Search
  • Follow NativePlanet
Share
ಮುಖಪುಟ » ಸ್ಥಳಗಳು» ಸವಾಯಿ ಮಾಧೋಪುರ್

ಸವಾಯಿ ಮಾಧೊಪುರ್ – ಸರ್ವವು ಸುಂದರಮಯ

19

ಸವಾಯಿ ಮಾಧೊಪುರ್ ರಾಜಸ್ಥಾನದ ಜೈಪುರದಿಂದ 180 ಕಿ.ಮೀ ಗಳಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣವು ಚಂಬಲ್ ನದಿಯ ದಂಡೆಯ ಮೇಲೆ ನೆಲೆಸಿದೆ. ಈ ಪಟ್ಟಣಕ್ಕೆ 18ನೇ ಶತಮಾನದಲ್ಲಿ ಜೈಪುರ್ ಪ್ರಾಂತ್ಯವನ್ನು ಆಳಿದ ಸವಾಯಿ ಮಾಧೊಸಿಂಗ್ ರವರ ಹೆಸರನ್ನು ಇಡಲಾಗಿದೆ.

ಇತಿಹಾಸದಲ್ಲಿ ಸವಾಯಿ ಮಾಧೊಪುರ್

ಈ ನಗರವು ಹಲವಾರು ರಾಜರ ಮತ್ತು ಸಾಮ್ರಾಜ್ಯಗಳ ಬೆಳವಣಿಗೆ ಹಾಗು ಅವನತಿಗಳಿಗೆ ಸಾಕ್ಷಿಯಾಗಿದೆ. ಈ ನಗರವು ಮೂಲತಃ ಚೌಹನ್ ಸಾಮ್ರಾಜ್ಯದ ರಜಪೂತ್ ರಾಜ ಹಮ್ಮೀರ್ ದೇವನ ವಶದಲ್ಲಿತ್ತು. ನಂತರ ಈ ನಗರವನ್ನು ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯವು ಆಕ್ರಮಿಸಿ, ಇಲ್ಲಿನ ಮೂಲ ಸೌಕರ್ಯಗಳನ್ನು ನಾಶಗೊಳಿಸಿತು. ಪ್ರಸ್ತುತ ಸವಾಯಿ ಮಾಧೊಪುರ್ ನಗರವು ತನ್ನಲ್ಲಿರುವ ಐತಿಹಾಸಿಕ ಮತ್ತು ಸ್ವಾಭಾವಿಕವಾದ ತಾಣಗಳಿಗಾಗಿ ಖ್ಯಾತಿಪಡೆದಿದೆ. ಅವುಗಳಲ್ಲಿ ಮುಖ್ಯವಾದವು ರಣಥಾಂಬೋರ್ ರಾಷ್ಟ್ರೀಯ ಉದ್ಯಾನವನ ಮತ್ತು ರಣಥಾಂಬೋರ್ ಕೋಟೆ. ಈ ಕೋಟೆ ನಗರದ ಕೇಂದ್ರ ಭಾಗದಿಂದ 11 ಕಿ,ಮೀ ದೂರದಲ್ಲಿದೆ.

ಸವಾಯಿ ಮಾಧೊಪುರದ ಆಕರ್ಷಣೆಗಳು

ಈ ನಗರವು ಹಲವಾರು ಐತಿಹಾಸಿಕ, ಪ್ರಾಚ್ಯ ಮತ್ತು ಧಾರ್ಮಿಕ ಮಹತ್ವಗಳ ಸಲುವಾಗಿ ಪ್ರಸಿದ್ಧವಾಗಿರುವ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಇದರೊಂದಿಗೆ ರಣಥಂಬೊರ್ ರಾಷ್ಟ್ರೀಯ ಉದ್ಯಾನವನ, ಸವಾಯಿ ಮಾನ್ ಸಿಂಗ್ ವನ್ಯಜೀವಿಧಾಮ ಮತ್ತು ರಾಮೇಶ್ವರಮ್ ಘಾಟ್ ಗಳಂತಹ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ. ರಣಥಂಬೊರ್ ಕೋಟೆ, ಹಂದರ್ ಕೋಟೆ ಮತ್ತು ಸಮೆಟೊನ್ ಕಿ ಹವೇಲಿಗಳು ಈ ನಗರದ ಸುತ್ತ ಇರುವ ಪ್ರಮುಖ ಐತಿಹಾಸಿಕ ತಾಣಗಳಾಗಿವೆ. ಸವಾಯಿ ಮಾಧೊಪುರ್ ಧಾರ್ಮಿಕ ಮಹತ್ವವನ್ನು ಹೊಂದಿರುವ ದೇವಾಲಯಗಳನ್ನು ಮತ್ತು ಪವಿತ್ರ ಸ್ಥಳಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅಮರೇಶ್ವರ್ ಮಹಾದೇವ್ ದೇವಾಲಯಗಳು, ಚಮತ್ಕಾರ್ ಜೀ ಜೈನ್ ದೇವಾಲಯ, ಕೈಲಾ ದೇವಿ ದೇವಾಲಯ, ಚೌತ ಮಠ ದೇವಾಲಯ ಮತ್ತು ಪ್ರಸಿದ್ಧವಾದ ಶ್ರೀ ಮಹಾವೀರಜೀ ದೇವಾಲಯಗಳು ಅತ್ಯಂತ ಪ್ರಮುಖ ದೇವಾಲಯಗಳಾಗಿವೆ. ಈ ಆಕರ್ಷಣೆಗಳು ಪ್ರವಾಸಿಗರಿಗೆ ರಾಜಸ್ಥಾನದ ಸಮೃದ್ಧ ಸಂಸ್ಕೃತಿ ಹಾಗು ಭಾರತದ ಗತ ಇತಿಹಾಸದ ಪರಿಚಯವನ್ನು ಒದಗಿಸುತ್ತವೆ. ಸವಾಯಿ ಮಾಧೊಪುರ್ ದೌಸ, ಟೊಂಕ್, ಬುಂಡಿ ಮತ್ತು ಕರೌಲಿಗಳಂತಹ ಪಟ್ಟಣಗಳಿಗೆ ಸಮೀಪದಲ್ಲಿದೆ. ಈ ಎಲ್ಲ ಊರುಗಳು ತಮ್ಮದೇ ಆದ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ.

