಕ್‍ಪುರ್‌ನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ತುಸು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯದ ಬಹುಭುಜಾಕೃತಿಯ ಗೋಡೆಗಳಲ್ಲಿ ದೇವಾನು ದೇವತೆಗಳ, ಕುದುರೆಗಳ ಮತ್ತು ಸೈನಿಕರನ್ನು ಒಳಗೊಂಡಿರುವ ಕೆತ್ತನೆಗಳು, ಸ್ಥಳೀಯ ಕಲಾವಿದರ ಕಲೆಯನ್ನು ಬಣ್ಣಿಸುತ್ತದೆ. ರಣಕ್‍ಪುರ್‌ಗೆ ಬರುವ ಪ್ರವಾಸಿಗರು ಇಲ್ಲಿನ ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾದ ಸದ್ರಿಗೆ ಸಹ ಬೇಟಿಕೊಡುತ್ತಿರುತ್ತಾರೆ.

ಈಶ್ವರನಿಗಾಗಿ ನಿರ್ಮಿಸಲಾಗಿರುವ ಮುಚ್ಛಲ್ ಮಹಾವೀರ ದೇವಾಲಯ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಇದು ಕುಂಭಾಲ್‍ಘರ್ ವನ್ಯಧಾಮದಿಂದ 5 ಕಿ.ಮೀ ದೂರದಲ್ಲಿರುವ ಘಣೇರಾವ್ ಬಳಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಪ್ರಮುಖ ಅಂಶವೆಂದರೆ ಇಲ್ಲಿನ ಶಿವನ ಮೂರ್ತಿಗೆ ಮೀಸೆ ಇರುವಂತೆ ಕೆತ್ತಲಾಗಿದೆ. ಈ ಪ್ರಾಂತ್ಯದಲ್ಲಿರುವ ಕಂಡುಬರುವ 11 ಜೈನ ದೇವಾಲಯಗಳ ಜೊತೆಗೆ ಮುಚ್ಛಲ್ ಮಹಾವೀರ್ ದೇವಾಲಯ ಮತ್ತು ಗಜಾನಂದ್ ದೇವಾಲಯಗಳು ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿವೆ.

ರಣಕ್‍ಪುರದಿಂದ 6 ಕಿ.ಮೀ ದೂರದಲ್ಲಿರುವ ನರ್ಲೈ ಗ್ರಾಮವು ತನ್ನಲ್ಲಿರುವ ಹಿಂದೂ ಮತ್ತು ಜೈನ ಮಂದಿರಗಳಿಗಾಗಿ, ಇಡೀ ಪ್ರಾಂತ್ಯದಲ್ಲಿಯೆ ಖ್ಯಾತಿ ಪಡೆದಿದೆ. ಈ ದೇವಾಲಯಗಳ ವಾಸ್ತುಶಿಲ್ಪ ಮತ್ತು ಮಂದಿರದ ಒಳಗಡೆ ಕಾಣಸಿಗುವ ಚಿತ್ರಕಲೆಗಳು ನಿಜಕ್ಕೂ ಅಭಿನಂದನೆಗೆ ಅರ್ಹವಾಗಿವೆ. ಈ ಐತಿಹಾಸಿಕ ತಾಣದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಕುಂಬಲ್‍ಘರ್. ಈ ಸ್ಥಳವು ಇಲ್ಲಿನ ಎತ್ತರವಾದ ಮತ್ತು ಅಗಲವಾದ ಗೋಡೆಗಳಿಂದ ಕೂಡಿರುವ ಮೇವಾಡದ ಕೋಟೆಯಿಂದಾಗಿ ಗಮನಸೆಳೆಯುತ್ತದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿ ನೆಲೆಸಿರುವ ಈ ಸ್ಥಳವು ಮಂತ್ರ ಮುಗ್ಧಗೊಳಿಸುವಂತಹ ಅರಾವಳಿ ಪರ್ವತ ಶ್ರೇಣಿಗಳನ್ನು ಮತ್ತು ಥಾರ್ ಮರುಭೂಮಿಯ ಅತ್ಯಾಕರ್ಷಕವಾದ ಮರಳು ದಿಬ್ಬಗಳ ನೋಟವನ್ನು ಒದಗಿಸುತ್ತದೆ. ಪ್ರಸ್ತುತ ಈ ಕೋಟೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು, ಸಾಮಾನ್ಯ ಜನರ ಸಂದರ್ಶನಕ್ಕಾಗಿ ತೆರೆಯಲಾಗಿದೆ.

