ಪೋಖ್ರಾನ್ - ಮರಿಚಿಕೆಗಳ ತಾಣ

ಥಾರ‍್ ಮರುಭೂಮಿಯಲ್ಲಿರುವ ಪೋಖ್ರಾನ್‌ ಒಂದು ಐತಿಹಾಸಿಕ ನಗರ. ರಾಜಸ್ತಾನದ ಜೈಸಲ್ಮೇರ‍್ ರಾಜ್ಯದಲ್ಲಿ ಈ ಪೋಖ್ರಾನ್‌ ಇದೆ. ಇಲ್ಲಿರುವ ಪ್ರಮುಖ ಐದು ಲವಣ ಶಿಲೆಗಳಿಂದಾಗಿ ಪೋಖ್ರಾನ್‌ನ್ನು ಐದು ಮರೀಚಿಕೆಗಳ ನಗರ ಎಂದು ಕರೆಯಲಾಗಿದೆ. ಇಲ್ಲಿ ಭಾರತವು ಸರಣಿ ಅಣ್ವಸ್ತ್ರ ಪರೀಕ್ಷೆಯನ್ನು ಮಾಡಿದಾಗ ಈ ನಗರವು ದೇಶದ ಜನರ ಗಮನಕ್ಕೆ ಬಂತು. 1974, ಮೇ 18ರಂದು ಪೋಖ್ರಾನ್‌ನಲ್ಲಿ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಯಿತು. ಇದನ್ನು ’ಆಪರೇಷನ್‌ ಸ್ಮೈಲಿಂಗ್ ಬುದ್ಧ’ ಎಂದು ಕರೆಯಲಾಗಿತ್ತು.

ಹವೇಲಿಗಳು, ಸ್ಮಾರಕಗಳು ಮತ್ತು ದೇವಸ್ಥಾನಗಳಿಂದಾಗಿ ಪೋಖ್ರಾನ್‌ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಮುಖ ಧಾರ್ಮಿಕ ಸ್ಥಳವೆಂದರೆ ಬಾಬಾ ರಾಮದೇವ್‌ ದೇವಸ್ಥಾನ. ಪೋಖ್ರಾನ್‌ನಿಂದ ಸುಮಾರು 12 ಕಿ.ಮೀ ದೂರದಲ್ಲಿ ರಾಮದೇವರ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ದೇವಸ್ಥಾನದ ಆವರಣದಲ್ಲಿ ಹಿಂದೂಗಳ ದೇವರಾದ ರಾಮನ ಸಮಾಧಿ ಕೂಡಾ ಇದೆ. ರಾಮದೇವರ ಹಬ್ಬದಂದು ದೇಶಾದ್ಯಂತ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಪೋಖ್ರಾನ್‌ನ ಇನ್ನೊಂದು ಪ್ರಮುಖ ಆಕರ್ಷಣೆಯ ಸ್ಥಳ ಪೋಕರಾನ್ ಕೋಟೆ. ಇದನ್ನು ಬಾಲಗಢ ಎಂದೂ ಕರೆಯಲಾಗಿದೆ. ಇದನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದು ಚಂಪಾವತ್‌ರಿಗೆ ಸಂಬಂಧಿಸಿದ್ದು. ಈ ಕೋಟೆಯ ಸುಂದರವಾದ ವಾಸ್ತುಶಿಲ್ಪ ಮತ್ತು ಇತಿಹಾಸವು ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಈ ಕೋಟೆಯಲ್ಲಿ ಒಂದು ಮ್ಯೂಸಿಯಂ ಕೂಡಾ ಇದ್ದು, ಇಲ್ಲಿ ರಜಪೂತರ ಕಾಲದ ಯುದ್ಧಸಾಮಗ್ರಿಗಳು ಮತ್ತು ಕರಕುಶಲ ಸಾಮಗ್ರಿಗಳನ್ನು ನೋಡಬಹುದು.

ಈ ಪಟ್ಟಣವು ಇಲ್ಲಿನ ರಾಜರ ಹವೇಲಿಗಳು ಮತ್ತು ಸೌಂದರ್ಯಕ್ಕೆ ಜನಪ್ರಿಯ. ಭೇಟಿ ಮಾಡಲೇಬೇಕಾದ ಕೆಲವು ಪ್ರಮುಖ ಹವೇಲಿಗಳೆಂದರೆ ಸಾಲಿಮ್‌ ಸಿಂಗ್‌ ಕಿ ಹವೇಲಿ, ಪಟ್ವಾ ಜಿ ಕಿ ಹವೇಲಿ ಮತ್ತು ನಾಥಮ್‌ಜಿ ಕಿ ಹವೇಲಿ.

ಪೋಖ್ರಾನ್‌ಗೆ ರಸ್ತೆ, ವಿಮಾನ ಮತ್ತು ರೈಲಿನ ಮೂಲಕ ಸುಲಭವಾಗಿ ಪ್ರಯಾಣಿಸಬಹುದು. ಜೈಪುರ ವಿಮಾನ ನಿಲ್ದಾಣ ಮತ್ತು ಜೈಪುರ ರೈಲ್ವೆ ಸ್ಟೇಷನ್‌ಗಳು ಪೋಖ್ರಾನ್‌ಗೆ ಸಮೀಪದಲ್ಲಿದೆ. ಪೋಖ್ರಾನ್‌ಗೆ ಸಮೀಪದ ನಗರಗಳಾದ ಜೈಪುರ, ಜೋಧ್‌ಪುರ, ಬಿಕಾನೇರ‍್ ಮತ್ತು ಜೈಸಲ್ಮೇರಿನಿಂದ ಬಸ್‌ಗಳನ್ನು ಪಡೆಯಬಹುದು.

ವರ್ಷಪೂರ್ತಿ ಪೋಖ್ರಾನ್‌ನಲ್ಲಿ ಅತಿರೇಕವಾದ ವಾತಾವರಣವೇ ಇರುತ್ತದೆ. ಪೋಖ್ರಾನ್‌ಗೆ ಪ್ರಯಾಣಿಸಲು ಅಕ್ಟೋಬರಿನಿಂದ ಮಾರ್ಚ್‌‌ನ ಅವಧಿಯಲ್ಲಿ ಯೋಜಿಸಬಹುದು. ಈ ಅವಧಿಯಲ್ಲಿ ವಾತಾವರಣವು

Please Wait while comments are loading...