ಹಬ್ಬಗಳು ,ಜಾತ್ರೆಗಳು ಮತ್ತು ಆಹಾರಗಳು

ಸವಾಯಿ ಮಾಧೊಪುರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೀವು ಇಲ್ಲಿ ಜರುಗುವ ಪ್ರಸಿದ್ಧವಾದ ವಾರ್ಷಿಕ ಉತ್ಸವಗಳಿಗೆ ಬರಬೇಕು. ಈ ಉತ್ಸವಗಳು ಇಲ್ಲಿನ ದೇವಾಲಯಗಳಲ್ಲಿ ಮತ್ತು ಪವಿತ್ರ ಸ್ಥಳಗಳಲ್ಲಿ ಪ್ರತಿ ವರ್ಷ ನಡೆಯುತ್ತದೆ. ಸವಾಯಿ ಮಾಧೊಪುರ್ ಇಲ್ಲಿ ಬೆಳೆಯುವ ಸೀಬೆ ಹಣ್ಣಿಗೆ ಭಾರಿ ಖ್ಯಾತಿ ಪಡೆದಿದೆ. ಇವುಗಳು ತಮ್ಮ ವಿಶಿಷ್ಟವಾದ ರುಚಿ ಮತ್ತು ಗುಣಮಟ್ಟದಿಂದಾಗಿ “ಮಾಧೊಪುರ್ ಸೀಬೆಹಣ್ಣು” ಗಳೆಂದೆ ಜನಜನಿತವಾಗಿವೆ. ಈ ಸ್ಥಳವು ತನ್ನ ಸಾಂಪ್ರದಾಯಿಕವಾದ ನೃತ್ಯ ಪ್ರಕಾರಗಳಿಗೆ ಪ್ರಸಿದ್ಧಿ ಪಡೆದಿದೆ. ಅವುಗಳಲ್ಲಿ ಸವಾಯಿ ಮಾಧೊಪುರ್ ನೃತ್ಯ, ಘೂಮರ್ ನೃತ್ಯ ಮತ್ತು ಕಲ್ಬೆಲಿಯ ನೃತ್ಯಗಳು ಭಾರೀ ಜನಪ್ರಿಯತೆ ಪಡೆದಿವೆ.

ಸವಾಯಿ ಮಾಧೊಪುರಕ್ಕೆ ತಲುಪುವುದು ಹೇಗೆ

ಸವಾಯಿ ಮಾಧೊಪುರವು ಭಾರತದ ಪ್ರಮುಖ ನಗರಗಳಿಂದ ಉತ್ತಮವಾದ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಗೆ ವಿಮಾನದಲ್ಲಿ ತಲುಪಬೇಕೆಂದರೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬರಬಹುದು. ಈ ವಿಮಾನ ನಿಲ್ದಾಣವು ಸವಾಯಿ ಮಾಧೊಪುರದಿಂದ 180 ಕಿ.ಮೀ ದೂರದಲ್ಲಿದೆ.

ಹವಾಗುಣ

ಈ ಸಣ್ಣ ನಗರವು ಸಾಧಾರಣವಾದ ಅರೆ ಸಮಶೀತೋಷ್ಣವಲಯದ ಹವಾಗುಣವನ್ನು ಹೊಂದಿದ್ದು, ಬಿಸಿಲಿನಿಂದ ಕೂಡಿದ ಬೇಸಿಗೆಯನ್ನು, ಬೆಚ್ಚಗಿನ ಹಾಗು ಆರ್ದ್ರತೆಯಿಂದ ಕೂಡಿದ ಮಳೆಗಾಲಗಳನ್ನು ಹೊಂದಿದೆ. ಚಳಿಗಾಲದ ಸಮಯವು ಈ ಸ್ಥಳಕ್ಕೆ ಭೇಟಿಕೊಡಲು ಅತ್ಯುತ್ತಮ ಅವಧಿಯಾಗಿದೆ. ಆಗ ಇಲ್ಲಿನ ವಾತಾವರಣ ತಂಪಾಗಿ ಮತ್ತು ಹಿತವಾಗಿರುತ್ತದೆ.