ರಣಕ್‍ಪುರಕ್ಕೆ ತಲುಪುವುದು ಹೇಗೆ

ಉದಯ್‍ಪುರದ ಮಹಾರಾಣ ಪ್ರತಾಪ್ ವಿಮಾನ ನಿಲ್ದಾಣವು ರಣಕ್‍ಪುರಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಣಕ್‍ಪುರಕ್ಕೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ ಉದಯ್‍ಪುರದ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ವಿಮಾನಗಳು ದೊರೆಯುತ್ತವೆ. ರಣಕ್‍ಪುರಕ್ಕೆ ಸಮೀಪದ ರೈಲು ನಿಲ್ದಾಣವು ಫಾಲ್ನದಲ್ಲಿದ್ದು, ಅದು ಇಲ್ಲಿಂದ 35 ಕಿ.ಮೀ ದೂರದಲ್ಲಿದೆ. ಕ್ಯಾಬ್‍ಗಳು ಮತ್ತು ಟ್ಯಾಕ್ಸಿಗಳ ಮುಖಾಂತರ ನೀವು ಸುಲಭವಾಗಿ ರಣಕ್‍ಪುರವನ್ನು ತಲುಪಬಹುದು. ಅಲ್ಲದೆ ಹತ್ತಿರದ ನಗರಗಳಿಂದ ರಣಕ್‍ಪುರಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಹ ಸಂಚರಿಸುತ್ತಿರುತ್ತವೆ. ಅವುಗಳ ಮೂಲಕ ಈ ಊರನ್ನು ತಲುಪಬಹುದು.

ಹವಾಗುಣ

ರಣಕ್‍ಪುರಕ್ಕೆ ಹೋಗಲು ಬಯಸುವವರಿಗೆ ಚಳಿಗಾಲವು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಆಗ ಇಲ್ಲಿನ ಹವಾಗುಣವು ಅತ್ಯಂತ ಹಿತವಾಗಿದ್ದು, ಇಲ್ಲಿ ಸುತ್ತಾಡಲು ಅನುಕೂಲಕರವಾಗಿರುತ್ತದೆ. ಈ ಪ್ರಾಂತ್ಯವು ಮಳೆಗಾಲದಲ್ಲಿ ಬೀಳುವ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ಬಿಸಿಲು ಮತ್ತು ಒಣ ಹವೆಯಿಂದ ವಿಶ್ರಾಂತಿಯನ್ನು ಪಡೆಯುತ್ತದೆ. ಆದರೂ ಕೂಡ ಇಲ್ಲಿ ಬೀಳುವ ಮಳೆಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಅಲ್ಲದೆ ಈ ಸಮಯದಲ್ಲಿ ಇಲ್ಲಿನ ರಾತ್ರಿಯ ಉಷ್ಣಾಂಶವು ಕುಸಿಯುತ್ತಿರುತ್ತದೆ.

ರಣಕ್‍ಪುರ್ ಪ್ರಸಿದ್ಧವಾಗಿದೆ

ರಣಕ್‍ಪುರ್ ಹವಾಮಾನ

ಉತ್ತಮ ಸಮಯ ರಣಕ್‍ಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರಣಕ್‍ಪುರ್

 • ರಸ್ತೆಯ ಮೂಲಕ
  ಉದಯ್‍ಪುರ್,ಜೈಪುರ್ ಮತ್ತು ಜೋಧ್‍ಪುರ್‌ಗಳಂತಹ ಹತ್ತಿರದ ನಗರಗಳಿಂದ ರಣಕ್‍ಪುರಕ್ಕೆ ಬಸ್ಸುಗಳ ಸೌಕರ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಫಾಲ್ನ ರೈಲು ನಿಲ್ದಾಣವು ರಣಕ್‍ಪುರಕ್ಕೆ ಸಮೀಪದ ರೈಲು ನಿಲ್ದಾಣವಾಗಿದ್ದು, ಇದು ಇಲ್ಲಿಂದ 35 ಕಿ.ಮೀ ದೂರದಲ್ಲಿದೆ. ಫಾಲ್ನ ರೈಲು ನಿಲ್ದಾಣವು ನವದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಮತ್ತು ಬಸ್ಸುಗಳ ಮೂಲಕ ರಣಕ್‍ಪುರಕ್ಕೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಉದಯ್‍ಪುರದ ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣ ಅಥವಾ ಡಬೊಕ್ ವಿಮಾನ ನಿಲ್ದಾಣವು 96 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ವಿಮಾನ ಯಾನದ ಸಂಪರ್ಕವನ್ನು ಹೊಂದಿದೆ. ವಿದೇಶಿ ಪ್ರವಾಸಿಗರು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉದಯ್‍ಪುರವನ್ನು ಸಂಪರ್ಕಿಸುವ ವಿಮಾನಗಳ ಮೂಲಕ ರಣಕ್‍ಪುರವನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Jan,Sat
Return On
30 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Jan,Sat
Check Out
30 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Jan,Sat
Return On
30 Jan,Sun