ಬಾಬಾ ರಾಮದೇವ ದೇವಸ್ಥಾನವು ರಾಮದೇವರ ಎಂಬ ಹಳ್ಳಿಯಲ್ಲಿದೆ. ಇದು ಪೋಖ್ರಾನ್ನಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ರಾಮದೇವರ ಸಮಾಧಿಯು ದೇವಸ್ಥಾನದ ಸಮೀಪದಲ್ಲೇ ಇದೆ. ರಜಪೂತ ರಾಜ ಮತ್ತು 14ನೇ ಶತಮಾನದಲ್ಲಿ ಪ್ರಮುಖ ದೈವವಾಗಿದ್ದ ರಾಮದೇವರ ಶಕ್ತಿ ಮತ್ತು ಜನಪ್ರಿಯತೆಯು ವಿಶ್ವದಾದದ್ಯಂತ ಹಬ್ಬಿದೆ. ರಾಮನು ಬಡವರ ಉದ್ಧಾರಕ್ಕೆ ತನ್ನ ಜೀವನವನ್ನೇ ಸಮರ್ಪಿಸಿದ. ಪ್ರಸಕ್ತ, ಹಿಂದೂಗಳ ಪ್ರಮುಖ ದೇವರು ರಾಮ.ದೇವಸ್ಥಾನದ ಹೊಸ ಕಟ್ಟಡವನ್ನು ನಿರ್ಮಿಸಿದ್ದು 1931ರಲ್ಲಿ, ಬಿಕಾನೇರಿನ ಮಹಾರಾಜ ಗಂಗ ಸಿಂಗ್. ದೇವಸ್ಥಾನದ ಸಮೀಪದಲ್ಲೇ ರಾಮದೇವರ ಸಮಾಧಿಯೂ ಕೂಡಾ ಇದೆ. ಜೊತೆಗೆ ಪಕ್ಕದಲ್ಲೇ ಮುಸ್ಲಿಮ್ ಪೀರರ ಸಮಾಧಿಯೂ ಇದೆ. ಈ ಪೀರರು ಮೆಕ್ಕಾದಿಂದ ರಾಮನಿಗೆ ನಮನ ಸಲ್ಲಿಸಲು ಬಂದಿದ್ದರು ಎಂದು ಹೇಳಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ಇವರಿಗೆ ರಾಮ ಶಾಹ್ ಪೀರ್ ಎಂದು ಕರೆಯಲಾಗಿದೆ.ಹಳ್ಳಿಗೆ ಸಮೀಪದಲ್ಲಿ ರಾಮಸರ ಕೆರೆ ಎಂಬ ಕೆರೆಯೊಂದಿದೆ. ಈ ಕೆರೆಯನ್ನು ರಾಮನೇ ನಿರ್ಮಿಸಿದ ಎಂದು ಇಲ್ಲಿನ ಜನ ನಂಬಿದ್ದಾರೆ. ದೇವಸ್ಥಾನದಲ್ಲಿ ಸಮೀಪದಲ್ಲೇ ಪರ್ಚಾ ಬಾವೊರಿ ಎಂಬ ಬಾವಿಯೂ ಇದೆ. ಈ ಬಾವಿಯ ನೀರಿಗೆ ವಿಶೇಷವಾದ ಶಕ್ತಿಯಿದೆ ಎಂದು ಹೇಳಲಾಗಿದೆ.