ಖೀಚನ್ - ಮರುಳುಗಾಡಿನ ಯುವ ಕ್ರೇನ್ ಪಕ್ಷಿಗಳು

ಖೀಚನ್ ಇದೊಂದು ಮರುಳುಗಾಡಿನ ಹಳ್ಳಿಯಾಗಿದ್ದು, ರಾಜಸ್ಥಾನದ ಜೋಧಪುರ್ ಜಿಲ್ಲೆಯ ಜೋಧಪುರ್ ನಗರದಿಂದ 150 ಕಿ.ಮೀ ದೂರದಲ್ಲಿದೆ. ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವೆಂದರೆ ಫಾಲೋದಿ, ಇದು 4.5 ಕಿ.ಮೀ ದೂರದಲ್ಲಿದೆ. ಇತ್ತಿಚೆಗೆ ಕೆಲವು ವರ್ಷಗಳಿಂದ ಈ ಹಳ್ಳಿಯು, ಇಲ್ಲಿಗೆ ಪ್ರತಿ ಚಳಿಗಾಲದಲ್ಲಿ ಬರುವ ಡಿಮಾಯ್ ಸೆಲ್ (ತರುಣಿ) ಕ್ರೇನ್ ಪಕ್ಷಿಗಳಿಗೆ ಆಹಾರ ಕೊಡುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದೆ.

ಅಂತಾರಾಷ್ಟ್ರೀಯ ಮನ್ನಣೆಗಳಿಸಿರುವ ಪಕ್ಷಿ ತಾಣ

ಕೆಲವು ವರ್ಷಗಳ ಹಿಂದೆ, ಹಳ್ಳಿಯ ಒಂದು ಭಾಗದ ಜನರು ಮಾರ್ವಾರಿ ಸಮುದಾಯದ ಒಬ್ಬ ಪಕ್ಷಿ ಪ್ರಿಯನ ಜೊತೆ ಸೇರಿ ಈ ಪಕ್ಷಿಗಳಿಗೆ ಪ್ರತಿ ದಿನ ಬೆಳಿಗ್ಗೆ ಕಾಳು ಕಡಿಗಳನ್ನು ಹಾಕಲು ಪ್ರಾರಂಭಿಸಿದರು. ಪರಿಣಾಮವಾಗಿ ಬಹು ಸಂಖ್ಯೆಯಲ್ಲಿ ಈ ತರುಣ ಕ್ರೇನ್ ಪಕ್ಷಿಗಳು ಆಕರ್ಷಿತಗೊಂಡು ಬರತೊಡಗಿದವು. ಸ್ಥಳೀಯವಾಗಿ ಇವುಗಳನ್ನು ಕುರ್ಜಾಗಳೆನ್ನುತ್ತಾರೆ. ಆಗಿನಿಂದ ಈ ಪಕ್ಷಿಗಳಿಗೆ ಅಹಾರ ಒದಗಿಸುವ ಈ ಸಂಪ್ರದಾಯವು ಮುಂದುವರೆದಿದೆ. ಇಂದು ಈ ಪಕ್ಷಿಗಳಿಗಾಗಿ ಪ್ರತಿದಿನ 500 ಕೆ.ಜಿ ಯಷ್ಟು ಕಾಳುಕಡಿಯನ್ನು ವಿನಿಯೋಗಿಸಲಾಗುತ್ತಿದೆ.

ಪಕ್ಷಿ ಪ್ರಿಯರ ಸಮುದಾಯದಲ್ಲಿ ಪ್ರಖ್ಯಾತವಾಗಿರುವ ಈ ಹಳ್ಳಿಯು, 'ಬರ್ಡಿಂಗ್ ವರ್ಡ್' ಎಂಬ ಮ್ಯಾಗಜೀನ್ ನಲ್ಲಿ 'ಖೀಚನ್-ದಿ ಡಿಮೋಯ್ ಸೆಲ್ ಕ್ರೇನ್ ವಿಲೇಜ್' ಎಂಬ ಶಿರ್ಷಿಕೆಯಡಿ ಪ್ರಕಾಶನಗೊಂಡ ನಂತರ, ಅಂತಾರಾಷ್ಟ್ರೀಯ ಮನ್ನಣೆ ಪಡೆಯಿತು.

ಈ ಕ್ರೇನ್ ಪಕ್ಷಿಗಳ ಸಂರಕ್ಷಣೆಗೆಂದೆ ಸ್ಥಾಪಿತವಾಗಿರುವ ಕುರ್ಜಾ ಸಂರಕ್ಷಣ್ ವಿಕಾಸ್ ಸಂಸ್ಥಾನ್, ಪಕ್ಷಿ ಚುಘಾ ಘರ್, ಖೀಚನ್ ಸಂಸ್ಥೆಯು ಪ್ರವಾಸಿಗರ ಮತ್ತು ಸ್ಥಳೀಯರಿಂದ ಒದಗಿ ಬರುವ ಆರ್ಥಿಕ ಸಹಾಯದಿಂದ ನಿರ್ವಹಿಸಲ್ಪಡುತ್ತಿದೆ. ಇದಲ್ಲದೆ ಮಾರ್ವಾರಿ ಕ್ರೇನ್ ಫೌಂಡೇಷನ್ ಎಂಬ ಮತ್ತೊಂದು ಸಂಸ್ಥೆಯು ಕೂಡ ಇದೇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ರಾಜಸ್ಥಾನ ಸರ್ಕಾರದಿಂದ ಖೀಚನ್ ಅನ್ನು ಒಂದು ಪ್ರವಾಸಿ ತಾಣ ಎಂದು ಘೋಷಿಸಲಾಗಿದೆ. ಮಾರ್ವಾರಿ ಕ್ರೇನ್ ಫೌಂಡೇಷನ್ ಗೆ ಆಶ್ರಯ ಕೊಟ್ಟಿರುವ ಇಂಟರ್ ನ್ಯಾಷ್ನಲ್ ಕ್ರೇನ್ ಫೌಂಡೇಷನ್ ಸಂಸ್ಥೆಯ ನಿರ್ದೇಶಕರು ಕೂಡ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಖೀಚನ್ ತಲುಪುವ ಬಗೆ

ಈ ಸ್ಥಳವನ್ನು ಆಕಾಶ, ರೈಲು ಹಾಗು ರಸ್ತೆ ಮಾರ್ಗವಾಗಿ ತಲುಪಬಹುದಾಗಿದೆ. ಇಲ್ಲಿಂದ 150 ಕಿ.ಮೀ ದೂರದಲ್ಲಿರುವ ಜೋಧಪುರ್ ನ ಸಿವಿಲ್ ಏರ್ ಪೊರ್ಟ್ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಕೇವಲ 4.5 ಕಿ.ಮೀ ದೂರವಿರುವ ಫಲೋದಿಯು ಹತ್ತಿರದ ರೈಲು ನಿಲ್ದಾಣವಾಗಿದೆ. ರಸ್ತೆಯ ಮೂಲಕವು ಈ ಹಳ್ಳಿಯನ್ನು ಸುಲಭವಾಗಿ ತಲುಪಬಹುದಾಗಿದೆ.

ಚಳಿಗಾಲದ ಸಮಯದಲ್ಲಿ, ಈ ಹಳ್ಳಿಯು ಆಹ್ಲಾದಕರ ವಾತಾವರಣವನ್ನು ಹೊಂದಿರುವುದರಿಂದ ಭೇಟಿ ನೀಡಲು ಉತ್ತಮ ಕಾಲವಾಗಿದೆ.

Please Wait while comments are loading...