ರಾಜಸ್ಥಾನದ ನಗೌರ್ ನಲ್ಲಿರುವ ತರ್ಕೀನ್ ದರ್ಗಾವು ಒಂದು ಮಹತ್ವವಾದ ಧಾರ್ಮಿಕ ಕ್ಷೇತ್ರವಾಗಿದೆ. ಮುಸ್ಲಿಮ್ ಬಾಂಧವರಿಗೆ ಈ ದರ್ಗಾವು ಅತ್ಯಂತ ಪವಿತ್ರ ಧಾರ್ಮಿಕ ಸ್ಥಳವಾಗಿದೆ ಮತ್ತು ಅಜ್ಮೇರ್ -ಎ- ಷರೀಫ್ ನಂತರದಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಖ್ವಾಜಾ ಮೋಯಿನುದ್ದಿನ್ ಚಿಸ್ತಿ ಅವರ ಮುಖ್ಯ ಶಿಷ್ಯನಾದ ಖ್ವಾಜಾ ಹಮೀದುದ್ದಿನ್ ನಗೌರಿಯವರ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ.