Search
  • Follow NativePlanet
Share

ಪಲೋಡಿ: ಪ್ರವಾಸಿಗರ ಸ್ವರ್ಗ

15

"ಉಪ್ಪಿನ ನಗರಿ" ಎಂಬ ಖ್ಯಾತಿಗಳಿಸಿರುವ ನಗರ ಪಲೋಡಿ. ರಾಜಸ್ತಾನದ ಜೋದಪುರ ಜಿಲ್ಲೆಯಲ್ಲಿ ಬರುವ ಈ ತಾಣ, ಪ್ರವಾಸಿಗರ ಸ್ವರ್ಗ. ಪ್ರವಾಸಿ ತಾಣಗಳ ಹಬ್‌ ಅನ್ನಿಸಿಕೊಂಡಿದೆ. ಈ ತಾಣವು ಥಾರ್‌ ಮರಭೂಮಿಯ ಗೋಲ್ಡನ್‌ ಸಿಟಿ ಅನ್ನಿಸಿಕೊಂಡಿರುವ ಜೈಸಲ್‌ಮೇರ್‌ ಹಾಗೂ ಸೂರ್ಯನಗರಿ ಅನ್ನಿಸಿಕೊಂಡಿರುವ ಜೋದಪುರ ನಡುವೆ ಇದೆ. ಇಲ್ಲಿ ಇಂದಿಗೂ ಪುರಾತನ ಕಾರ್ವನ್‌ ಕೇಂದ್ರ ಇದ್ದು, ಒಂಟೆಯ ಮೇಲಿಟ್ಟು ಉಪ್ಪಿನ ವ್ಯಾಪಾರ ಮಾಡುವ ಕಾರ್ಯ ನಡೆಯುತ್ತಿದೆ. ಪಲೋಡಿಯ ವ್ಯಾಪ್ತಿ ಗಮನಿಸಿದಾಗ ಇದರ ಸುತ್ತ ಬಿಕಾನೇರ್‌, ನಗೂರ್‌, ಜ್ಐಸಾಲ್ಮೇರ್‌, ಜೋದಪುರ ಆವರಿಸಿಕೊಂಡಿವೆ. ಇದು ಜೋದಪುರ ಜಿಲ್ಲೆಯ ಎರಡನೇ ಅತಿ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ಇತಿಹಾಸ ಕೆದಕಲು ಹೋದರೆ ಅದು 15ನೇ ಶತಮಾನಕ್ಕೆ ಹೋಗಿ ನಿಲ್ಲುತ್ತದೆ. ಈ ಪಟ್ಟಣ ಅಂದು "ಪಲ್ಲವಾರಾಧಿಕ್ಯ' ಆಳ್ವಿಕೆಗೆ ಒಳಪಟ್ಟಿತ್ತು. 1547 ರಲ್ಲಿ ಈ ಭಾಗವನ್ನು ರಾವ್‌ ಮಾಲ್ದೆವೊ ರಾಥೋಡ್‌ ಆಳುತ್ತಿದ್ದರು. ಆದರೆ ಇದು 1578 ರ ಹೊತ್ತಿಗೆ ರಾಜಾ ಬಿಕಾನೇರ್‌ ಆಳ್ವಿಕೆಗೆ ಬಂತು. 1615 ರ ಹೊತ್ತಿಗೆ ಇದು ಜೋದಪುರದ ಒಂದು ಭಾಗವಾಗಿ ಸೇರಿಕೊಂಡಿತು. ರಾವ್‌ ಸೂರ್‌ ಸಿಂಗ್‌ ಇದನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಸಂಸ್ಕೃತಿ, ಬಣ್ಣ ಹಾಗೂ ಸಾಮರಸ್ಯ

ಜೋತೀಸ್‌ ಹೆಸರಿನ ಶೂಗಳು ಇಲ್ಲಿ ಅತ್ಯಂತ ಜನಪ್ರಿಯ. ಇದಲ್ಲದೇ ಬಣ್ಣ ಬಣ್ಣದ ಬಳೆಗಳು, ಘಾಡ ಬಣ್ಣದಿಂದ ಕಂಗೊಳಿಸುವ ಮಹಿಳೆಯರ ಬಟ್ಟೆಗಳು, ಬೆಳ್ಳಿ ಆಭರಣ ಪಲೋಡಿಯ ಆಕರ್ಷಣೆಗಳಾಗಿವೆ. ಈ ಭಾಗದಲ್ಲಿ ಹಿಂದಿ ಹಾಗೂ ರಾಜಸ್ತಾನಿ ಭಾಷೆ ಹೆಚ್ಚಾಗಿ ಬಳಕೆಯಲ್ಲಿದೆ. ಹೆಚ್ಚಿನ ಜನ ಇವೆರಡೇ ಭಾಷೆ ಮಾತನಾಡುತ್ತಾರೆ. ಪಲೋಡಿಯ ಶ್ರೀಮಂತ ಸಂಸ್ಕೃತಿ ಜತೆ ಪಲೋಡಿಯ ಕೋಟೆ, ಬಜಾರ್‌ಗಳು, ಐಶಾರಾಮಿ ಬಂಗಲೆ, ಜನಪ್ರಿಯ ಹಿಂದು ಹಾಗೂ ಜೈನ ಮಂದಿರಗಳು ಪ್ರದೇಶವನ್ನು ಉತ್ತಮ ಪ್ರವಾಸಿ ಕೇಂದ್ರವಾಗಿಸಿವೆ.

ಇಲ್ಲಿನ ಕಲಾತ್ಮಕ ಕಟ್ಟಡಗಳು ಅತ್ಯಂತ ವಿಶಿಷ್ಟ ಕಲೆಯಾದ ಜರೂಖಾ ಹಾಗೂ ಜಾಲಿ ಶೈಲಿಯ ರಜಪೂತರ ಕಾಲದ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತವೆ. ಪಲೋಡಿ ಕೋಟೆ ಕೂಡ ಅತ್ಯಂತ ಜನಪ್ರಿಯ ಹಾಗೂ ಐತಿಹಾಸಿಕ ತಾಣ. 300 ವರ್ಷಕ್ಕೂ ಹಳೆಯದಾಗಿರುವ ಕೋಟೆ, ಸುದೀರ್ಘ ಇತಿಹಾಸ ಹೊಂದಿದೆ.ಕೋಟೆಯ ನಿರ್ಮಾಣದಲ್ಲಿ ಬಳಸಿದ ಆಕರ್ಷಕ ವಾಸ್ತುಶಿಲ್ಪ ಜನರನ್ನು ಅಪಾರವಾಗಿ ಸೆಳೆಯುತ್ತದೆ. ವಿಶ್ವದ ಎಲ್ಲಾ ಭಾಗದಿಂದ ಜನ ಬರುತ್ತಾರೆ. ಇಲ್ಲಿಗೆ ಬರುವವರು 1750 ರಲ್ಲಿ ಕೆಂಪು ಮಣ್ಣಿನ ಇಟ್ಟಿಗೆಗಳಲ್ಲಿ ನಿರ್ಮಿಸಿದ ಲಾಲ್‌ ನಿವಾಸ್‌ ನೋಡದೇ ತೆರಳುವುದಿಲ್ಲ. ಇದೀಗ ಸಾಂಪ್ರದಾಯಿಕ ಹಿನ್ನೆಲೆಯೊಂದಿಗೆ ನವೀಕರಣಗೊಂಡ ಹೋಟೆಲ್‌ಆಗಿ ಪರಿವರ್ತನೆಯಾಗಿದೆ. ಅತ್ಯಾಕರ್ಷಕ ಕುಸುರಿ ಕಲೆಯುಳ್ಳ ಕರಕುಶಲ ವಸ್ತುಗಳು, ಗಾಜಿನ ಉತ್ಪನ್ನಗಳ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದೆ. ಇಲ್ಲಿನ ಇತರೆ ಗಮನಾರ್ಹ ಆಕರ್ಷಣೆಗಳೆಂದರೆ ಸಚ್ಚಿಯಾ ಮಠದ ದೇವಾಲಯ, ಮಹಾವೀರ ಮಂದಿರ, ರಾಮದೇವ ಹಾಗೂ ಸೂರ್ಯ ದೇವಾಲಯಗಳು.

ವಲಸೆ ಹಕ್ಕಿಗಳ ಆವಾಸ ತಾಣ

ಐತಿಹಾಸಿಕ ಕಟ್ಟಡಗಳು, ದೇವಾಲಯ, ಕೋಟೆ ಜತೆ ಪಲೋಡಿ ಪಕ್ಷಿ ವೀಕ್ಷಕರಿಗೂ ಉತ್ತಮ ತಾಣ ಎನಿಸಿದೆ. ಖೀಚನ್‌ ಹಳ್ಳಿಗೆ ಭೇಟಿ ನೀಡುವ ಪಕ್ಷಿ ಪ್ರೇಮಿಗಳಿಗೆ ಸದಾ ಸಾವಿರಾರು ವಲಸೆ ಹಕ್ಕಿಗಳನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ. ಸ್ಥಳೀಯರಿಂದ "ಕುರ್ಜಾ' ಎಂದು ಕರೆಸಿಕೊಳ್ಳುವ ದಿ ಡೆಮೋಸೆಲ್ಲೆ ಕ್ರೇನ್ ವಿಲೇಜ್‌, ಕೇಂದ್ರ ಸ್ಥಳದಿಂದ 5 ಕಿ.ಮಿ. ಯಷ್ಟು ಮಾತ್ರ ದೂರದಲ್ಲಿದೆ.

ಆಗಸ್ಟ್‌ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಭೇಟಿ ನೀಡಿದರೆ ಅಪರೂಪದ ಪಕ್ಷಿಗಳನ್ನು ವೀಕ್ಷಿಸಬಹುದು. ಇಲ್ಲಿಗೆ ಯೂರೋಪ್‌ನ ಕೆಲ ಭಾಗ, ಉಕ್ರೇನ್‌, ಪೋಲೆಂಡ್‌ ಮತ್ತಿತರ ರಾಷ್ಟ್ರಗಳಿಂದ ಪಕ್ಷಿಗಳು ಆಗಮಿಸುತ್ತವೆ. ಹೀಗಾಗಿ ಈ ಊರು ದಿ ಡೆಮೋಸೆಲ್ಲೆ ಕ್ರೇನ್ ವಿಲೇಜ್‌ ಎಂದು ಕೂಡ ಕರೆಸಿಕೊಳ್ಳುತ್ತಿದೆ.

ಪಲೋಡಿ ತಲುಪುವುದು

ಉಪ್ಪಿನ ನಗರಿಯನ್ನು ತಲುಪುವುದು ಕಷ್ಟವೇನಲ್ಲ. ರಸ್ತೆ, ರೈಲು ಹಾಗೂ ಮೈಮಾನಿಕ ಮಾರ್ಗಗಳು ಸುಲಭವಾಗಿವೆ. ಜೋದಪುರ ವಿಮಾನ ನಿಲ್ದಾಣ ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪಲೋಡಿಯಿಂದ 135 ಕಿ.ಮೀ. ದೂರದಲ್ಲಿ ಜೋದಪುರ ಇದೆ. ವಿದೇಶಿ ಪ್ರವಾಸಿಗರು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಲ್ಲಿಗೆ ತಲುಪುತ್ತಾರೆ. ಅಲ್ಲದೇ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಇಲ್ಲಿಗೆ ತಲುಪಲು ಬೆಂಗಳೂರು, ಗೌಹಾತಿ, ಚೆನ್ನೈ, ಕೋಲ್ಕತ್ತಾ, ಮುಂಬಯಿ ಸೇರಿದಂತೆ ಹಲವು ನಗರಗಳಿಂದ ಏರ್‌ಬಸ್‌ ಸೌಲಭ್ಯ ಇದೆ.  

ಪ್ರವಾಸಿಗರು ರೈಲಿನ ಮೂಲಕವೂ ಇಲ್ಲಿಗೆ ತಲುಪಬಹುದು. ಸುತ್ತಲಿನ ಪ್ರಮುಖ ಸ್ಥಳಗಳಾದ ಬಿಕಾನೇರ್‌, ಜೈಸಲ್ಮೇರ್‌, ಲಾಲ್‌ಘರ್‌, ಹಳೆ ದಿಲ್ಲಿ ಹಾಗೂ ಜೋದಪುರ ನಿಲ್ದಾಣಕ್ಕೆ ಬಂದಿಳಿದು ಇಲ್ಲಿಗೆ ತಲುಪಬಹುದು. ಬಸ್‌ ಹಾಗೂ ಕ್ಯಾಬ್‌ಗಳ ಸೇವೆ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣ ಎರಡೂ ಕಡೆಯಿಂದ ಸುಲಭವಾಗಿ ಪಲೋಡಿಗೆ ಲಭ್ಯವಿದೆ. ಸುಗಮ ಹಾಗೂ ಆರಾಮದಾಯಕ ಬಸ್‌ ಸೇವೆಯೂ ಇಲ್ಲಿಗಿದೆ. ಖಾಸಗಿ ಹಾಗೂ ಸರ್ಕಾರಿ ಎರಡೂ ವಿಧದ ಬಸ್‌ ಸೇವೆ ಇದ್ದು, ಆರಾಮ ಅನ್ನಿಸಿದ್ದನ್ನು ಜನ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿಗೆ ಜೋದಪುರ, ಅಜ್ಮೀರ್‌, ಜಯಪುರ, ಬೇವಾರ್‌, ಆಗ್ರಾ, ಅಲಹಾಬಾದ್‌ ಹಾಗೂ ಕಾನಪುರಗಳಿಂದ ಬಸ್‌ ಸೇವೆ ಇದೆ.

ವರ್ಷವಿಡೀ ಪಲೋಡಿಯಲ್ಲಿ ವಾತಾವರಣದಲ್ಲಿ ವ್ಯತ್ಯಯ ಆಗುತ್ತಲೇ ಇರುತ್ತದೆ. ಇಲ್ಲೊಂದು ವಿಚಿತ್ರ ರೀತಿಯ ವಾತಾವರಣ ಇದೆ. ಬೇಸಿಗೆಯಲ್ಲಿ ವಿಪರೀತ ಸೆಖೆ ಇರುತ್ತದೆ. ತಾಪಮಾನ 45 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ. ಹವಾಮಾನ ತಂಪಾಗಿದ್ದು, 5 ಡಿಗ್ರಿ ಸೆಲ್ಶಿಯಸ್‌ ತಲುಪುತ್ತದೆ. ಚಳಿಗಾಲದ ಸಂದರ್ಭ ಪ್ರವಾಸಿಗರಿಗೆ ಇಲ್ಲಿ ಬರಲು ಸೂಕ್ತ ಕಾಲ. ರಜೆ ಕಳೆಯಲು ಇದಕ್ಕಿಂತ ಉತ್ತಮ ತಾಣ ಸಿಗಲಾರದು.

ಪಲೋಡಿ ಪ್ರಸಿದ್ಧವಾಗಿದೆ

ಪಲೋಡಿ ಹವಾಮಾನ

ಉತ್ತಮ ಸಮಯ ಪಲೋಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಲೋಡಿ

  • ರಸ್ತೆಯ ಮೂಲಕ
    ಪಲೋಡಿಯಲ್ಲೇ ಒಂದು ರೈಲು ನಿಲ್ದಾಣ ಇದೆ. ಇಲ್ಲಿಗೆ ಪ್ರಮುಖ ಪ್ರವಾಸಿ ಕೇಂದ್ರಗಳಾದ ಬಿಕಾನೇರ್‌, ಜ್ಐಸಾಲ್ಮೇರ್‌, ಲಾಲ್‌ಘರ್‌, ಹಳೆ ದಿಲ್ಲಿ ಹಾಗೂ ಜೋದಪುರ ನಿಲ್ದಾಣಕ್ಕೆ ಬಂದಿಳಿದು ಇಲ್ಲಿಗೆ ತಲುಪಬಹುದು. ಇಲ್ಲಿಗೆ ತಲುಪಲು ಹವಾನಿಯಂತ್ರಿತ, ಸಾಮಾನ್ಯ ಸ್ಲೀಪರ್‌ ಬೋಗಿಯುಳ್ಳ ರೈಲಿನ ಸೇವೆಯ ಅನುಕೂಲ ಪಡೆಯಬಹುದು. ಕಡಿಮೆ ಬೆಲೆಯಲ್ಲಿ ರೈಲು ನಿಲ್ದಾಣಗಳಿಂದ ಪಲೋಡಿ ತಲುಪಲು ಕ್ಯಾಬ್‌ ಸೌಲಭ್ಯ ಚೆನ್ನಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಲೋಡಿಯಲ್ಲೇ ಒಂದು ರೈಲು ನಿಲ್ದಾಣ ಇದೆ. ಇಲ್ಲಿಗೆ ಪ್ರಮುಖ ಪ್ರವಾಸಿ ಕೇಂದ್ರಗಳಾದ ಬಿಕಾನೇರ್‌, ಜ್ಐಸಾಲ್ಮೇರ್‌, ಲಾಲ್‌ಘರ್‌, ಹಳೆ ದಿಲ್ಲಿ ಹಾಗೂ ಜೋದಪುರ ನಿಲ್ದಾಣಕ್ಕೆ ಬಂದಿಳಿದು ಇಲ್ಲಿಗೆ ತಲುಪಬಹುದು. ಇಲ್ಲಿಗೆ ತಲುಪಲು ಹವಾನಿಯಂತ್ರಿತ, ಸಾಮಾನ್ಯ ಸ್ಲೀಪರ್‌ ಬೋಗಿಯುಳ್ಳ ರೈಲಿನ ಸೇವೆಯ ಅನುಕೂಲ ಪಡೆಯಬಹುದು. ಕಡಿಮೆ ಬೆಲೆಯಲ್ಲಿ ರೈಲು ನಿಲ್ದಾಣಗಳಿಂದ ಪಲೋಡಿ ತಲುಪಲು ಕ್ಯಾಬ್‌ ಸೌಲಭ್ಯ ಚೆನ್ನಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೋದಪುರ ವಿಮಾನ ನಿಲ್ದಾಣ ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪಲೋಡಿಯಿಂದ 135 ಕಿ.ಮೀ. ದೂರದಲ್ಲಿ ಜೋದಪುರ ಇದೆ. ಇಲ್ಲಿಂದ ಕ್ಯಾಬ್‌ ಸೌಲಭ್ಯ ಉತ್ತಮವಾಗಿದೆ. ವಿದೇಶಿ ಪ್ರವಾಸಿಗರು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಲ್ಲಿಗೆ ತಲುಪುತ್ತಾರೆ. ಅಲ್ಲದೇ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಇಲ್ಲಿಗೆ ತಲುಪಲು ಬೆಂಗಳೂರು, ಗೌಹಾತಿ, ಚೆನ್ನೈ, ಕೋಲ್ಕತ್ತಾ, ಮುಂಬಯಿ ಸೇರಿದಂತೆ ಹಲವು ನಗರಗಳಿಂದ ಏರ್‌ಬಸ್‌ ಸೌಲಭ್ಯ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat