Search
 • Follow NativePlanet
Share

ನಗೌರ್ - ಮನಸೂರೆಗೊಳ್ಳುವ ನಗರ

13

ರಾಜಸ್ಥಾನ ರಾಜ್ಯದಲ್ಲಿರುವ ನಗೌರ್ ಒಂದು ಐತಿಹಾಸಿಕ ನಗರಿಯಾಗಿದೆ. ಈ ನಗರವು ನಾಗಾ ಕ್ಷತ್ರೀಯರಿಂದ ಸ್ಥಾಪಿತವಾಗಿದೆ. ನಗೌರ್ ಜಿಲ್ಲೆಯ ಜಿಲ್ಲಾಡಳಿತ ಪ್ರದೇಶವಾಗಿರುವ ಇದು, ಜನಪ್ರಿಯ ಪ್ರವಾಸಿ ತಾಣಗಳಾದ ಬಿಕಾನೇರ್ ಮತ್ತು ಜೋಧಪುರ್ ಮಧ್ಯದಲ್ಲಿ ನೆಲೆಸಿದೆ.

ಪುರಾಣ ಮತ್ತು ಇತಿಹಾಸದಲ್ಲಿ ನಗೌರ್ ನ ಪಾತ್ರ

ಈ ಪ್ರದೇಶದ ಇತಿಹಾಸವು ನಮ್ಮನ್ನು ಮಹಾಕಾವ್ಯವಾದ 'ಮಹಾಭಾರತ'ದ ಕಾಲಕ್ಕೆ ಕರೆದೊಯ್ಯುತ್ತದೆ. ಅಹಿಛಾತ್ರಪುರ ರಾಜ್ಯವು, ಪ್ರಸ್ತುತ ನಗೌರ್ ಜಲ್ಲೆಯ ಕೆಲಭಾಗಗಳನ್ನು ಆವರಿಸಿತ್ತು ಎನ್ನಲಾಗಿದೆ. ಪುರಾಣಗಳ ಪ್ರಕಾರ, ಅರ್ಜುನನು ಅಹಿಛಾತ್ರಪುರವನ್ನು ವಶಪಡಿಸಿಕೊಂಡು, ತನ್ನ ಗುರುವಾದ ದ್ರೋಣಾಚಾರ್ಯರಿಗೆ ಅರ್ಪಿಸಿದ್ದನು.

ನಗೌರ್ ನಲ್ಲಿ ನೋಡಬಹುದಾದುದು ಏನಿದೆ?

ಮರುಳಿನ ಕೋಟೆಯಾದ, ನಗೌರ್ ಕೋಟೆಯು ಪ್ರಸಿದ್ಧವಾದ ತಾಣವಾಗಿದೆ. ನಾಗವಂಶಿಗಳಿಂದ ಎರಡನೇ ಶತಮಾನದಲ್ಲಿ ಇದು ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಸುಂದರವಾದ ಉದ್ಯಾನಗಳು, ಅರಮನೆಗಳು, ಕಾರಂಜಿಗಳು ಮತ್ತು ದೇವಸ್ಥಾನಗಳನ್ನು ನೋಡಬಹುದಾಗಿದೆ. ಕೋಟೆಯನ್ನು ಹೊರತುಪಡಿಸಿ ಇಲ್ಲಿರುವ ತರ್ಕೀನ್ ದರ್ಗಾವು ಕೂಡ ಪ್ರೇಕ್ಷಣೀಯ ಸ್ಥಳವಾಗಿದೆ. ಮುಸ್ಲಿಮ್ ಬಾಂಧವರಿಗೆ ಈ ದರ್ಗಾವು ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ.

ಪ್ರವಾಸಿಗರು, ನಗರದ ಕಮ್ಲಾ ಟಾವರ್ ಹಿಂಬದಿಯಲ್ಲಿರುವ ಜೈನ ಗಾಜಿನ ದೇವಸ್ಥಾನವನ್ನು ನೋಡಬಹುದು. ಇದೊಂದು ಅನನ್ಯವಾಗಿರುವ ರಚನೆಯಾಗಿದ್ದು ಸಂಪೂರ್ಣವಾಗಿ ಗಾಜಿನಲ್ಲೆ ಮಾಡಲ್ಪಟ್ಟಿದೆ. ಒಳಾಂಗಣವನ್ನು ಅದ್ಭುತವಾಗಿ ಗಾಜಿನಿಂದ ವಿನ್ಯಾಸಗೊಳಿಸಲಾಗಿದ್ದು, ಈ ದೇವಸ್ಥಾನದ ಒಟ್ಟಾರೆ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. 24 ಜೈನ ತೀರ್ಥಂಕರರ ರಚನೆಯನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಇದರ ಹೊರತಾಗಿ, ಇಲ್ಲಿರುವ ಮತ್ತೊಂದು ಸುಪ್ರಸಿದ್ಧ ತಾಣವೆಂದರೆ, ಸಾಯಿಜಿ ಕಾ ಟಂಕಾ.

ನಗೌರ್ ತನ್ನಲ್ಲಿರುವ, ಹದಿ ರಾನಿ ಮಹಲ್, ದೀಪಕ್ ಮಹಲ್, ಅಕ್ಬರಿ ಮಹಲ್ ಮತ್ತು ರಾನಿ ಮಹಲ್ ಗಳಂತಹ ಅರಮನೆಗಳಿಂದಲೂ ಸಹ ಪ್ರಸಿದ್ಧವಾಗಿದೆ. ಈ ಅರಮನೆಗಳು ತಮ್ಮ ವಾಸ್ತುಶಿಲ್ಪ ಹಾಗು ಸುಂದರ ವಿನ್ಯಾಸಗಳಿಂದಾಗಿ ಹೆಸರುವಾಸಿಯಾಗಿವೆ. ಪ್ರವಾಸಿಗರು ನಗೌರ್ ನಲ್ಲಿ ಅಮರ್ ಸಿಂಗ್ ರಾಥೋರ್ ಸ್ಮಾರಕ, ಬನ್ಸಿವಾಲಾ ದೇವಸ್ಥಾನ, ನಾಥ್ ಜಿ ಕಿ ಛತ್ರಿ ಮತ್ತು ಬರ್ಲಿ ಗೂ ಕೂಡ ಭೇಟಿ ನೀಡಬಹುದಾಗಿದೆ.

ನಗೌರ್ ತಲುಪುವ ಬಗೆ

ನಗೌರ್ ನಗರಿಯು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಹತ್ತಿರದ ವಾಯು ನಿಲ್ದಾಣವು ಜೋಧಪುರ್ ನಲ್ಲಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಈ ಪ್ರದೇಶವನ್ನು, ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂಲಕ ತಲುಪಬಹುದಾಗಿದೆ. ಈ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ರೈಲಿನ ಮುಖಾಂತರವೂ ನಗೌರ್ ಅನ್ನು ತಲುಪಬಹುದಾಗಿದೆ. ನಗೌರ್ ರೈಲು ನಿಲ್ದಾಣವು ಜೈಪುರ್, ಜೋಧಪುರ್, ಬಿಕಾನೇರ್ ಮತ್ತು ದೆಹಲಿಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇನ್ನು ರಸ್ತೆಯ ಮುಖಾಂತರ ಅಜ್ಮೇರ್, ಜೈಪುರ್, ಜೋಧಪುರ್, ಬಿಕಾನೇರ್ ಮತ್ತು ದೆಹಲಿಗಳಿಂದ ನಗೌರ್ ಗೆ ಬಸ್ಸುಗಳು ಲಭ್ಯವಿದೆ.

ಹವಾಮಾನ

ಅತ್ಯಲ್ಪ ಪ್ರಮಾಣದ ಮಳೆಯ ಪರಿಣಾಮವಾಗಿ, ನಗೌರ್ ನ ವಾತಾವರಣವು ವರ್ಷಪೂರ್ತಿ ಒಣ ಹಾಗು ಉಷ್ಣಮಯವಾಗಿರುತ್ತದೆ. ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ ಮೂರು ಮುಖ್ಯ ಋತುಗಳಾಗಿವೆ. ಅಕ್ಟೋಬರ್ ಮತ್ತು ನವಂಬರ್ ಮಧ್ಯದ ಅವಧಿಯು ಸಾಧಾರಣವಾಗಿ ಹಿತಕರವಾಗಿರುವುದರಿಂದ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ನಗೌರ್ ಪ್ರಸಿದ್ಧವಾಗಿದೆ

ನಗೌರ್ ಹವಾಮಾನ

ನಗೌರ್
34oC / 92oF
 • Sunny
 • Wind: WSW 30 km/h

ಉತ್ತಮ ಸಮಯ ನಗೌರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಗೌರ್

 • ರಸ್ತೆಯ ಮೂಲಕ
  ರಸ್ತೆಯ ಮುಖಾಂತರ ಅಜ್ಮೇರ್, ಜೈಪುರ್, ಜೋಧಪುರ್, ಬಿಕಾನೇರ್ ಮತ್ತು ದೆಹಲಿಗಳಿಂದ ನಗೌರ್ ಗೆ ಬಸ್ಸುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಗೌರ್ ರೈಲು ನಿಲ್ದಾಣವು ಜೈಪುರ್, ಜೋಧಪುರ್, ಬಿಕಾನೇರ್ ಮತ್ತು ದೆಹಲಿಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇದಕ್ಕೆ ಹತ್ತಿರದ ವಾಯು ನಿಲ್ದಾಣವು ಜೋಧಪುರ್ ನಲ್ಲಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಈ ಪ್ರದೇಶವನ್ನು, ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂಲಕ ತಲುಪಬಹುದಾಗಿದೆ. ಈ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ವಿಮಾನ ನಿಲ್ದಾಣಗಳಿಂದ ನಗೌರ್ ಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
21 May,Tue
Return On
22 May,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 May,Tue
Check Out
22 May,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 May,Tue
Return On
22 May,Wed
 • Today
  Nagaur
  34 OC
  92 OF
  UV Index: 9
  Sunny
 • Tomorrow
  Nagaur
  31 OC
  87 OF
  UV Index: 9
  Sunny
 • Day After
  Nagaur
  30 OC
  86 OF
  UV Index: 9
  Sunny