ಸವಾಯಿ ಮಾಧೋಪುರ್ ಪ್ರಸಿದ್ಧವಾಗಿದೆ

ಸವಾಯಿ ಮಾಧೋಪುರ್ ಹವಾಮಾನ

ಉತ್ತಮ ಸಮಯ ಸವಾಯಿ ಮಾಧೋಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸವಾಯಿ ಮಾಧೋಪುರ್

  • ರಸ್ತೆಯ ಮೂಲಕ
    ಸವಾಯಿ ಮಾಧೊಪುರಕ್ಕೆ ತಲುಪಲು ಅತ್ಯುತ್ತಮ ಮಾರ್ಗವೆಂದರೆ ರಸ್ತೆ ಮಾರ್ಗ. ಇಲ್ಲಿಗೆ ಪ್ರತಿದಿನ ಆಗಮಿಸುವ ಬಸ್ಸುಗಳ ಮೂಲಕ ಮತ್ತು ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು. ರಾಜಸ್ಥಾನದ ಪ್ರಮುಖ ನಗರಗಳಿಂದ ಇಲ್ಲಿಗೆ ನೇರ ಬಸ್ ಸೌಕರ್ಯದ ವ್ಯವಸ್ಥೆ ಇದೆ. ಬಸ್ಸು ಪ್ರಯಾಣವು ಉಳಿದ ಎಲ್ಲಾ ಪ್ರಯಾಣದ ವ್ಯವಸ್ಥೆಗಳಿಗಿಂತ ಮಿತವ್ಯಯಿಯಾಗಿರುತ್ತವೆ. ಜೈಪುರದಿಂದ ಇಲ್ಲಿಗೆ ಬಸ್ ದರವು ಸುಮಾರು 100 ರೂಪಾಯಿ ಇರುತ್ತದೆ. ಈ ನಗರವು ಉತ್ತಮವಾದ ರಸ್ತೆ ಮಾರ್ಗವನ್ನು ಹೊಂದಿರುವುದರಿಂದ, ಪ್ರವಾಸಿಗರು ತಮ್ಮ ವಾಹನಗಳಲ್ಲಿ ಸ್ವತಃ ಚಾಲನೆ ಮಾಡಿಕೊಂಡು ಇಲ್ಲಿಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಈ ನಗರದ ರೈಲು ನಿಲ್ದಾಣವು ದೆಹಲಿ ಮತ್ತು ಮುಂಬಯಿಗಳ ನಡುವಿನ ಪ್ರಮುಖ ರೈಲುಮಾರ್ಗದಲ್ಲಿ ಬರುತ್ತದೆ. ಈ ನಿಲ್ದಾಣವು ಪ್ರಮುಖ ಸ್ಥಳಗಳಿಗೆ ರೈಲು ಸೌಲಭ್ಯವನ್ನೊದಗಿಸುತ್ತದೆ. ಚೆನ್ನೈ, ಪುಣೆ, ದೆಹಲಿ, ಮುಂಬೈ, ಜೈಪುರ್,ಲಕ್ನೋ, ಅಹಮದಾಬಾದ್,ಭೂಪಾಲ್, ಅಮೃತ್ ಸರ್, ಎರ್ನಾಕುಲಂ ಮತ್ತು ಡೆಹ್ರಾಡೂನ್ ಗಳಂತಹ ಪ್ರಮುಖ ನಿಲ್ದಾಣಗಳಿಗೆ ನೇರವಾದ ರೈಲು ಸಂಪರ್ಕವನ್ನು ಒದಗಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸವಾಯಿ ಮಾಧೊಪುರವು ಜೈಪುರದ ವಿಮಾನ ನಿಲ್ದಾಣದ ಮೂಲಕ ವಿಮಾನ ಸಂಪರ್ಕವನ್ನು ಪಡೆದಿದೆ. ಇದು ಇಲ್ಲಿಂದ 180 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭಾರತದ ಇತರ ನಗರಗಳಿಂದ ನಿಯಮಿತವಾಗಿ ವಿಮಾನಗಳು ಹಾರಾಡುತ್ತಿರುತ್ತವೆ. ಅಲ್ಲದೆ ಈ ವಿಮಾನ ನಿಲ್ದಾಣಕ್ಕೆ ವಿಶ್ವದ ಪ್ರಮುಖ ಸ್ಥಳಗಳಿಂದ ಕೆಲವು ಅಂತಾರಾಷ್ಟ್ರೀಯ ವಿಮಾನಗಳು ಸಹ ಬಂದು ಹೋಗುತ್ತಿರುತ್ತವೆ. ಪ್ರವಾಸಿಗರು ಈ ನಿಲ್ದಾಣದಿಂದ ಸವಾಯಿ ಮಾಧೊಪುರಕ್ಕೆ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat